ನಿತ್ಯ ಭವಿಷ್ಯ: ಈ ರಾಶಿಯವರನ್ನು ಕೆಲವರು ಹೊಗಳಿ ಕೆಲಸ ಮಾಡಿಸಿಕೊಳ್ಳಲಾಗುತ್ತದೆ. ಮೋಸ ಹೋಗುವ ಸಾಧ್ಯತೆ. ಎಚ್ಚರವಾಗಿರಬೇಕು.

Nitya-Bhavishya-vvani-1-2-1
Published on

ಮೇಷ: ಹಿರಿಯರ ಜತೆಗಿನ ಮನಸ್ತಾಪ ಪರಿಹಾರ ಮಾಡಿಕೊಳ್ಳಲು ಅವಕಾಶ. ಔಷಧ ಪರಿಣಾಮಕಾರಿಯಾಗಿರಲಿದೆ. ಅದೃಷ್ಟಸಂಖ್ಯೆ: 3

ವೃಷಭ: ಕಚೇರಿಯಲ್ಲಿ ಪರದಾಟ. ಯಾರಿಂದ ಮಾರ್ಗದರ್ಶನ ಬಂದರೂ ಸ್ವೀಕರಿಸಿ. ಹಳೆಯ ನೆನಪುಗಳು ಕಾಡಬಹುದು.  ಅದೃಷ್ಟಸಂಖ್ಯೆ: 5

ಮಿಥುನ: ಹೊಗಳಿ ಕೆಲಸ ಮಾಡಿಸಿಕೊಳ್ಳಲಾಗುತ್ತದೆ. ಮೋಸ ಹೋಗುವ ಸಾಧ್ಯತೆ. ಎಚ್ಚರ ಅತಿ ಅವಶ್ಯವಾಗಿದೆ. ಅದೃಷ್ಟಸಂಖ್ಯೆ: 6

ಕಟಕ: ಸ್ವಲ್ಪ ಪ್ರಯತ್ನಿಸಿದರೆ ಬರಬೇಕಾದ ಹಣ ಬರುತ್ತದೆ. ಹಠ ಹಿಡಿಯುವ ನಿಮಗೆ ವಿಶ್ರಾಂತಿಗೆ ಅವಕಾಶಗಳು ಕಡಿಮೆ. ಅದೃಷ್ಟಸಂಖ್ಯೆ: 1

ಸಿಂಹ: ಶತ್ರುಗಳು ನಿಮ್ಮನ್ನು ನೋಡಿ ನಗಬಹುದು. ಉದ್ಯೋಗಸ್ಥಳದಲ್ಲಿ ಗೊಂದಲ, ಅವಮಾನ. ಮೌನವೇ ಉತ್ತಮವಾಗಿದೆ. ಅದೃಷ್ಟಸಂಖ್ಯೆ: 3

ಕನ್ಯಾ:  ವ್ಯಾಪಾರಿಗೆ ಲಾಭವಿಲ್ಲದ ಕೊರಗು. ಆದರೆ ದುರ್ಗಾದೇವಿಯ ದರ್ಶನದಿಂದ ಮಾನಸಿಕ ನೆಮ್ಮದಿ ಲಭಿಸಲಿದೆ. ಅದೃಷ್ಟಸಂಖ್ಯೆ: 7

ತುಲಾ: ಶತ್ರುಗಳು ಸುಳ್ಳು ಪ್ರಚಾರ ಮಾಡಬಹುದು. ಸಾಲ ಮಾಡಬೇಕಾದ ಪರಿಸ್ಥಿತಿ. ಆದರೆ ಉತ್ಸಾಹಕ್ಕೆ ಕೊರತೆಯಿಲ್ಲ. ಅದೃಷ್ಟಸಂಖ್ಯೆ: 4

ವೃಶ್ಚಿಕ: ಇತರರ ತಪ್ಪು ಹುಡುಕಿ ಜಗಳವಾದೀತು. ಮಾತು ಹಿಡಿತದಲ್ಲಿರಲಿ. ಸೊಂಟನೋವು, ಕಾಲುನೋವು ಕಾಡಬಹುದು. ಅದೃಷ್ಟಸಂಖ್ಯೆ: 9

ಧನಸ್ಸು: ಕೆಲ ವಿಚಾರಗಳ ಮಹತ್ವ ತಿಳಿಯದೆ ನಷ್ಟ. ಮಾತು ಗಂಭೀರವಾಗಿರಲಿ. ಸರ್ಕಾರಿ ಕೆಲಸಗಳನ್ನು ಒಪ್ಪಿಕೊಳ್ಳದಿರಿ. ಅದೃಷ್ಟಸಂಖ್ಯೆ: 6

ಮಕರ: ಬಹುಕಾಲದ ನಂತರ ಆತ್ಮೀಯರ ಭೇಟಿ. ಕೆಲವರಿಗೆ ನಿಮ್ಮ ಉಪಸ್ಥಿತಿ ಆಶ್ಚರ್ಯ ತಂದೀತು. ನೆಗಡಿಯ ಸಮಸ್ಯೆ ಬಂದೀತು. ಅದೃಷ್ಟಸಂಖ್ಯೆ: 2

ಕುಂಭ: ತಪ್ಪೊಪ್ಪಿ ಕ್ಷಮೆ ಕೇಳಿದರೆ ಲಾಭ. ಕೆಲವು ವಿಚಾರಗಳಿಗೆ ಕಾತರತೆ ಇದೆ. ದಿನಚರಿಯಲ್ಲಿ ದಿಢೀರ್ ಮಾರ್ಪಾಟು. ಅದೃಷ್ಟಸಂಖ್ಯೆ: 1

ಮೀನ: ಕೆಲವರ ಆಪ್ತ ಸ್ವಾಗತ ನಿಮಗೆ ಸಂತಸವನ್ನು ಉಂಟುಮಾಡುತ್ತದೆ. ಅದೇ ಗುಂಗಿನಲ್ಲಿ ತಪ್ಪು ನಿರ್ಧಾರ ಕೈಗೊಳ್ಳದಿರಿ. ಅದೃಷ್ಟಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net