ಈ ರಾಶಿಯವರಿಗೆ ಇಂದು ಕೆಲಸದ ಸ್ಥಳದಲ್ಲಿ ಸ್ವಲ್ಪ ಬದಲಾವಣೆ ಇರುತ್ತದೆ

Nitya-Bhavishya-vvani-1-2-1
Published on

ಮೇಷ: ಉನ್ನತ ವಿದ್ಯಾಭ್ಯಾಸಕ್ಕೆ ಉತ್ತಮ ಅವಕಾಶ ಎದುರಾಗಲಿದೆ. ಮಾತಿನಿಂದ ತೊಂದರೆಗೆ ಸಿಲುಕುವಿರಿ. ಎಚ್ಚರ. ಶುಭಸಂಖ್ಯೆ: 3

ವೃಷಭ: ನಿಮ್ಮ ಕಾರ್ಯದ ವಿವರವನ್ನು ಸಹೋದ್ಯೋಗಿಯೊಂದಿಗೆ ಹಂಚಿಕೊಳ್ಳಿ. ಅವರ ಸಲಹೆ, ಸಹಕಾರ ನೀಡುವರು. ಶುಭಸಂಖ್ಯೆ: 6

ಮಿಥುನ: ಯಾರೋ ನಿಮಗೆ ಈ ಕ್ಷಣದಲ್ಲಿ ನೆರವಾಗಲಿಲ್ಲ ಎಂಬ ಬೇಸರ ಬೇಡ. ಯಾರನ್ನೂ ದೂರ ಮಾಡಿಕೊಳ್ಳದಿರಿ. ಶುಭಸಂಖ್ಯೆ: 1

ಕಟಕ: ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯ ಉಂಟಾಗಬಹುದು. ಕೆಲಸಕಾರ್ಯಗಳಲ್ಲಿ ಅಡೆತಡೆ. ಹಿರಿಯರ ಸಲಹೆ ಸ್ವೀಕರಿಸಿ. ಶುಭಸಂಖ್ಯೆ: 9

ಸಿಂಹ: ಅನಿರೀಕ್ಷಿತ ಘಟನೆಗಳಿಂದ ವ್ಯಥೆಪಡುವಿರಿ. ನಿರುದ್ಯೋಗಿಗಳಿಗೆ ಉದ್ಯೋಗದ ಆಸೆ ಈಡೇರುವ ಸಾಧ್ಯತೆಯಿದೆ. ಶುಭಸಂಖ್ಯೆ: 5

ಕನ್ಯಾ: ತಾಳ್ಮೆಯಿಂದ ಇರಲು ಯತ್ನಿಸಿದರೂ ಸನ್ನಿವೇಶ ಕೆರಳಿಸುವುದು. ಮನೆಯ ಸದಸ್ಯರ ಮೇಲೆ ಕೋಪ ಮಾಡದಿರಿ. ಶುಭಸಂಖ್ಯೆ: 2

ತುಲಾ: ಕಾರ್ಯಗಳು ಸುಗಮವಾಗಿ ನೆರವೇರುತ್ತವೆ. ಪ್ರಯಾಣ ಅನಿವಾರ್ಯವಾದರೆ ಎಚ್ಚರಿಕೆ ಅಗತ್ಯ. ಕುಲದೇವರನ್ನು ಸ್ಮರಿಸಿ. ಶುಭಸಂಖ್ಯೆ: 6

ವೃಶ್ಚಿಕ: ಕೆಲಸದ ಸ್ಥಳದಲ್ಲಿ ಸ್ವಲ್ಪ ಬದಲಾವಣೆ. ಹೊಸ ಕಾರ್ಯಯೋಜನೆಗಾಗಿ ಪೂರ್ವಸಿದ್ಧತೆ ಮಾಡಿಕೊಳ್ಳುವುದು ಉತ್ತಮ. ಶುಭಸಂಖ್ಯೆ: 3

ಧನಸ್ಸು: ವಾತಾವರಣ ವ್ಯತ್ಯಾಸದಿಂದ ಅನಾರೋಗ್ಯ ಕಾಣಿಸಬಹುದು. ಆಹಾರಸೇವನೆಯಲ್ಲಿ ತುಸು ಜಾಗರೂಕರಾಗಿರಿ. ಶುಭಸಂಖ್ಯೆ: 8

ಮಕರ: ಅನವಶ್ಯಕವಾಗಿ ಕೆಲವರನ್ನು ಹೆಗಲಿಗೆ ಏರಿಸಿಕೊಳ್ಳುವ ತಪ್ಪು ಮಾಡಬೇಡಿ. ಅಪರಿಚಿತರೊಡನೆ ಸಲುಗೆ ಬೇಡ. ಶುಭಸಂಖ್ಯೆ: 4

ಕುಂಭ: ಅಂತರಂಗದ ಕೆಲವು ಗುಟ್ಟುಗಳನ್ನು ಬಿಟ್ಟು ಕೊಡಬೇಡಿ. ಇದರಿಂದ ಉತ್ಕರ್ಷಕ್ಕೆ ಹೊಸ ದಾರಿ ದೊರೆಯುವುದು. ಶುಭಸಂಖ್ಯೆ: 7

ಮೀನ: ನೆರೆಹೊರೆಯವರ ಸೌಹಾರ್ದತೆಯಿಂದಾಗಿ ಬಾಕಿ ಇರುವ ಕೆಲಸ ಸಫಲವಾಗಲಿದೆ. ಮಿತ್ರರ ನೆರವು ಲಭ್ಯ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net