

ಮೇಷ: ಉದ್ಯಮಗಳಲ್ಲಿ ತೊಡಗಿರುವವರಿಗೆ ಉತ್ತಮವಾದ ಸಿಹಿ ಸುದ್ದಿ ಪಡೆಯುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಶುಭಸಂಖ್ಯೆ: 1
ವೃಷಭ: ವಿವಾಹಕೇಂದ್ರಗಳು ಅಥವಾ ಅದೇ ರೀತಿಯದಾದ ಸಂಸ್ಥೆಗಳ ಸಹಾಯವು ಅವಿವಾಹಿತರಿಗೆ ದೊರೆಯಲಿದೆ. ಶುಭಸಂಖ್ಯೆ: 3
ಮಿಥುನ: ನಿಮ್ಮ ಪ್ರತಿಭೆ, ಪರಿಶ್ರಮಪಟ್ಟು ದುಡಿಯುವ ಸಾಮರ್ಥ್ಯದಿಂದ ಮೇಲಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸುವರು. ಶುಭಸಂಖ್ಯೆ: 5
ಕಟಕ: ಹಿಂಜರಿಕೆಯನ್ನು ಕೈಬಿಟ್ಟು ಧೈರ್ಯದಿಂದ ಮುನ್ನುಗ್ಗುವ ಮನೋಭಾವವನ್ನು ಬೆಳೆಸಿಕೊಳ್ಳಿ. ಒಳಿತೇ ಉಂಟಾಗಲಿದೆ. ಶುಭಸಂಖ್ಯೆ: 7
ಸಿಂಹ: ಆರೋಗ್ಯದ ಸಂಬಂಧವಾಗಿ ಬೇಗನೆ ಉತ್ತಮವಾದ ಚೇತರಿಕೆಯನ್ನು ಪಡೆಯಲಿದ್ದು, ಉಲ್ಲಾಸದಿಂದ ಇರುವಿರಿ. ಶುಭಸಂಖ್ಯೆ: 9
ಕನ್ಯಾ: ಪರಶಿವನನ್ನು ಪರಮ ನಿಷ್ಠೆಯಿಂದ ಆರಾಧಿಸಿ. ಹಲವಾರು ಕೆಲಸಗಳಲ್ಲಿ ಸಿದ್ಧಿಯನ್ನು ಹೊಂದಲು ಸಾಧ್ಯವಿದೆ. ಶುಭಸಂಖ್ಯೆ: 2
ತುಲಾ: ಸಮಾಜಸೇವಕರಿಗೆ ಸಾಮಾಜಿಕವಾಗಿ ಮನ್ನಣೆ ಉತ್ತಮ ಅವಕಾಶವಿದೆ. ವಿರೋಧಿಗಳನ್ನು ಮಾತ್ರ ಖಂಡಿತ ಮರೆಯದಿರಿ. ಶುಭಸಂಖ್ಯೆ: 4
ವೃಶ್ಚಿಕ: ಮಕ್ಕಳಿಂದ ಶುಭಸಮಾಚಾರಗಳನ್ನು ಕೇಳಲಿದ್ದೀರಿ. ನಿಮ್ಮ ಬದುಕಿನಲ್ಲಿ ಇದು ಬಹಳ ವಿಶಿಷ್ಟ ದಿನವಾಗಲಿದೆ. ಶುಭಸಂಖ್ಯೆ: 6
ಧನುಸ್ಸು: ಸಾಹಸದಿಂದ ಮುಂದೆ ಸಾಗುವ ಪರಿಶ್ರಮಿ ಪತ್ರಿಕೋದ್ಯಮಿಗಳಿಗೆ ವೃತ್ತಿಯಲ್ಲಿ ಉತ್ತಮ ಹೆಸರು, ಯಶಸ್ಸುಗಳಿವೆ. ಶುಭಸಂಖ್ಯೆ: 8
ಮಕರ: ಕುಲದೇವರ ಕೃಪೆಯಿಂದ ಪರಿಪೂರ್ಣವಾದ ಯಶಸ್ಸನ್ನು ಪಡೆದು ಸಂತೋಷಪಡುವ ಸೌಭಾಗ್ಯ ಒದಗಿಬರಲಿದೆೆ. ಶುಭಸಂಖ್ಯೆ: 2
ಕುಂಭ: ಆರ್ಥಿಕ ಸಂಕಷ್ಟ ಎದುರಾಗಿ ಕಷ್ಟಪಡಬೇಕಾದೀತು. ತುಲಸಿದಳಗಳಿಂದ ಮಹಾವಿಷ್ಣುವಿನ ಅರ್ಚನೆ ಮಾಡಿ. ಶುಭವಾಗಲಿದೆ. ಶುಭಸಂಖ್ಯೆ: 9
ಮೀನ: ಭೂಸಂಬಂಧಿ ವ್ಯವಹಾರಗಳಲ್ಲಿ ಹೆಚ್ಚಿನ ಪ್ರಗತಿ ಉಂಟಾಗಲಿದೆ. ವಸ್ತ್ರಾಭರಣ ವ್ಯಾಪಾರಿಗಳಿಗೆ ಸ್ವಲ್ಪಮಟ್ಟಿನ ಲಾಭವಾಗಲಿದೆ. ಶುಭಸಂಖ್ಯೆ: 4