ನಿತ್ಯ ಭವಿಷ್ಯ: ಈ ರಾಶಿಯವರು ಭಕ್ತಿಯಿಂದ ಶಿವನನ್ನು ಸ್ತುತಿಸಬೇಕು

Nithya Bhavishya vvani
Published on

ಮೇಷ: ಮಾತು ಎಷ್ಟೇ ಮೃದುವಾಗಿದ್ದರೂ ಅದನ್ನು ಕೇಳುವ ಜನ ಸಹೃದಯಿಗಳಲ್ಲ. ವ್ಯರ್ಥ ಮಾತಾಡಲು ಹೋಗದಿರಿ. ಶುಭಸಂಖ್ಯೆ: 7

ವೃಷಭ: ಜನರು ನಿಮ್ಮ ಬಗೆಗೆ ಅಪಾರ ಗೌರವ ಆದರಗಳನ್ನು ಹೊಂದಿದ್ದಾರೆ. ನೀವು ನೀಡುವ ಸಲಹೆಗಳಿಗೆ ಮನ್ನಣೆ ಇದೆ. ಶುಭಸಂಖ್ಯೆ: 9

ಮಿಥುನ: ದೂರದ ಊರಿನಿಂದ ಬಂದ ಬಾಂಧವರು ನಿಮ್ಮೊಡನೆ ವಾದ ಮಾಡಬಹುದು. ಆದಷ್ಟು ಸಮಾಧಾನಿಯಾಗಿರಿ. ಶುಭಸಂಖ್ಯೆ: 4

ಕಟಕ: ಉನ್ನತವಾದ ಸ್ಥಾನದಲ್ಲಿದ್ದೀರಿ. ಹೀಗಾಗಿ ನೀವು ಆಡುವಂತಹ ಮಾತುಗಳ ತೂಕ ಕೂಡ ತಪ್ಪದಿದ್ದರೆ ಉತ್ತಮ. ಶುಭಸಂಖ್ಯೆ: 6

ಸಿಂಹ: ಮಕ್ಕಳು ಭಕ್ತಿಯಿಂದ ಶಿವನ ಸ್ತುತಿ ಮಾಡಲಿ. ಇದರಿಂದಾಗಿ ಓದಿನಲ್ಲಿ ವಿಶೇಷವಾದ ಏಕಾಗ್ರತೆ ಸಾಧ್ಯವಾಗಲಿದೆ. ಶುಭಸಂಖ್ಯೆ: 1

ಕನ್ಯಾ: ನಿಮ್ಮ ಒಳಹೊರಗುಗಳನ್ನು ಸಮಚಿತ್ತದಿಂದಲೇ ನಿಭಾಯಿಸಿ. ತೊಂದರೆ ಕೊಡುವವರ ಬಗ್ಗೆ ಜಾಗ್ರತೆಯಿಂದಿರಿ. ಶುಭಸಂಖ್ಯೆ: 3

ತುಲಾ: ಬೇರೆಯವರ ಗುಟ್ಟಿನ ವಿಚಾರಗಳ ಬಗ್ಗೆ ಬಹಿರಂಗವಾಗಿ ಮಾತನಾಡದಿರಿ. ನಿಮ್ಮಿಂದ ಪರರಿಗೆ ಕಷ್ಟವಾಗದಿರಿಲಿ. ಶುಭಸಂಖ್ಯೆ: 8

ವೃಶ್ಚಿಕ: ನಿಮ್ಮ ಬುದ್ಧಿವಂತಿಕೆಯ ಮಹತ್ವ ನಿಮಗೇ ಅರಿವಿಲ್ಲ. ಧೈರ್ಯದಿಂದ ಮುನ್ನಡೆದರೆ ಯಶಸ್ಸು ಸಿದ್ಧಿಸಲಿದೆ. ಶುಭಸಂಖ್ಯೆ: 5

ಧನಸ್ಸು: ಹಳೆಯ ಅನಗತ್ಯ ಕಡತಗಳನ್ನು ವಿಂಗಡಿಸುವ ಭರದಲ್ಲಿ ಬಹು ಮುಖ್ಯ ಎನಿಸಿದಂತಹ ಕಡತಗಳನ್ನು ಬಿಸಾಡದಿರಿ. ಶುಭಸಂಖ್ಯೆ: 2

ಮಕರ: ಹಣವು ಎಂದೂ ತಾನಾಗಿಯೇ ನಿಮ್ಮ ಬಳಿಗೆ ಬಂದುಬಿಡುವುದಿಲ್ಲ. ನಿರರ್ಥಕ ವಸ್ತುಗಳಿಗಾಗಿ ಹಣವನ್ನು ವ್ಯರ್ಥ ಮಾಡದಿರಿ. ಶುಭಸಂಖ್ಯೆ: 7

ಕುಂಭ: ಎಲ್ಲರನ್ನೂ ಪ್ರೀತಿಯಿಂದ ಗೆಲ್ಲಬೇಕೆಂಬ ಮಾತಿನ ಮಹತ್ವ ತಿಳಿದುಬರಲಿದೆ. ಆಶಾಭಾವವನ್ನು ಬಿಡದಿರಿ. ಶುಭಸಂಖ್ಯೆ: 9

ಮೀನ: ನಿಮ್ಮ ಬಗ್ಗೆ ಕೆಲವರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರೂ ಆಂತರಿಕ ಗಟ್ಟಿತನ ಇರಲಿ. ಇದರಿಂದ ಒಳಿತಾಗಲಿದೆ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net