

ಮೇಷ: ಸ್ವಯಂ ಉದ್ಯೋಗದಲ್ಲಿ ನಿರತರಾದವರು ಶುಭ ಸಮಾಚಾರವನ್ನು ಕೇಳಲಿದ್ದಾರೆ. ಲಾಭಕ್ಕೆ ಉತ್ತಮ ಅವಕಾಶವಿದೆ. ಶುಭಸಂಖ್ಯೆ: 7
ವೃಷಭ: ತಾರ್ಕಿಕ ಜಾಣತನ, ಶ್ರಮ ವಹಿಸಿ ದುಡಿಯುವ ಸಾಮರ್ಥ್ಯ ಇವುಗಳಿಂದ ವಿಶೆಷವಾದ ಮನ್ನಣೆ ಸಂಪಾದಿಸುವಿರಿ. ಶುಭಸಂಖ್ಯೆ: 5
ಮಿಥುನ: ಹಿಂಜರಿಕೆಯನ್ನು ಬಿಟ್ಟುಬಿಡಿ. ಧೈರ್ಯದಿಂದ ಮುನ್ನುಗ್ಗಿದರೆ ಮಾತ್ರವೇ ದೊಡ್ಡ ದೊಡ್ಡ ಅವಕಾಶಗಳು ಸಿಗಲಿವೆ. ಶುಭಸಂಖ್ಯೆ: 3
ಕಟಕ: ಅನಾರೋಗ್ಯದಿಂದ ಬಳಲುವ ಬದಲು ಆರೋಗ್ಯದ ಬಗ್ಗೆ ಎಚ್ಚರ ವಹಿಸುವುದು ಉತ್ತಮ. ಚಂದ್ರಸ್ತೋತ್ರ ಓದಿ. ಶುಭಸಂಖ್ಯೆ: 6
ಸಿಂಹ: ಮೃತ್ಯುಂಜಯನನ್ನು ಆರಾಧಿಸುವುದರಿಂದ ಕೈಗೊಂಡ ಕಾರ್ಯಗಳು ಶೀಘ್ರದಲ್ಲಿಯೇ ಸಫಲತೆಯನ್ನು ಹೊಂದಲಿವೆ. ಶುಭಸಂಖ್ಯೆ: 1
ಕನ್ಯಾ: ಕಲಾರಂಗದಲ್ಲಿ ಅವಕಾಶಗಳನ್ನು ಅರಸುವವರ ಪ್ರತಿಭೆಗೆ ತಕ್ಕಂತಹ ಮನ್ನಣೆ ಒದಗಲಿದೆ. ಕುಲದೇವರನ್ನು ಪ್ರಾರ್ಥಿಸಿ. ಶುಭಸಂಖ್ಯೆ: 8
ತುಲಾ: ನವದಂಪತಿಗಳು ಹಿರಿಯರ ಆಶೀರ್ವಾದವನ್ನು ಪಡೆಯಲಿದ್ದಾರೆ. ಪರಸ್ಪರ ಅರಿತು ಬಾಳಿದರೆ ಸಂತೋಷದಿಂದಿರುವಿರಿ. ಶುಭಸಂಖ್ಯೆ: 2
ವೃಶ್ಚಿಕ: ಶತ್ರುಗಳ ತಂತ್ರಗಳನ್ನು ಸರಿಸಿ ಗೆಲ್ಲಲು ರಾಜಕಾರಣಿಗಳಿಗೆ ಉತ್ತಮ ಅವಕಾಶಗಳಿವೆ. ಗುರುಸ್ತೋತ್ರವನ್ನು ಪಠಿಸಿ. ಶುಭಸಂಖ್ಯೆ: 4
ಧನಸ್ಸು: ಮೇಲಧಿಕಾರಿಗಳ ಜತೆಗೆ ಮಾತಾಡುವಾಗ ಎಚ್ಚರ ವಹಿಸಿ. ಖಂಡಿತ ಕಟು ವಿಮರ್ಶೆಯ ಮಾತುಗಳನ್ನು ಆಡದಿರಿ. ಶುಭಸಂಖ್ಯೆ: 9
ಮಕರ: ಮಕ್ಕಳ ವಿದ್ಯಾಭ್ಯಾಸದ ಕುರಿತ ಪ್ರಯತ್ನ ಸಫಲವಾಗುತ್ತದೆ. ಅವರನ್ನು ಕೂಡ ಅಕ್ಕರೆಯಿಂದಲೇ ನಡೆಸಿಕೊಳ್ಳಿ. ಶುಭಸಂಖ್ಯೆ: 7
ಕುಂಭ: ಅವಿವಾಹಿತರಿಗೆ ಹಿರಿಯ ಮಹಿಳೆಯೊಬ್ಬರ ಅಥವಾ ವೈವಾಹಿಕ ಕೇಂದ್ರಗಳ ಮೂಲಕ ಮಾರ್ಗದರ್ಶನ ಲಭಿಸಲಿದೆ. ಶುಭಸಂಖ್ಯೆ: 5
ಮೀನ: ಹಿಂಜರಿಕೆ ತೋರದಿರಿ. ಆತ್ಮವಿಶ್ವಾಸದಿಂದ ಮುನ್ನುಗ್ಗಿ ಶ್ರಮಪಡುವ ಉದ್ಯೋಗಿಗಳಿಗೆ ಯಶಸ್ಸು ದೊರೆಯಲಿದೆ. ಶುಭಸಂಖ್ಯೆ: 3