ಈ ರಾಶಿಯವರ ಸಂಗಾತಿಯ ಆರೋಗ್ಯ ಏರುಪೇರಾಗುವ ಸಾಧ್ಯತೆ ಇದೆ

Nitya-Bhavishya-vvani-1-2-1
Published on

ಮೇಷ: ವಿಶಾಲ ಮನೋಭಾವದ ನಿಮ್ಮನ್ನು ಧೂರ್ತರು ಮೋಸಗೊಳಿಸುವ ಸಾಧ್ಯತೆಗಳಿವೆ. ಹೀಗಾಗಿ ಮೈಮರೆಯದಿರಿ. ಶುಭಸಂಖ್ಯೆ: 3

ವೃಷಭ: ನಿಮ್ಮ ಹೊಸ ಕನಸನ್ನು ವಾಸ್ತವರೂಪಕ್ಕೆ ತರಲು ಹೇರಳ ಅವಕಾಶ ದೊರೆಯಲಿದೆ. ಸಮಯ ವ್ಯರ್ಥವಾಗದಿರಲಿ. ಶುಭಸಂಖ್ಯೆ: 9

ಮಿಥುನ: ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಡುವಂಥ ಕೆಲಸಕ್ಕೆ ಇಂದು ತಳಹದಿ ಸಿಗಲಿದೆ. ಶುಭಸಂಖ್ಯೆ: 5

ಕಟಕ: ಸಂಗಾತಿಯ ಆರೋಗ್ಯ ಏರುಪೇರಾಗುವ ಸಾಧ್ಯತೆ ಇದೆ. ಅವರ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಿ. ಶುಭಸಂಖ್ಯೆ: 1

ಸಿಂಹ: ಅತಿಥಿಗಳನ್ನು ಸ್ವಾಗತಿಸಿಯೇ ದಣಿವು ಉಂಟಾಗಬಹುದು. ಆದರೆ ಅವರಿಂದ ಉತ್ತಮ ಸಲಹೆ ಸಿಗಲಿದೆ. ಶುಭಸಂಖ್ಯೆ: 6

ಕನ್ಯಾ: ಯಾರೊಡನೆಯೂ ಮುಖ ಗಂಟಿಕ್ಕಿ ಮಾತಾಡದಿರಿ. ನಗುನಗುತ್ತಲೇ ಇತರರ ತಪ್ಪುಗಳನ್ನು ಎತ್ತಿ ತೋರಿಸಿ. ಶುಭಸಂಖ್ಯೆ: 4

ತುಲಾ: ನಿಮ್ಮನ್ನು ಸಫಲತೆಯ ಕಡೆಗೆ ಒಯ್ಯಲು ಅದೃಷ್ಟವು ಕಾತರಿಸಿದೆ. ಅಪಾರ ಅನುಭವವವೇ ನಿಮ್ಮ ಪಾಲಿನ ಶಕ್ತಿಯಾಗಿದೆ. ಶುಭಸಂಖ್ಯೆ: 2

ವೃಶ್ಚಿಕ: ಮನೆಯ ವಾತಾವರಣವನ್ನು ದೂರ ಮಾಡಿಕೊಳ್ಳದಿರಿ. ಮೊದಲು ಮನೆಯ ಸದಸ್ಯರ ವಿಶ್ವಾಸ ಗಳಿಸಿಕೊಳ್ಳಿ. ಶುಭಸಂಖ್ಯೆ: 8

ಧನಸ್ಸು: ಯಾರದೋ ಮಾತನ್ನು ಕೇಳಿ ಇನ್ಯಾರ ಬಗೆಗೋ ತಪ್ಪು ಭಾವನೆ ಹೊಂದದಿರಿ. ಆ ವ್ಯಕ್ತಿಯಿಂದ ಸಹಾಯ ಲಭ್ಯ. ಶುಭಸಂಖ್ಯೆ: 3

ಮಕರ: ಅಯೋಗ್ಯರ ಸಹವಾಸವನ್ನು ಕೂಡಲೇ ಕೈಬಿಡಿ. ನಿಮ್ಮ ಮುಂದಿನ ದಾರಿಗಳನ್ನು ಕಷ್ಟಕರ ಮಾಡಿಕೊಳ್ಳದಿರಿ. ಶುಭಸಂಖ್ಯೆ: 9

ಕುಂಭ: ಆಯಾಸದ ಅನುಭವ ಉಂಟಾಗದಂತೆ ಸಮಾಧಾನಚಿತ್ತ ಪ್ರದರ್ಶಿಸಿ. ಕಾರ್ಯದಲ್ಲಿ ತಂತಾನೇ ಸಾಫಲ್ಯ ಸಾಧ್ಯ. ಶುಭಸಂಖ್ಯೆ: 7

ಮೀನ: ಶಿವಾರಾಧನೆಯಿಂದ ಮಾನಸಿಕ ತಲ್ಲಣ ನಿಯಂತ್ರಣಕ್ಕೆ ಬರಲಿದೆ. ಹಣಕಾಸಿನ ಏರುಪೇರಿನ ಬಗ್ಗೆ ಚಿಂತೆ ಬೇಡ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net