

ಮೇಷ: ಆಕಸ್ಮಿಕವಾಗಿ ಆಗಮಿಸಿದ ಬಂಧುಗಳಿಂದ ಒಳಿತಿನ ವಿಚಾರಗಳಿಗೆ ದಾರಿ ಗೋಚರ. ಮನಸ್ಸು ನಿರಾಳವಾಗಲಿದೆ. ಶುಭಸಂಖ್ಯೆ: 1
ವೃಷಭ: ಪ್ರತಿಕೂಲತೆಗಳ ನಡುವೆಯೂ ಕೆಲವು ಕೆಲಸಗಳು ಸಾಕಾರವಾಗುವ ಸಾಧ್ಯತೆಗಳು ಅಧಿಕ. ಮೈಗಳ್ಳರಾಗದಿರಿ. ಶುಭಸಂಖ್ಯೆ: 4
ಮಿಥುನ: ಮಾತಿನ ಚಾಣಾಕ್ಷತನದಿಂದ ಅನುಕೂಲ ಉಂಟಾಗಲಿದೆ ಎಂಬುದು ನಿಜವಾದರೂ ತುಸು ಜಾಗ್ರತೆ ಇರಲಿ. ಶುಭಸಂಖ್ಯೆ: 7
ಕಟಕ: ಎಲ್ಲರೂ ನಿಮ್ಮನ್ನು ವಿರೋಧಿಸುದ್ದಾರೆ ಎಂದು ನಿರಾಶರಾಗದಿರಿ. ಆತ್ಮವಿಮರ್ಶೆ ಮಾಡಿಕೊಳ್ಳಲು ಸಕಾಲವಿದು. ಶುಭಸಂಖ್ಯೆ: 8
ಸಿಂಹ: ತೋಳ್ಬಲವೊಂದೇ ಎಲ್ಲವೂ ಆಗಿರಲು ಅಸಾಧ್ಯ ಎಂಬ ಪಾಠವನ್ನು ನಿಶ್ಚಿತವಾಗಿ ಇಂದು ಕಲಿಯಲಿದ್ದೀರಿ. ಶುಭಸಂಖ್ಯೆ: 5
ಕನ್ಯಾ: ನಿಮ್ಮ ಬಗ್ಗೆ ಆದರ ತೋರಿಸುವವರು ಇದ್ದೇ ಇರುತ್ತಾರೆ. ಆದರೆ ನಿಮ್ಮ ಮನದ ಒತ್ತಡ ಹೆಚ್ಚದಂತೆ ನೋಡಿಕೊಳ್ಳಿ. ಶುಭಸಂಖ್ಯೆ: 2
ತುಲಾ: ಕೆಲಸದ ಅಳಿವು ಉಳಿವಿನ ಬಗೆಗೆ ಅತಿಯಾಗಿ ತಲೆ ಕೆಡಿಸಿಕೊಳ್ಳಬೇಡಿ. ಆತ್ಮನಿರ್ಭರತೆಯಿಂದ ಸಿದ್ಧಿ. ಶುಭಸಂಖ್ಯೆ: 3
ವೃಶ್ಚಿಕ: ಬರಿದೇ ಗೋಳಾಡುವುದರಿಂದ ಏನೇನೂ ಪ್ರಯೋಜನವಿಲ್ಲ. ಹಿರಿಯರ ಸಲಹೆಯಿಂದ ಸಮಸ್ಯೆಗಳು ದೂರವಾಗಲಿವೆ. ಶುಭಸಂಖ್ಯೆ: 6
ಧನುಸ್ಸು: ಕೆಲವು ನಿರುಪಯುಕ್ತ ಜನರು ನಿಮಗೆ ದುಃಖವನ್ನೇ ಉಂಟುಮಾಡಬಹುದು. ಮಾತು ಸೌಮ್ಯವಾಗಿರಲಿ. ಶುಭಸಂಖ್ಯೆ: 9
ಮಕರ: ಸಂಕೋಚದಿಂದ ದೂರ ಇರಲು ಕಲಿತರೆ ಜಯಶಾಲಿಯಾಗುವಿರಿ. ಸಮಯಾವಧಾನ ಕೂಡ ಈಗ ಬಹಳ ಮುಖ್ಯ. ಶುಭಸಂಖ್ಯೆ: 1
ಕುಂಭ: ಮನದ ಬಯಕೆಗಳು ನೆರವೇರಲಿವೆ. ವಿಷ್ಣು ಸಹಸ್ರನಾಮ ಪಠಣದಿಂದ ಮನಸ್ಸಿನ ನೆಮ್ಮದಿ ಮರಳಿ ಬರಲಿದೆ. ಶುಭಸಂಖ್ಯೆ: 4
ಮೀನ: ಮನೆಯಲ್ಲಿ ಹರ್ಷ. ವೃತ್ತಿರಂಗದಲ್ಲಿಯೂ ವಿಶೇಷವಾಗಿ ಗುರುತಿಸಲ್ಪಡುವಿರಿ. ಮರೆಯದೆ ಶಿವನಾಮವನ್ನು ಸ್ಮರಿಸಿ. ಶುಭಸಂಖ್ಯೆ: 7