ನಿತ್ಯ ಭವಿಷ್ಯ: ಈ ರಾಶಿಯವರಿಗೆ ಮಾನಸಿಕ ದುಗುಡದಿಂದ ಜೀವನದಲ್ಲಿ ನಿರುತ್ಸಾಹ ಮೂಡಬಹುದು

Nithya Bhavishya
Published on

ಮೇಷ: ಬಹಳ ಪ್ರಾಮಾಣಿಕತೆಯಿಂದ ಹೆಜ್ಜೆಗಳನ್ನು ಇರಿಸಿದ ಪರಿಣಾಮವಾಗಿ ಎಲ್ಲೆಡೆಯೂ ಯಶಸ್ಸು ನಿಮ್ಮದಾಗುವುದು. ಶುಭಸಂಖ್ಯೆ: 7

ವೃಷಭ: ಗ್ರಹಗಳ ಶುಭಸಂಚಾರದಿಂದ ಹಮ್ಮಿಕೊಂಡ ಕಾರ್ಯಗಳು ಸರಾಗವಾಗಿ ಸಾಗಲಿವೆ. ಅನಗತ್ಯ ಟೀಕೆಗಳಿಂದ ಮುಕ್ತಿ. ಶುಭಸಂಖ್ಯೆ: 9

ಮಿಥುನ: ಗುರುಹಿರಿಯರ ಆಶೀರ್ವಾದ, ಸಲಹೆಗಳನ್ನು ಪಡೆದುಕೊಂಡಲ್ಲಿ ಮಾನಸಿಕ ದುಗುಡಗಳಿಗೆ ಪರಿಹಾರ ಸಿಗಲಿದೆ. ಶುಭಸಂಖ್ಯೆ: 4

ಕಟಕ: ಮಕ್ಕಳ ವಿದ್ಯಾಭ್ಯಾಸದ ಬಗೆಗೆ ವ್ಯಾಕುಲತೆ ತಲೆದೋರುವ ಸಾಧ್ಯತೆ ಇದೆ. ಮಾರುತಿ ಸ್ತುತಿ ಮಾಡಿ. ಒಳಿತಾಗಲಿದೆ. ಶುಭಸಂಖ್ಯೆ: 6

ಸಿಂಹ: ದೂರದ ಊರಿನಿಂದ ಬಂದ ಅತಿಥಿಯೊಬ್ಬರು ನಿಮ್ಮ ವಹಿವಾಟಿನ ವಿಷಯದಲ್ಲಿ ಉತ್ತಮ ಸಲಹೆ ನೀಡಲಿದ್ದಾರೆ. ಶುಭಸಂಖ್ಯೆ: 1

ಕನ್ಯಾ: ಆಪತ್ಕಾಲದಲ್ಲಿ ಸಹಾಯ ಮಾಡುವವನೇ ನಿಜವಾದ ಮಿತ್ರ. ಆತನ ಮಾತನ್ನು ಸಂತೋಷದಿಂದ ಪಾಲಿಸಿ. ಶುಭಸಂಖ್ಯೆ: 3

ತುಲಾ: ಮಾನಸಿಕ ದುಗುಡ ಆವರಿಸುವುದರಿಂದ ಜೀವನದಲ್ಲಿ ನಿರುತ್ಸಾಹ ಮೂಡುವುದು. ಕುಲದೇವರನ್ನು ಪ್ರಾರ್ಥಿಸಿ. ಶುಭಸಂಖ್ಯೆ: 8

ವೃಶ್ಚಿಕ: ನೀವು ಪಟ್ಟ ಅಪಾರ ಪರಿಶ್ರಮವು ನಿಮಗೆ ಶುಭಫಲವನ್ನೇ ತಂದುಕೊಡುವುದು. ಆದರೆ ಸ್ವಲ್ಪ ಕಿರಿಕಿರಿ ಇರುತ್ತದೆ. ಶುಭಸಂಖ್ಯೆ: 5

ಧನಸ್ಸು: ಯಾವುದೇ ಥರದ ಹಸ್ತಕ್ಷೇಪ ಸಹಿಸದಿರಿ. ಶಿವನನ್ನು ಸ್ಮರಿಸಿ ಕಾರ್ಯೋನ್ಮುಖರಾಗಿ. ಒಳಿತಿಗೆ ದಾರಿ ಇದೆ. ಶುಭಸಂಖ್ಯೆ: 2

ಮಕರ: ಹಲವು ಹೊಸತನಗಳನ್ನು ರೂಢಿಸಿಕೊಳ್ಳಲು ಸಕಾಲವಾಗಿದೆ. ಅದಕ್ಕಾಗಿ ಸ್ವಲ್ಪ ಖರ್ಚು ಮಾಡಬೇಕಾಗುವುದು. ಶುಭಸಂಖ್ಯೆ: 7

ಕುಂಭ: ಹತ್ತಿರದವರೇ ನಿಮ್ಮನ್ನು ಯಾಮಾರಿಸುವ ಸಾಧ್ಯತೆ ಇದ್ದರೂ ವಿಚಲಿತರಾಗದಿರಿ. ಅದೃಷ್ಟವು ನಿಮ್ಮ ಜತೆಗೆ ಇದೆ. ಶುಭಸಂಖ್ಯೆ: 9

ಮೀನ: ಹಣ ಇಮ್ಮಡಿಗೊಳಿಸುವ ಮೋಸದ ಜಾಲ ನಿಮ್ಮ ದಾರಿ ತಪ್ಪಿಸುವ ಸಾಧ್ಯತೆಯಿದೆ. ಆದಷ್ಟು ವ್ಯವಧಾನ ಇರಲಿ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net