ಗೆದ್ದವರೆಲ್ಲ ಜಾಣರು ಎಂಬ ತಪ್ಪು ಕಲ್ಪನೆಯನ್ನು ಬಿಡಿ. ಸತತ ಪರಿಶ್ರಮ ಹಾಗೂ ದೇವರ ಕೃಪೆಯಿಂದ ಗೆಲ್ಲುವಿರಿ. ಶುಭಸಂಖ್ಯೆ: 7.ವಿನೂತನ ಬಗೆಯಲ್ಲಿ ಯಶಸ್ಸನ್ನು ಸಾಧಿಸುವ ಮೂಲಕ ಜೀವನದಲ್ಲಿ ಧನ್ಯತೆಯ ಕ್ಷಣವನ್ನು ಅನುಭವಿಸಲಿದ್ದೀರಿ. ಶುಭಸಂಖ್ಯೆ: 9.ಕಚೇರಿಯಲ್ಲಿ ಮೇಲಿನ ಅಧಿಕಾರಿಗಳು, ಸಹೋದ್ಯೋಗಿಗಳು ನಿಮ್ಮನ್ನು ಆದರದಿಂದ ಕಾಣುವ ಸಾಧ್ಯತೆ ಹೆಚ್ಚಿದೆ. ಶುಭಸಂಖ್ಯೆ: 8.ವಂಚಕರು ನಿಮ್ಮನ್ನು ಭೇಟಿಯಾಗಬಹುದು. ಅವರನ್ನು ದೂರ ಮಾಡುವುದು ಕಷ್ಟವಾದರೂ ಸ್ವಲ್ಪ ಎಚ್ಚರ ವಹಿಸಿ. ಶುಭಸಂಖ್ಯೆ: 6.ಭೂಸಂಬಂಧಿ ವಿವಾದಗಳ ಬಗೆಗಿನ ಒತ್ತಡವು ಹಿರಿಯರ ನೆರವಿನಿಂದ ಬೇಗ ಕೊನೆಗೊಳ್ಳುವ ಅವಕಾಶವಿದೆ. ಶುಭಸಂಖ್ಯೆ: 4.ಹನಿ ಹನಿಗೂಡಿ ಹಳ್ಳ ಎಂಬ ಮಾತನ್ನು ನೆನಪಿಸಿಕೊಳ್ಳಿ. ಅನಗತ್ಯವಾದ ಖರ್ಚುಗಳನ್ನು ನಿಯಂತ್ರಿಸಲು ಸಕಾಲ. ಶುಭಸಂಖ್ಯೆ: 3.ದುಶ್ಚಟಗಳಿಂದಾಗಿ ಹಣದ ಜತೆಗೆ ಆತ್ಮವಿಶ್ವಾಸವನ್ನೂ ಕಳೆದುಕೊಳ್ಳುತ್ತಿದ್ದೀರಿ. ಅವನ್ನು ತ್ಯಜಿಸಿದರೆ ಒಳಿತು. ಶುಭಸಂಖ್ಯೆ: 5.ನಿಮ್ಮ ಪರಿಶುದ್ಧ ಮನೋಭಿಲಾಷೆಗಳನ್ನು ದುಷ್ಟರ ಬಳಿ ಹೇಳಿಕೊಳ್ಳದಿರಿ. ನಿಮ್ಮ ಯೋಚನೆಗೆ ಅಡ್ಡಿಯಾದಾರು. ಶುಭಸಂಖ್ಯೆ: 2.ಸದ್ಯದ ಸ್ಥಿತಿ ಉತ್ತಮವಾಗಿಲ್ಲ. ಪ್ರೇಮದ ವಿಚಾರದಲ್ಲಿ ಮುಂದೆ ಹೋಗಲು ತುಸು ಯೋಚಿಸುವುದೇ ಮೇಲು. ಶುಭಸಂಖ್ಯೆ: 1.ನಿಮ್ಮ ಹೋರಾಟದ ಸ್ವಭಾವದಿಂದಾಗಿ ಹೊಸ ಜವಾಬ್ದಾರಿಯನ್ನು ಪಡೆಯುವಿರಿ. ಮನೆಯಲ್ಲಿ ಸಂಭ್ರಮವಿರಲಿದೆ. ಶುಭಸಂಖ್ಯೆ: 7.ಎಲ್ಲ ಕಾಲದಲ್ಲಿಯೂ ಬಿಸಿಲಿನ ಉರಿಯೇ ಇರದು. ನಿಮ್ಮ ಜೀವನಕ್ಕೆ ತಂಪಿನ ಸುಖವೂ ಇಂದು ಒದಗಿಬರಲಿದೆ. ಶುಭಸಂಖ್ಯೆ: 9.ನಿಮ್ಮದು ಹಳೆಯ ಮನೋಭಾವದ ಯೋಜನೆಯಾದರೂ ಗೆಲ್ಲಲಿದೆ. ಆದರೆ ಟೀಕೆಗಳು ಬಂದರೆ ಎದುರಿಸಿ. ಶುಭಸಂಖ್ಯೆ: 8