

ಮೇಷ: ನಿಮ್ಮದೇ ಸ್ವಂತದ್ದಾದ ಚಿಕ್ಕ ವ್ಯವಹಾರಗಳ ಬಗ್ಗೆ ತಯಾರಿಸಿಕೊಂಡ ಯೋಜನೆಯು ಉನ್ನತಿಯನ್ನು ಹೊಂದಲಿದೆ. ಶುಭಸಂಖ್ಯೆ: 1
ವೃಷಭ: ಮನಸ್ಸಿಗೆ ಬಂದ ಹಾಗೆ ಖರ್ಚು ಮಾಡಲು ಹೋಗದಿರಿ. ತಕ್ಕಮಟ್ಟಿಗಿನ ಉಳಿತಾಯಗಳ ನಿರ್ಧಾರದಿಂದ ಲಾಭ. ಶುಭಸಂಖ್ಯೆ: 9
ಮಿಥುನ: ಕುಲದೇವರ ಅನುಗ್ರಹಕ್ಕಾಗಿ ಪ್ರಾರ್ಥನೆ ಮಾಡಿಕೊಳ್ಳಿ. ಕೈಗೊಂಡ ಕಾರ್ಯಗಳು ಯಾವ ಅಡೆತಡೆ ಇಲ್ಲದೆ ಸಾಗಲಿವೆ. ಶುಭಸಂಖ್ಯೆ: 3
ಕಟಕ: ಸ್ವಯಾರ್ಜಿತವಾದ ಭೂಮಿಗೆ ಸಂಬಂಧಿಸಿದ ವಿವಾದ ಬಗೆಹರಿಯಲು ನೀವೇ ರಾಜಿಗೆ ಮುಂದಾದರೆ ಒಳಿತಾಗಲಿದೆ. ಶುಭಸಂಖ್ಯೆ: 7
ಸಿಂಹ: ಮನಸ್ಸನ್ನು ಆವರಿಸಿದ ಭಯವನ್ನು ಓಡಿಸಿ. ಎಲ್ಲಕ್ಕೂ ಧೈರ್ಯವು ಪ್ರಮುಖವಾದ ಸಾಧನ ಎಂದು ಅರಿಯುವಿರಿ. ಶುಭಸಂಖ್ಯೆ: 4
ಕನ್ಯಾ: ಜಗಳ ಹಬ್ಬಿಸಲು ಬಯಸುವ ಕಲಹಪ್ರಿಯರು ಎದುರಾದಾರು. ಅವರ ಮುಂದೆ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಿ. ಶುಭಸಂಖ್ಯೆ: 6
ತುಲಾ: ಬೆಳ್ಳಗಿರುವುದೆಲ್ಲ ಹಾಲು ಎಂಬ ತಪ್ಪು ತಿಳಿವಳಿಕೆಯಿಂದ ನಿಮಗೇ ಹಾನಿಯಾಗಲಿದೆ. ಈ ಬಗ್ಗೆ ತುಸು ಎಚ್ಚರವಿರಲಿ. ಶುಭಸಂಖ್ಯೆ: 3
ವೃಶ್ಚಿಕ: ರಫ್ತಿನ ವ್ಯವಹಾರ ನಿಮಗೆ ಅಸಾಧ್ಯವೇನಲ್ಲ. ಆದರೆ ಅದನ್ನು ಚೆನ್ನಾಗಿ ಬಲ್ಲವರ ಜತೆ ಒಡನಾಟವನ್ನು ಬೆಳೆಸಿಕೊಳ್ಳಿ. ಶುಭಸಂಖ್ಯೆ: 9
ಧನಸ್ಸು: ಸೋಗುಹಾಕುವವರೆಲ್ಲ ಮಹಾಪುರುಷರು ಎಂದು ಮರುಳಾಗದಿರಿ. ನೀವು ಮೋಸ ಹೋಗದಂತೆ ನೋಡಿಕೊಳ್ಳಿ. ಶುಭಸಂಖ್ಯೆ: 1
ಮಕರ: ಎಲ್ಲರ ಗುಣಗಳನ್ನೂ ಮೆಚ್ಚುವ ನಿಮ್ಮ ಗುಣ ದೊಡ್ಡದು. ಆದರೆ ಯಾರಿಗೂ ಸಲುಗೆ ನೀಡದೆ ತುಸು ಕಠಿಣರಾಗಿರಿ. ಶುಭಸಂಖ್ಯೆ: 5
ಕುಂಭ: ಕೈಗೊಂಡ ಕಾರ್ಯವನ್ನು ಯಾವುದೇ ಕಾರಣಕ್ಕೂ ಅರ್ಧಕ್ಕೇ ಬಿಡಬೇಡಿ. ಮಹಾಗಣಪತಿಯ ಅನುಗ್ರಹ ನಿಮ್ಮ ಪಾಲಿಗಿದೆ. ಶುಭಸಂಖ್ಯೆ: 4
ಮೀನ: ಅಪ್ಪಿತಪ್ಪಿಯೂ ಆಭರಣ ಮಳಿಗೆಗಳತ್ತ ಹೋಗಲೇಬೇಡಿ. ಖರ್ಚಿನ ಬಹು ದೊಡ್ಡ ಬಾಗಿಲೇ ತೆರೆದುಕೊಂಡೀತು. ಶುಭಸಂಖ್ಯೆ: 2