

ಮೇಷ: ಶತ್ರು ಸೋತು ಶರಣಾಗಿದ್ದಾನೆಂದು ಸರ್ರನೆ ನಿರ್ಧಾರಕ್ಕೆ ಬರಬೇಡಿ. ನಿಮ್ಮ ಬಿಗಿ ಸಡಿಲಾಗದಂತೆ ನೋಡಿಕೊಳ್ಳಿ. ಶುಭಸಂಖ್ಯೆ: 1
ವೃಷಭ: ರಾಜಕಾರಣಿಗಳಿಗೆ ಹೊಸ ಭರವಸೆ ಸಿಗುವಂತೆ ಹಲವು ಮೂಲಗಳಿಂದ ಶಕ್ತಿ ವರ್ಧನೆ ಉಂಟಾಗುವುದು. ಶುಭಸಂಖ್ಯೆ: 7
ಮಿಥುನ: ಪರರು ಮಾಡಿರದ ಕಾರ್ಯವನ್ನು ಮಾಡುವ ಅಥವಾ ಮಾಡಿಸಿ ತೋರಿಸುವ ಜವಾಬ್ದಾರಿ ನಿಮ್ಮ ಮೇಲೆ ಬರಲಿದೆ. ಶುಭಸಂಖ್ಯೆ: 9
ಕಟಕ: ಸಕಾರಾತ್ಮಕವಾದ ನಿಗೂಢಶಕ್ತಿಯೊಂದು ನಿಮ್ಮ ಭವಿಷ್ಯವನ್ನು ರೂಪಿಸುವ ವಿಚಾರವು ಗಮನಕ್ಕೆ ಬರಬಹುದು. ಶುಭಸಂಖ್ಯೆ: 3
ಸಿಂಹ: ಮನೆಯಲ್ಲಿ ಶುಭಕಾರ್ಯಕ್ಕೆ ಅವಕಾಶ ಕೂಡಿಬರಲಿದೆ. ಇದರಿಂದ ಸಂಭ್ರಮದ ವಾತಾವರಣ ಉಂಟಾಗಲಿದೆ. ಶುಭಸಂಖ್ಯೆ: 2
ಕನ್ಯಾ: ಬರುವ ಅವಕಾಶವನ್ನು ಬಾಚಿಕೊಂಡಲ್ಲಿ ಯಶಸ್ಸಿದೆ. ಪ್ರತಿ ಕ್ಷಣವನ್ನೂ ಆನಂದದಿಂದ ಅನುಭವಿಸಲಿದ್ದೀರಿ. ಶುಭಸಂಖ್ಯೆ: 4
ತುಲಾ: ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆದರೆ ಸ್ವಲ್ಪ ತಾಳ್ಮೆ ಮತ್ತು ಶ್ರದ್ಧೆಯಿಂದ ಕಾರ್ಯ ನಿರ್ವಹಿಸಿ. ಶುಭಸಂಖ್ಯೆ: 8
ವೃಶ್ಚಿಕ: ಆಸ್ತಿಗೆ ಸಂಬಂಧಿಸಿದ ವ್ಯಾಜ್ಯ ಹೊಸ ತಿರುವು ಪಡೆಯಲಿದೆ. ಮರಳಿ ಯತ್ನ ಮಾಡಿದರೆ ಅನುಕೂಲವಾಗಲಿದೆ. ಶುಭಸಂಖ್ಯೆ: 6
ಧನಸ್ಸು: ವ್ಯಾಪಾರಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ನಿಶ್ಚಿತ ಕಾರ್ಯಕ್ಕೆ ಒತ್ತು ನೀಡಿ. ಎರಡು ದೋಣಿಗಳ ಪಯಣ ಬೇಡ. ಶುಭಸಂಖ್ಯೆ: 5
ಮಕರ: ನ ಭೂತೋ ನ ಭವಿಷ್ಯತಿ ಎನ್ನುವಂತೆ ಕಾರ್ಯ ಮಾಡಿ ತೋರಿಸುವಿರಿ. ನಿಮ್ಮ ಪಾಲಿಗೆ ಶುಭ ಸುದ್ದಿ ಸಿಗಲಿದೆ. ಶುಭಸಂಖ್ಯೆ: 1
ಕುಂಭ: ಸೂಕ್ತ ಸಂದರ್ಭದಲ್ಲಿ ಸಿಗಬೇಕಾದ ಪದೋನ್ನತಿಯು ನಿಮ್ಮನ್ನು ಹುಡುಕಿಕೊಂಡು ಬರುವ ಪವಾಡ ಘಟಿಸಲಿದೆ. ಶುಭಸಂಖ್ಯೆ: 7
ಮೀನ: ಅನೇಕ ಜಂಜಾಟಗಳನ್ನು ಎದುರಿಸಿ ಹೈರಾಣಾಗಿದ್ದೀರಿ. ಚಿಂತೆ ಬೇಡ. ಕತ್ತಲೆ ಕಳೆದು ಬೆಳಕು ಮೂಡಿಬರಲಿದೆ. ಶುಭಸಂಖ್ಯೆ: 9