

ಮೇಷ: ಸಮಾಜದ ಎಲ್ಲ ಹಂತಗಳಲ್ಲಿರುವ ಜನರ ಸಂಘಟನೆಗೆ ಕಾರಣರಾಗುತ್ತೀರಿ. ಇದರಿಂದ ಪ್ರಶಂಸೆಯನ್ನೂ ಗಳಿಸಲಿದ್ದೀರಿ. ಶುಭಸಂಖ್ಯೆ: 9
ವೃಷಭ: ಕಿರಾಣಿ ವ್ಯಾಪಾರಿಗಳು, ಕೃಷಿಕರು, ಕಬ್ಬಿಣ ಮಾರಾಟದ ಅಂಗಡಿಯವರಿಗೆ ಲಾಭಕರ ವಿಚಾರಗಳು ಒದಗಿಬರಲಿವೆ. ಶುಭಸಂಖ್ಯೆ: 1
ಮಿಥುನ: ಧನಲಾಭದ ವಿಚಾರದಲ್ಲಿ ನಿಮ್ಮ ತಲೆಮಾರಿನ ಪ್ರಸಿದ್ಧವಾದ ಕೆಲವು ವಿಚಾರಗಳು ನಿಮಗೆ ಬೆಂಬಲವನ್ನು ನೀಡಬಲ್ಲವು. ಶುಭಸಂಖ್ಯೆ: 6
ಕಟಕ: ಅಧ್ಯಾತ್ಮಿಕ ವಿಚಾರಗಳ ಓದು ಹೊಸ ಚಿಂತನೆಗಳಿಗೆ ನಿಮ್ಮನ್ನು ಸಂವೇದಿಸಲಿದೆ. ಕುಲದೇವರನ್ನು ಪ್ರಾರ್ಥಿಸಿಕೊಳ್ಳಿ. ಶುಭಸಂಖ್ಯೆ: 5
ಸಿಂಹ: ರಾಜಕಾರಣಿಗಳು ಅಸಮಾಧಾನಕರ ಘಟನೆಗಳನ್ನು ಎದುರಿಸುವ ಸಂದರ್ಭ ಬರಬಹುದು. ತಾಳ್ಮೆ ಇರಲಿ. ಶುಭಸಂಖ್ಯೆ: 3
ಕನ್ಯಾ: ಅಧಿಕಾರ, ಜನಪ್ರಿಯತೆಗಳ ಬಗ್ಗೆ ನಿಮ್ಮೊಳಗಿನ ಮಹತ್ವಾಕಾಂಕ್ಷೆಗಳು ಆತುರದ ನಿರ್ಧಾರಗಳಿಂದ ಹಾಳಾಗಿಬಿಡಬಹುದು. ಎಚ್ಚರ. ಶುಭಸಂಖ್ಯೆ: 8
ತುಲಾ: ಬೇಡ ಎನಿಸುವಂತಹ ಸ್ಥಳಗಳಿಗೆ ನಿಮ್ಮನ್ನು ವರ್ಗಾವಣೆ ಮಾಡಬಹುದು. ಭಗವಾನ್ ಶ್ರೀರಾಮನಾಮ ಪಠಿಸಿ. ಕ್ಷೇಮ. ಶುಭಸಂಖ್ಯೆ: 2
ವೃಶ್ಚಿಕ: ಅನೇಕ ದಿನಗಳಿಂದಲೂ ನಡೆಯುತ್ತಿರುವ ಕೆಲವು ವಿವಾದಗಳು ನಾಟಕೀಯ ತಿರುವುಗಳ ಮೂಲಕ ಸುಖಾಂತ್ಯಗೊಳ್ಳಲಿವೆ. ಶುಭಸಂಖ್ಯೆ: 7
ಧನುಸ್ಸು: ಹೂವು ಹಣ್ಣುಗಳ ವ್ಯಾಪಾರಗಳು, ವಿಮಾ ವಿಭಾಗದವರು, ವೈದ್ಯಕೀಯ ಕ್ಷೇತ್ರದಲ್ಲಿ ಇರುವವರಿಗೆ ಅನುಕೂಲವಿದೆ. ಶುಭಸಂಖ್ಯೆ: 4
ಮಕರ: ಉದ್ಯಮದಲ್ಲಿ ಅನೇಕ ಥರದ ಬದಲಾವಣೆಗಳನ್ನು ಮಾಡುವುದರ ಬಗೆಗೆ ಯೋಚಿಸಬಹುದು. ಇದರಿಂದ ಸಿದ್ಧಿಗೆ ದಾರಿ ಇದೆ. ಶುಭಸಂಖ್ಯೆ: 1
ಕುಂಭ: ಸ್ನೇಹಿತರು, ಮೇಲಧಿಕಾರಿಗಳೆಲ್ಲರೂ ನಿಮ್ಮ ಬಗ್ಗೆ ಒಳ್ಳೆಯ ಭಾವನೆಯನ್ನು ತಳೆಯಲಿದ್ದಾರೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಶುಭಸಂಖ್ಯೆ: 9
ಮೀನ: ಉತ್ತಮ ಕೆಲಸವೊಂದರ ವಿಚಾರವಾಗಿ ಅನೇಕ ಜನ ನೆರೆಹೊರೆಯವರನ್ನು ಗೆಳೆಯರನ್ನಾಗಿ ಪಡೆದುಕೊಳ್ಳುವ ಯೋಗವಿದೆ. ಶುಭಸಂಖ್ಯೆ: 6