ನಿತ್ಯ ಭವಿಷ್ಯ: ಈ ರಾಶಿಯವರು ಇಂದು ಪ್ರೇಮದ ಬಲೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ

Nitya-Bhavishya-vvani-1-2-1
Published on

ಮೇಷ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ಎನಿಸಬಹುದು. ಕುಟುಂಬ ಸದಸ್ಯರೊಡನೆ ಭಿನ್ನಾಭಿಪ್ರಾಯ. ದುರ್ಗಾದೇವಿಯ ಸ್ತುತಿ ಮಾಡಿ. ಶುಭಸಂಖ್ಯೆ: 8

ವೃಷಭ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ನೆಂಟರಿಂದ ಬೇಸರ, ನೆರೆಹೊರೆಯವರಿಂದ ಕಿರಿಕಿರಿ, ಆಕಸ್ಮಿಕ ಧನಲಾಭವಿದೆ. ಶುಭಸಂಖ್ಯೆ: 2

ಮಿಥುನ: ಸ್ವಂತ ಉದ್ಯಮ ನಡೆಸುವವರಿಗೆ ವ್ಯವಹಾರದಲ್ಲಿ ಲಾಭವಿದೆ. ಆರ್ಥಿಕ ಸ್ಥಿತಿ ಚೇತರಿಕೆ ಹೊಂದುತ್ತದೆ. ಕುಲದೇವರನ್ನು ಪ್ರಾರ್ಥಿಸಿ. ಶುಭಸಂಖ್ಯೆ: 5

ಕಟಕ: ಕೆಲಸಕಾರ್ಯಗಳಲ್ಲಿ ತುಸು ಅಡೆತಡೆ. ಭವಿಷ್ಯದ ಬಗ್ಗೆ ಗಾಢ ಚಿಂತನೆ ಮಾಡುವಿರಿ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 9

ಸಿಂಹ: ಅತಿಯಾದ ಸೋಮಾರಿತನದಿಂದ ತಲೆನೋವು ಬರಬಹುದು. ಉದ್ಯೋಗದ ಬಗೆಗಿನ ಚಿಂತೆ ಆವರಿಸಲಿದೆ. ಶುಭಸಂಖ್ಯೆ: 4

ಕನ್ಯಾ: ಪ್ರೇಮದ ಬಲೆಗೆ ಸಿಲುಕುವ ಸಾಧ್ಯತೆ. ನೆರೆಹೊರೆಯವರಿಂದ ಕಿರಿಕಿರಿ. ವೈಭವದ ಜೀವನಕ್ಕೆ ಆಸೆಪಡುವಿರಿ. ಶುಭಸಂಖ್ಯೆ: 7

ತುಲಾ: ತಲೆ ಗಟ್ಟಿ ಇದೆ ಎಂದು ಬಂಡೆಗೆ ಚಚ್ಚಿಕೊಳ್ಳಲು ಹೋಗದಿರಿ. ಕೆಲವು ವಿಚಾರಗಳಲ್ಲಿ ಸಂಗಾತಿಯ ಸಲಹೆ ಪಡೆಯಿರಿ. ಶುಭಸಂಖ್ಯೆ: 3

ವೃಶ್ಚಿಕ: ದೃಢಮನಸ್ಕರಾದ ನಿಮಗೆ ಸ್ಪಷ್ಟ ದಾರಿ ಕಾಣಿಸುವಾಗ ಮಾನಸಿಕ ಹೊಯ್ದಾಟಕ್ಕೆ ಅವಕಾಶ ಮಾಡಿಕೊಡದಿರಿ. ಶುಭಸಂಖ್ಯೆ: 1

ಧನಸ್ಸು: ಎಲ್ಲದಕ್ಕೂ ಅವಸರ ಮಾಡುವುದರಿಂದ ಮುಖ್ಯ ವಿಚಾರಗಳನ್ನು ಕಳೆದುಕೊಳ್ಳುವಿರಿ. ಆತುರದಿಂದ ಕಾರ್ಯದಲ್ಲಿ ಹಾನಿ. ಶುಭಸಂಖ್ಯೆ: 6

ಮಕರ: ವಿದ್ಯಾರ್ಥಿಗಳಲ್ಲಿ ಉನ್ನತ ವಿದ್ಯಾಭ್ಯಾಸದ ಯೋಚನೆ ಬರಲಿದೆ. ಉದ್ಯೋಗದಲ್ಲಿ ಉತ್ತಮ ಅವಕಾಶ ಲಭಿಸಲಿದೆ. ಶುಭಸಂಖ್ಯೆ: 2

ಕುಂಭ: ಮಾತಿನ ಭರದಲ್ಲಿ ಮಿತ್ರರಿಗೆ ನೋವು ಉಂಟಾಗಬಹುದು. ಅವರೊಡನೆ ಮಾತಾಡಿ ತಪ್ಪು ಭಾವನೆ ನಿವಾರಿಸಿಕೊಳ್ಳಿ. ಶುಭಸಂಖ್ಯೆ: 8

ಮೀನ: ಹಣಕಾಸು ವ್ಯವಹಾರದ ಅಡೆತಡೆಗಳು ಬೇಗ ಬಗೆಹರಿಯಲಿವೆ. ವೃತ್ತಿಯಲ್ಲಿ ಪ್ರಶಂಸೆಯಿದೆ. ಆಹಾರದ ವಿಚಾರದಲ್ಲಿ ಎಚ್ಚರ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net