ನಿತ್ಯ ಭವಿಷ್ಯ: ಈ ರಾಶಿಯವರು ಎಲ್ಲವನ್ನೂ ಎಲ್ಲರನ್ನೂ ಅನುಮಾನದಿಂದಲೇ ನೋಡುತ್ತೀರಿ. ಹೀಗಾಗಿ ನಿಮ್ಮವರೇ ನಿಮ್ಮೊಡನೆ ಜಗಳವಾಡುತ್ತಾರೆ. ಎಚ್ಚರ

Nitya-Bhavishya-vvani-1-2-1
Published on

ಮೇಷ: ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಆದರೆ ನಿಮಗೆ ಸಮಯಾಭಾವ ಕಾಡಲಿದೆ. ಅದೃಷ್ಟಸಂಖ್ಯೆ: 9

ವೃಷಭ: ಮಾತು ಕೊಟ್ಟು ಎಡವಟ್ಟು ಮಾಡಿಕೊಂಡೆ ಎಂದು ಅರಿವಾಗುತ್ತದೆ. ಅದು ಅರ್ಥವಾಗಲು ಕಾಲ ಮೀರಿಹೋಗಿದೆ. ಅದೃಷ್ಟಸಂಖ್ಯೆ: 7

ಮಿಥುನ: ದೂರದ ಸಂಬಂಧಿಕರಿಂದ ಸಹಾಯದ ಮನವಿಗಳು ಬರುತ್ತವೆ. ಆದರೆ ನಿಮ್ಮ ಕೆಲಸವೇ ನಿಮಗೆ ಹೆಚ್ಚಿದೆ. ಅದೃಷ್ಟಸಂಖ್ಯೆ: 2

ಕಟಕ: ನಿಮ್ಮೊಂದಿಗೆ ವ್ಯವಹರಿಸುವಾಗ ಆಪ್ತರ ಬದಲಾವಣೆಗಳು ಗಮನಕ್ಕೆ ಬರುತ್ತವೆ. ಹಣದ ವಿಚಾರದಲ್ಲಿ ಬೇಸರ. ಅದೃಷ್ಟಸಂಖ್ಯೆ: 1

ಸಿಂಹ: ಆರೋಗ್ಯದಲ್ಲಿ ಪ್ರಗತಿ. ಶಾರೀರಿಕ ನೋವು ಕಡಿಮೆಯಾಗಲಿದೆ. ಮಕ್ಕಳ ವಿಚಾರದಲ್ಲಿ ಬೇಸರ ಆಗಬಹುದು. ಅದೃಷ್ಟಸಂಖ್ಯೆ: 4

ಕನ್ಯಾ: ತಾಯಿಯಿಂದ ಮನಸ್ಸಿಗೆ ಸಮಾಧಾನ. ವ್ಯಾಪಾರದಲ್ಲಿ ಲಾಭ. ದೃಷ್ಟಿದೋಷ ಮಾತ್ರ ಹೆಚ್ಚೇ ತಗುಲಬಹುದು. ಅದೃಷ್ಟಸಂಖ್ಯೆ: 5

ತುಲಾ: ಸಹೋದರನಿಗೆ ಕೆಲಸ ಕೊಡಿಸುವ ಪ್ರಯತ್ನದಲ್ಲಿ ಜಯ. ನಿಮ್ಮ ವಿರುದ್ಧ ಮೇಲಧಿಕಾರಿಗೆ ದೂರು ನೀಡುವವರಿದ್ದಾರೆ. ಅದೃಷ್ಟಸಂಖ್ಯೆ: 3

ವೃಶ್ಚಿಕ: ಎಲ್ಲವನ್ನೂ ಎಲ್ಲರನ್ನೂ ಅನುಮಾನದಿಂದಲೇ ನೋಡುತ್ತೀರಿ. ಹೀಗಾಗಿ ನಿಮ್ಮವರೇ ನಿಮ್ಮೊಡನೆ ಜಗಳವಾಡುತ್ತಾರೆ. ಎಚ್ಚರ. ಅದೃಷ್ಟಸಂಖ್ಯೆ: 9

ಧನಸ್ಸು: ಅವಕಾಶದ ರೂಪದಲ್ಲಿ ದೊಡ್ಡ ಜವಾಬ್ದಾರಿ ಬಳಿಗೆ ಬರಲಿದೆ. ಶ್ರಮವಹಿಸಲು ಸಿದ್ಧರಿದ್ದಲ್ಲಿ ಮಾತ್ರ ಒಪ್ಪಿಗೆ ನೀಡಿ. ಅದೃಷ್ಟಸಂಖ್ಯೆ: 2

ಮಕರ: ಮನಸ್ಸು ಬದಲಾವಣೆ ಬಯಸುತ್ತದೆ. ರೋಸಿಹೋದ ವಿಚಾರಗಳು ಎದುರಾದರೆ ಸಿಡುಕುತ್ತೀರಿ. ತಾಳ್ಮೆ ಇರಲಿ. ಅದೃಷ್ಟಸಂಖ್ಯೆ: 3

ಕುಂಭ: ಕಾಲುನೋವಿನ ಸಾಧ್ಯತೆ. ನಡೆಯುವಾಗ ಎಚ್ಚರ. ಕಚೇರಿಯಲ್ಲಿ ಅಪರಿಚಿತರ ಜತೆ ಕೆಲಸ ಮಾಡಬೇಕಾಗುತ್ತದೆ. ಅದೃಷ್ಟಸಂಖ್ಯೆ: 7

ಮೀನ: ಎಲ್ಲರನ್ನೂ ಸಂತೋಷಪಡಿಸುವ ಹಂಬಲ ಹೆಚ್ಚಾಗುತ್ತದೆ. ಅದಕ್ಕಾಗಿ ಪ್ರಯತ್ನ ಮಾಡುತ್ತೀರಿ. ಖರ್ಚು ಕೂಡ ಹೆಚ್ಚಲಿದೆ. ಅದೃಷ್ಟಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net