ನಿತ್ಯ ಭವಿಷ್ಯ: ಈ ರಾಶಿಯವರಿಗೆ ಯಾರದ್ದೋ ನೆನಪು ಬಹಳ ಕಾಡುತ್ತದೆ. ಅವರನ್ನು ನೋಡಬೇಕೆನಿಸಿದರೂ ಕಾರ್ಯದ ಒತ್ತಡದಿಂದ ಅಸಾಧ್ಯ.

Nitya-Bhavishya-vvani-1-2-1
Published on

ಮೇಷ: ಆತುರದ ಕೆಲಸ ಅಥವಾ ನಿರ್ಧಾರ ವ್ಯತಿರಿಕ್ತ ಪರಿಣಾಮ ಬೀರಬಹುದು. ತಾಳ್ಮೆ ಇರಲಿ. ಅನುಭವಿಗಳ ಮಾತು ಕೇಳಿ. ಅದೃಷ್ಟಸಂಖ್ಯೆ: 6

ವೃಷಭ: ದಿನಪೂರ್ತಿ ಯಾವುದೋ ಒಂದು ಬಗೆಯ ಅನುಮಾನ ಕಾಡುತ್ತದೆ. ಮನಸ್ಸು ಸಮಾಧಾನ ಹೊಂದದು ಎನಿಸುತ್ತದೆ. ಅದೃಷ್ಟಸಂಖ್ಯೆ: 1

ಮಿಥುನ: ಬಹಳ ದಿನ ನೆನಪಿನಲ್ಲಿರುವ ಸಹಾಯವನ್ನು ಸ್ನೇಹಿತರು ಮಾಡುವರು. ಅದು ಸಾಂರ್ದಭಿಕ ನೆರವು ಕೂಡ ಆಗಬಹುದು. ಅದೃಷ್ಟಸಂಖ್ಯೆ: 5

ಕಟಕ: ಯಾರದ್ದೋ ನೆನಪು ಬಹಳ ಕಾಡುತ್ತದೆ. ಅವರನ್ನು ನೋಡಬೇಕೆನಿಸಿದರೂ ಕಾರ್ಯದ ಒತ್ತಡದಿಂದ ಅಸಾಧ್ಯ. ಅದೃಷ್ಟಸಂಖ್ಯೆ: 2

ಸಿಂಹ: ಆಲಸ್ಯ ಬಹಳ ಕಾಡುತ್ತದೆ. ವೈರಾಗ್ಯದ ಮಾತುಗಳನ್ನು ಆಡುತ್ತೀರಿ. ಒತ್ತಾಯದಿಂದ ಕೆಲಸ ಮಾಡಬೇಕಾಗುತ್ತದೆ. ಅದೃಷ್ಟಸಂಖ್ಯೆ: 7

ಕನ್ಯಾ: ಮೊದಲು ಯಾವುದನ್ನು ಮಾಡಬೇಕೆಂದು ತಿಳಿಯದಷ್ಟು ಕೆಲಸಗಳಿವೆ. ಚಿಂತನೆ ಮಾಡಿ ಮುಂದುವರಿಯಿರಿ. ಅದೃಷ್ಟಸಂಖ್ಯೆ: 4

ತುಲಾ: ಸಮಯ ಅಥವಾ ವ್ಯಕ್ತಿಗಳ ಉಪಯೋಗ ಮಾಡಿಕೊಳ್ಳುವ ನಿಮ್ಮ ಜಾಣ್ಮೆ ಇಂದು ಪ್ರಯೋಜನಕ್ಕೆ ಬರಲಿದೆ. ಅದೃಷ್ಟಸಂಖ್ಯೆ: 7

ವೃಶ್ಚಿಕ: ಸ್ತ್ರೀಯರ ಪಾಲಿಗೆ ಸಂತಸದ ದಿನವಾದರೆ ಗಂಡಸರಿಗೆ ಸ್ವಲ್ಪ ಬೇಸರ, ಕೋಪ ಬಂದೀತು. ಮುಖ್ಯ ನಿರ್ಧಾರ ಬೇಡ. ಅದೃಷ್ಟಸಂಖ್ಯೆ: 9

ಧನಸ್ಸು: ನಿರುದ್ಯೋಗಿಗಳು ಕೆಲಸಕ್ಕೆ ಯತ್ನಿಸಿದರೆ ಯಶಸ್ಸಿದೆ. ಕಚೇರಿಯಲ್ಲಿ ಮೇಲಧಿಕಾರಿಗಳು ಬಹಳ ಗಮನಿಸುತ್ತಾರೆ. ಅದೃಷ್ಟಸಂಖ್ಯೆ: 5

ಮಕರ: ಎಷ್ಟೇ ಕಷ್ಟವಾದರೂ ಕೆಲಸ ಮುಗಿಸುವೆನೆಂಬ ಮನೋಭಾವ ಇರಲಿ. ನಿತ್ಯದ ಕಾರಣಗಳನ್ನು ಕೊಟ್ಟು ತಪ್ಪಿಸಿಕೊಳ್ಳಬೇಡಿ. ಅದೃಷ್ಟಸಂಖ್ಯೆ: 1

ಕುಂಭ: ಯಾರಿಂದ ಸಹಾಯ ಸಿಗದು ಎಂದು ತಾತ್ಸಾರ ಮಾಡಿದ್ದಿರೋ ಅವರೇ ಪ್ರಮುಖ ಕೆಲಸ ಮಾಡಿಕೊಡಲಿದ್ದಾರೆ. ಅದೃಷ್ಟಸಂಖ್ಯೆ: 6

ಮೀನ: ಇಷ್ಟು ದಿನ ಗೊತ್ತೇ ಇಲ್ಲದ ಹೊಸ ವಿಚಾರಗಳನ್ನು ಕಲಿಯುವಿರಿ. ಗುರುಗಳನ್ನು ಬಹಳ ನೆನೆಯಲಿದ್ದೀರಿ. ಅದೃಷ್ಟಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net