

ಮೇಷ: ಮಕ್ಕಳ ವಿಚಾರವಾಗಿ ಹರ್ಷದಾಯಕವಾದ ಸಮಾಚಾರ ಕೇಳಲಿದ್ದೀರಿ. ಸಂಗಾತಿಯ ಬಳಿ ಮಾತನಾಡುವಾಗ ಎಚ್ಚರ. ಶುಭಸಂಖ್ಯೆ: 8
ವೃಷಭ: ಸ್ವಲ್ಪ ಸೂಕ್ಷ್ಮ ಸ್ವರೂಪದ ಆರೋಗ್ಯವನ್ನು ಹೊಂದಿದ್ದೀರಿ. ಹೆಚ್ಚು ಆಯಾಸವಾಗುವಂಥ ಕೆಲಸ ಮಾಡಲು ಹೋಗದಿರಿ. ಶುಭಸಂಖ್ಯೆ: 2
ಮಿಥುನ: ಮನಸ್ಸಿನಲ್ಲಿ ಕೇವಲ ಚಿಂತೆಯ ಅಲೆಗಳೇ ಎದ್ದೇಳಬಹುದು. ಆಂಜನೇಯನನ್ನು ಭಜಿಸಿ. ನೆಮ್ಮದಿಯ ದಾರಿ ಲಭಿಸುತ್ತದೆ. ಶುಭಸಂಖ್ಯೆ: 5
ಕಟಕ: ಬಹುಕಾಲದ ಬಳಿಕ ವಿರಾಮದ ಅವಕಾಶ ದೊರೆಯಲಿದೆ. ಹೊಸದೇ ರೀತಿಯಲ್ಲಿನ ಗೆಲುವು ಕೂಡ ನಿಮ್ಮದಾಗಲಿದೆ. ಶುಭಸಂಖ್ಯೆ: 9
ಸಿಂಹ: ಬಂಧುಗಳ ಆಗಮನದಿಂದಾಗಿ ತುಸು ಕಿರಿಕಿರಿ ಉಂಟಾಗುತ್ತದೆ. ಅವರ ಮಾತಿಗೆ ಪ್ರತಿಯಾಗಿ ಮಾತು ಆಡದಿದ್ದರೆ ಒಳಿತಿದೆ. ಶುಭಸಂಖ್ಯೆ: 4
ಕನ್ಯಾ: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಮಾತು ನಿಜವಾದೀತು. ದುರ್ಗಾಂಬೆಯನ್ನು ಭಕ್ತಿಯಿಂದ ಸ್ತುತಿಸಿದರೆ ಉತ್ತಮ. ಶುಭಸಂಖ್ಯೆ: 7
ತುಲಾ: ವಿರೋಧಿಗಳ ಜತೆಗೆ ಕೆಲಸ ಮಾಡಬೇಕಾಗುತ್ತದೆ. ತಾಳ್ಮೆ ಕಳೆದುಕೊಳ್ಳದಿರಿ. ಸಮಾಧಾನದಿಂದ ಇದ್ದರೆ ಎಲ್ಲ ಕ್ಷೇಮಕರವಾಗಲಿದೆ. ಶುಭಸಂಖ್ಯೆ: 1
ವೃಶ್ಚಿಕ: ಅನೇಕ ಕಾರಣಗಳಿಂದಾಗಿ ಕೆಲಸದಲ್ಲಿ ಸ್ವಲ್ಪ ವಿಳಂಬವಾಗುತ್ತದೆ. ಆದರೂ ಜಾಣ್ಮೆಯಿಂದ ಸಮಸ್ಯೆಗಳನ್ನು ಬಿಡಿಸುವಿರಿ. ಶುಭಸಂಖ್ಯೆ: 6
ಧನುಸ್ಸು: ವೃತ್ತಿಯಲ್ಲಿ ಬದಲಾವಣೆಯ ಸಾಧ್ಯತೆ ಇದೆ. ಕಿರಿಯ ಸಹೋದ್ಯೋಗಿಗಳ ಜತೆ ಉತ್ತಮ ಸಂಬಂಧವನ್ನು ರೂಪಿಸಿಕೊಳ್ಳಿ. ಶುಭಸಂಖ್ಯೆ: 3
ಮಕರ: ಲಾಭದಲ್ಲಿ ದೊಡ್ಡ ಪಾಲು ಸಿಗಲಿದೆಯಾದರೂ ದುಷ್ಟರ ಕಣ್ಣು ಬೀಳಬಹುದು. ಹೀಗಾಗಿಯೇ ಜಾಣ್ಮೆಯಿಂದ ಪ್ರಯಾಣಿಸಿ. ಶುಭಸಂಖ್ಯೆ: 5
ಕುಂಭ: ದೈಹಿಕ ಹಾಗೂ ಮಾನಸಿಕವಾದ ಲವಲವಿಕೆ ಹೊಂದಲಿರುವಿರಿ. ಧನಲಾಭದ ಮಾರ್ಗದಲ್ಲಿ ನಿಮ್ಮ ಪ್ರಯಣ ಸಾಗಲಿದೆ. ಶುಭಸಂಖ್ಯೆ: 2
ಮೀನ: ಅನೇಕ ಆಕಾಂಕ್ಷೆಗಳನ್ನು ಸಾಕಾರ ಮಾಡಿಕೊಂಡ ನಿಮಗೆ, ಸದ್ಯ ಹರ್ಷಕ್ಕೆ ಕಾರಣವಾಗುವಂಥ ಹೊಸ ಬೆಳವಣಿಗೆ ಸಾಧ್ಯವಿದೆ. ಶುಭಸಂಖ್ಯೆ: 8