ನಿತ್ಯ ಭವಿಷ್ಯ: ಈ ರಾಶಿಯವರಿಗಿದೆ ಸಕಾರಾತ್ಮಕ ಯೋಚನೆಗಳ ಕಡೆ ಸಾಗುವ ಅಪರೂಪದ ಉತ್ಸಾಹ

Nitya-Bhavishya-vvani-1-2
Published on

ಮೇಷ: ನಕಾರಾತ್ಮಕ ಯೋಚನೆಗಳಿಂದ ಸಕಾರಾತ್ಮಕ ಯೋಚನೆಗಳ ಕಡೆ ಸಾಗುವ ಅಪರೂಪದ ಉತ್ಸಾಹ ಒದಗಿಬರಲಿದೆ. ಶುಭಸಂಖ್ಯೆ: 7

ವೃಷಭ: ಕುಳಿತಲ್ಲೇ ಕುಳಿತಿದ್ದರೆ ಏನೂ ಪ್ರಯೋಜನ ಇಲ್ಲ. ಓಡುವವರಿಗೆ ಗೆಲುವು ಸಾಧಿಸಲು ಸಾಧ್ಯವಿದೆ. ನಂಬಿಕೆ ಇದ್ದಿರಲಿ. ಶುಭಸಂಖ್ಯೆ: 9

ಮಿಥುನ: ಎಲ್ಲ ಸಲವೂ ಎಲ್ಲರನ್ನೂ ನಂಬಿ ಬಿಡುವ ಒಳ್ಳೆಯತನ ಉತ್ತಮವಾದುದಲ್ಲ. ಈ ಬಗ್ಗೆ ಹೆಚ್ಚಿನ ಕಾಳಜಿಯೇ ಬೇಕಿದೆ. ಶುಭಸಂಖ್ಯೆ: 5

ಕಟಕ: ವಂಚಕರ ಬಗ್ಗೆ ಎಚ್ಚರ ವಹಿಸಲೇಬೇಕು. ನಿಮ್ಮನ್ನು ಸೋಲಿಸಲು ಪಣ ತೊಟ್ಟವರನ್ನು ಹತ್ತಿರಕ್ಕೆ ಸೇರಿಸಿಕೊಳ್ಳಬೇಡಿ. ಶುಭಸಂಖ್ಯೆ: 8

ಸಿಂಹ: ಮನಸ್ಸಿನ ಸಂಕಲ್ಪಗಳನ್ನು ಈಡೇರಿಸಿ ಹೆಚ್ಚಿನ ಯಶಸ್ಸನ್ನು ತಂದುಕೊಡಲು ಕುಲದೇವರನ್ನು ಭಕ್ತಿಯಿಂದ ಪ್ರಾರ್ಥಿಸಿಕೊಳ್ಳಿ. ಶುಭಸಂಖ್ಯೆ: 6

ಕನ್ಯಾ: ಬೇಡಿದ್ದನ್ನು ನೀಡುವ ಶಿವನನ್ನು ಶ್ರದ್ಧೆಯಿಂದ ಸ್ತುತಿಸಿ. ಆರೋಗ್ಯ, ಮಾನಸಿಕ ಶಾಂತಿ, ನೆಮ್ಮದಿಗಳು ಲಭ್ಯವಾಗಲಿವೆ. ಶುಭಸಂಖ್ಯೆ: 4

ತುಲಾ: ಎಷ್ಟೋ ದಿನಗಳಿಂದ ಕಾಡುತ್ತಿದ್ದ ಸಮಸ್ಯೆ ಶೀಘ್ರದಲ್ಲೇ ಬಗೆಹರಿಯಲಿದೆ. ನೀವು ಸಮಾಧಾನ ಹೊಂದಬಹುದು. ಶುಭಸಂಖ್ಯೆ: 2

ವೃಶ್ಚಿಕ: ಸಿನಿಮಾ ಕಲಾವಿದರು, ರಾಜಕಾರಣಿಗಳಿಗೆ ತುಸು ಹಿನ್ನಡೆಯೇ ಆಗಬಹುದು. ಆದರೆ ಒಳಿತಿನ ಕೆಲಸವನ್ನು ಬಿಡದಿರಿ. ಶುಭಸಂಖ್ಯೆ: 1

ಧನುಸ್ಸು: ಅಕ್ಕಪಕ್ಕದವರಿಂದ ಕಿರಿಕಿರಿ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ತಾಳ್ಮೆಯೇ ನಿಮ್ಮ ಪಾಲಿನ ಅಸ್ತ್ರವಾಗಿರಲಿ. ಶುಭಸಂಖ್ಯೆ: 3

ಮಕರ: ಹಿರಿಯ ತಲೆಮಾರಿನವರ ಆಸ್ತಿಗೆ ಸಂಬಂಧಪಟ್ಟ ವಿಚಾರದಲ್ಲಿ ಒಳಿತಿನ ವಿಚಾರವೊಂದು ಬಹು ಬೇಗನೆ ಒದಗಿಬರಲಿದೆ. ಶುಭಸಂಖ್ಯೆ: 5

ಕುಂಭ: ವಿವಾಹಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಮುನ್ನಡೆ ಸಾಧಿಸಲಿದ್ದೀರಿ. ವಿನಮ್ರತೆಯಿಂದ ಪಾರ್ವತಿಯನ್ನು ಪ್ರಾರ್ಥಿಸಿ. ಶುಭಸಂಖ್ಯೆ: 7

ಮೀನ: ಮಕ್ಕಳಿಂದ ಬರಿಯ ಕಿರಿಕಿರಿ ಎಂಬಂತಹ ಮನೋಭಾವನೆ ಬೇಡವೇ ಬೇಡ. ಅವರಿಂದ ಶುಭ ವಾರ್ತೆ ದೊರೆಯಲಿದೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net