ಈ ರಾಶಿಯವರಿಗೆ ಅವಮಾನವಾಗುವ ಸಾಧ್ಯತೆ ಹೆಚ್ಚು ಇದೆ

Nitya-Bhavishya-vvani-1-2-1
Published on

ಮೇಷ: ಉದ್ಯೋಗ ಸ್ಥಳದಲ್ಲಿ ಹಿರಿಯರಿಂದ ಶ್ಲಾಘನೆ ಸಿಗುವುದು ಅಸಾಧ್ಯ ಎಂದುಕೊಂಡಿದ್ದರೂ ಸಿಗಬಹುದು. ಅದೃಷ್ಟಸಂಖ್ಯೆ: 7

ವೃಷಭ: ಸ್ವಾಮಿಕಾರ್ಯ, ಸ್ವಕಾರ್ಯ ಎರಡನ್ನೂ ಮಾಡಿಕೊಳ್ಳುತ್ತೀರಿ. ಇತರರ ಕುಹಕದ ಮಾತುಗಳೂ ಕೇಳಬಹುದು. ಅದೃಷ್ಟಸಂಖ್ಯೆ: 9

ಮಿಥುನ: ಸಂಧಾನ ಯಶಸ್ವಿಯಾದಲ್ಲಿ ಚಿಕ್ಕ ಲಾಭ, ದೊಡ್ಡ ನಷ್ಟವಿದೆ. ಕವಲುದಾರಿಯಲ್ಲಿ ನಿಂತಂತೆ ವರ್ತಿಸುತ್ತೀರಿ. ಅದೃಷ್ಟಸಂಖ್ಯೆ: 1

ಕಟಕ: ಬೇಡ ಎಂದು ಬಿಟ್ಟವರಿಂದ ಒತ್ತಡ ಬಂದೀತು. ನಿಮ್ಮ ಅಭಿಪ್ರಾಯ ಕೇಳುವ ತಾಳ್ಮೆ ಯಾರಲ್ಲೂ ಕಾಣದು. ಅದೃಷ್ಟಸಂಖ್ಯೆ: 3

ಸಿಂಹ: ರಾಜಿಯಾಗದ ಸೂತ್ರ ಹಿಡಿದು ಎಷ್ಟು ಪಯಣಿಸಿದರೂ ಸಂಧಾನ ಆಗದು. ನಿಮಗೂ ಅದರ ಅರಿವಿದೆ. ಅದೃಷ್ಟಸಂಖ್ಯೆ: 2

ಕನ್ಯಾ: ನಿಮಗೇ ನೆರವು ಬೇಕಾದರೂ ನಿಮ್ಮಿಂದ ಹಲವರಿಗೆ ಸಹಾಯ ಆಗಲಿದೆ. ಅದು ಸಿಗದೆ ಪರಿತಪಿಸುವಿರಿ. ಅದೃಷ್ಟಸಂಖ್ಯೆ: 6

ತುಲಾ: ಅವಮಾನವಾಗುವ ಸಾಧ್ಯತೆ. ಆದರೆ ಆತ್ಮವಿಶ್ವಾಸ ನಿಮಗೆ ಎಲ್ಲೂ ಸೋಲಾಗದಂತೆ ನೋಡಿಕೊಳ್ಳುತ್ತದೆ. ಅದೃಷ್ಟಸಂಖ್ಯೆ: 4

ವೃಶ್ಚಿಕ: ಕೆಲವು ವಿಚಿತ್ರ ವ್ಯಕ್ತಿಗಳು ಹಾಗೂ ವಿಚಾರಗಳಿಂದ ದೂರ ಇರಲು ಯತ್ನಿಸಿ. ಬೇಕೆನ್ನುವ ಹಠ ಬಿಡಬೇಕು. ಅದೃಷ್ಟಸಂಖ್ಯೆ: 9

ಧನಸ್ಸು: ಎಲ್ಲ ಕೆಲಸಗಳು ಮುಖ್ಯವಾಗಿದ್ದರೂ ಅವನ್ನು ಮಾಡಿ ಮುಗಿಸಲು ನಿಮಗೆ ಇರುವ ಸಮಯ ಸಾಲದು. ಅದೃಷ್ಟಸಂಖ್ಯೆ: 1

ಮಕರ: ಆಲಸ್ಯ ಬಹಳವಾಗಿ ಕಾಡಲಿದೆ. ಇದರಿಂದಾಗಿ ನೀವೇ ಹಾಸ್ಯದ ವಿಷಯ ವಸ್ತುವಾದರೂ ಆಶ್ಚರ್ಯ ಇಲ್ಲ. ಅದೃಷ್ಟಸಂಖ್ಯೆ: 5

ಕುಂಭ: ಮಾತು ಕಡಿಮೆ ಮಾಡಿದರೆ ನಿಮಗೆ ಇನ್ಯಾವುದೇ ಸಮಸ್ಯೆ ಇಲ್ಲ. ಗುರುಹಿರಿಯರ ಆಶೀರ್ವಾದ ಸಿಗಲಿದೆ. ಅದೃಷ್ಟಸಂಖ್ಯೆ: 3

ಮೀನ: ಆರೋಗ್ಯಬಾಧೆ ಇದ್ದವರಿಗೂ ಸ್ವಲ್ಪ ಗುಣ ಆಗಬಹುದು. ಔಷಧಗಳು ವೇಗವಾಗಿ ಕೆಲಸ ಮಾಡಲಿವೆ. ಅದೃಷ್ಟಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net