ನಿತ್ಯ ಭವಿಷ್ಯ| ಈ ರಾಶಿಯವರ ದಾಂಪತ್ಯದಲ್ಲಿ ಪ್ರೀತಿಯ ಸಮಾಗಮ

NITYA-BHAVISHYA-300x200
Published on

ಮೇಷ: ಹಿಡಿದ ಕೆಲಸದಲ್ಲಿ ಯಶಸ್ಸು ಕಾಣುವಿರಿ. ಗುರುಗಳು ನೀಡಿದ ಉಪದೇಶದಿಂದ ನೆಮ್ಮದಿ. ಅವಿವಾಹಿತರಿಗೆ ವಿವಾಹ ಯೋಗ. ಶುಭಸಂಖ್ಯೆ: 9

ವೃಷಭ: ರಾಜಕೀಯ ವ್ಯಕ್ತಿಗಳಿಗೆ ತೊಂದರೆ. ಅಧಿಕ ಕೋಪ. ವ್ಯಾಪಾರಿಗಳಿಗೆ ಲಾಭ. ಅನವಶ್ಯಕ ಮಾತುಗಳಿಂದ ದೂರವಿರಿ. ಶುಭಸಂಖ್ಯೆ:1

ಮಿಥುನ: ದ್ರವರೂಪದ ವಸ್ತುಗಳಿಂದ ಲಾಭ. ಕಾರ್ಯ ಸಾಧನೆಗಾಗಿ ತಿರುಗಾಟ. ಸಾಲ ಮಾಡುವ ಸಾಧ್ಯತೆ. ದಾಯಾದಿ ಕಲಹ ಸಂಭವ. ಶುಭಸಂಖ್ಯೆ: 5

ಕಟಕ: ದುಷ್ಟರಿಂದ ದೂರವಿರಿ. ಅಲ್ಪ ಕಾರ್ಯಸಿದ್ಧಿ. ಸಾಧಾರಣ ಪ್ರಗತಿ. ಉದ್ಯೋಗದಲ್ಲಿ ಅಭಿವೃದ್ಧಿ. ನಾನಾ ರೀತಿಯ ತೊಂದರೆ. ಶುಭಸಂಖ್ಯೆ: 7

ಸಿಂಹ: ಆತ್ಮೀಯರಲ್ಲಿ ಕಲಹ. ಕಾರ್ಯಗಳಲ್ಲಿ ವಿಫಲತೆ ಯಿಂದ ಮನಸ್ಸಿಗೆ ಬೇಸರ. ಗುರು ಹಿರಿಯರ ದರ್ಶನ. ಸುಖ ಭೋಜನ. ಶುಭಸಂಖ್ಯೆ:4

ಕನ್ಯಾ: ಸೌಖ್ಯಕ್ಕೆ ಧಕ್ಕೆ. ವಿಪರೀತ ವ್ಯಸನ ಒಳ್ಳೆಯದಲ್ಲ. ವಾಹನ ರಿಪೇರಿ. ನೀಚ ಜನರಿಂದ ದೂರವಿರಿ. ಗುಪ್ತ ವಿದ್ಯೆಗಳಲ್ಲಿ ಆಸಕ್ತಿ. ಶುಭಸಂಖ್ಯೆ: 8

ತುಲಾ: ಅಪವಾದ ಕೇಳಬೇಕಾಗಬಹುದು. ಮಾನಹಾನಿ ಸಾಧ್ಯತೆ. ಥಳುಕಿನ ಮಾತಿಗೆ ಮರುಳಾಗದಿರಿ. ಖರೀದಿಯಲ್ಲಿ ಮೋಸವಾದೀತು. ಶುಭಸಂಖ್ಯೆ: 4

ವೃಶ್ಚಿಕ: ವಿಧೇಯತೆಯಿಂದ ಯಶಸ್ಸು. ದಾಂಪತ್ಯದಲ್ಲಿ ಪ್ರೀತಿಯ ಸಮಾಗಮ. ವ್ಯಸನಕ್ಕೆ ಹಣ ವ್ಯಯ ಮಾಡಲು ಹೋಗಬೇಡಿ. ಶುಭಸಂಖ್ಯೆ: 6

ಧನುಸ್ಸು: ಮಾತಿನ ಚಕಮಕಿ ವಿಪರೀತಕ್ಕೆ ಹೋದೀತು. ಅತಿಯಾದ ನಿದ್ರೆ. ಮಕ್ಕಳಿಂದ ನೋವು. ನಾನಾ ವಿಚಾರಗಳಲ್ಲಿ ಆಸಕ್ತಿ. ಶುಭಸಂಖ್ಯೆ: 2

ಮಕರ: ದಿನಸಿ ವ್ಯಾಪಾರಗಳಿಗೆ ಲಾಭ. ಹಿತೈಷಿಗಳಿಂದ ಪ್ರಶಂಸೆ. ಶತ್ರು ನಾಶ. ಎಲೆಕ್ಟ್ರಾನಿಕ್ ಉಪಕರಣಗಳಿಂದ ಲಾಭ. ಶುಭಸಂಖ್ಯೆ: 1

ಕುಂಭ: ಷೇರು ವ್ಯವಹಾರಗಳಿಂದ ಲಾಭ. ಶೀತಸಂಬಂಧೀ ರೋಗ ಕಾಡಬಹುದು. ಪ್ರಯತ್ನದಿಂದ ಕಾರ್ಯಸಿದ್ಧಿ. ಮಾನಸಿಕ ನೆಮ್ಮದಿ. ಶುಭಸಂಖ್ಯೆ: 5

ಮೀನ: ಹಣ ಬಂದರೂ ಉಳಿಯುವುದಿಲ್ಲ. ಪ್ರತಿಭೆಗೆ ತಕ್ಕ ಫಲ ದೊರೆತು ಸಂತಸ. ವಿಪರೀತ ಖರ್ಚು. ಉತ್ತಮ ವಹಿವಾಟು. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net