ನಿತ್ಯ ಭವಿಷ್ಯ| ಈ ರಾಶಿಯವರು ಸಂಗಾತಿ ಬಗ್ಗೆ ಪದೇಪದೆ ಅಸಮಾಧಾನ ಪಡುವುದು ಒಳಿತಲ್ಲ

NITYA-BHAVISHYA-300x200
Published on

ಮೇಷ: ಹಲವು ಜನರು ವ್ಯಕ್ತಪಡಿಸುವ ಹಲವಾರು ಬಗೆಯ ಅಭಿಪ್ರಾಯಗಳಿಂದ ಕಿರಿಕಿರಿ ಆದೀತು. ನಿಮ್ಮ ವಿವೇಕವೇ ಉತ್ತಮ. ಶುಭಸಂಖ್ಯೆ: 1

ವೃಷಭ: ನಿಮ್ಮ ದೌರ್ಬಲ್ಯಗಳನ್ನು ನಿವಾರಿಸಿಕೊಳ್ಳುವ ಅವಕಾಶ ಪಡೆಯಲಿದ್ದೀರಿ. ವಿಷ್ಣು ಸಹಸ್ರ ನಾಮಾವಳಿಯನ್ನು ಪಠಿಸಿ. ಶುಭಸಂಖ್ಯೆ: 4

ಮಿಥುನ: ಸಾಮಾನ್ಯರನ್ನೂ ಕೂಡ ಗೌರವಿಸುವಂತಹ ಪದ್ಧತಿಯನ್ನು ಬಿಡದಿರಿ. ಈ ಸಜ್ಜನಿಕೆಯಿಂದಾಗಿ ಯಶಸ್ಸನ್ನೇ ಪಡೆಯುವಿರಿ. ಶುಭಸಂಖ್ಯೆ: 7

ಕಟಕ: ಕುಲದೇವತೆಯನ್ನು ಭಕ್ತಿಯಿಂದ ಆರಾಧಿಸಿ. ನಿಮ್ಮ ವ್ಯವಹಾರಗಳು ಸುಗಮವಾಗಿ ಜರುಗುವ ಪವಾಡ ಸಾಧ್ಯವಾಗುತ್ತದೆ. ಶುಭಸಂಖ್ಯೆ: 3

ಸಿಂಹ: ಇಳಿಮುಖವಾಗುತ್ತಿರುವ ಆದಾಯದ ಪ್ರಮಾಣವು ಗಾಬರಿ ಮೂಡಿಸಬಹುದು. ಜಾಣ್ಮೆಯಿಂದ ನಿಭಾಯಿಸಿ. ಶುಭಸಂಖ್ಯೆ: 6

ಕನ್ಯಾ: ಸಂಗಾತಿಯ ಬಗ್ಗೆ ಪದೇಪದೆ ಅಸಮಾಧಾನ ಹೊಂದುವುದು ಒಳಿತಲ್ಲ. ನೀವೇ ಮುಂದಾಗಿ ಸಮಾಧಾನಪಡಿಸಿ. ಶುಭಸಂಖ್ಯೆ: 2

ತುಲಾ: ಸಾಂಸ್ಕೃತಿಕ, ಸಾಹಿತ್ಯಿಕ ಕ್ಷೇತ್ರಗಳಲ್ಲಿರುವವರಿಗೆ ಹಲವು ರೀತಿಯ ಅವಕಾಶಗಳಿಂದ ಧನಲಾಭಕ್ಕೆ ದಾರಿಯೊಂದು ತೆರೆಯಲಿದೆ. ಶುಭಸಂಖ್ಯೆ: 8

ವೃಶ್ಚಿಕ: ಮನೆಯ ಹಿರಿಯರೇ ನಿಮ್ಮ ಶಕ್ತಿಯಾಗಿದ್ದಾರೆ. ಅವರಿಂದಲೇ ನಿಮ್ಮ ಭವಿಷ್ಯಕ್ಕೆ ಅತ್ಯುತ್ತಮ ಮಾರ್ಗದರ್ಶನ ಲಭಿಸುತ್ತದೆ. ಶುಭಸಂಖ್ಯೆ: 5

ಧನುಸ್ಸು: ನಿಮ್ಮ ಬಗ್ಗೆ ನಿಮಗಿರುವಂತಹ ಕೀಳರಿಮೆಯು ಒಳ್ಳೆಯದಲ್ಲ. ಬದುಕಿಗೆ ಹೊಸ ಉತ್ಸಾಹವನ್ನು ಕಂಡುಕೊಳ್ಳಿ. ಸಿದ್ಧಿ ಸಿಗಲಿದೆ. ಶುಭಸಂಖ್ಯೆ: 9

ಮಕರ: ಹಳೆಯ ಗೆಳೆಯರು ಆಕಸ್ಮಿಕವಾಗಿ ಮನೆಗೆ ಬಂದರೂ ನಿಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸಲಿದ್ದಾರೆ. ಶುಭಸಂಖ್ಯೆ: 1

ಕುಂಭ: ನಿಮ್ಮದೇ ಆದ ಕನಸಿನ ಯೋಜನೆಗಳನ್ನು ಸೊಗಸಾಗಿ ಸಾಕಾರಗೊಳಿಸಿಕೊಳ್ಳುವ ಸಕಾಲ ನಿಮ್ಮ ಪಾಲಿಗೆ ಒದಗಿಬರಲಿದೆ. ಶುಭಸಂಖ್ಯೆ: 4

ಮೀನ: ಬದುಕಿನಲ್ಲಿ ಕತ್ತಲು ಎದುರಾದಾಗಲೇ ಬೆಳಕಿನ ಮಹತ್ವ ತಿಳಿಯುತ್ತದೆ. ಬೆಳಕನ್ನು ಕಾಣುವಂತಹ ಸುಯೋಗವು ಬೇಗ ಬರಲಿದೆ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net