ಮದುವೆ ಆಗಬೇಕು ಅನ್ನೋ ಆಸೆಯೇ?: ಈ ರಾಶಿಯವರಿಗೆ ಇಂದು ಹಿರಿಯ ಮಹಿಳೆಯೊಬ್ಬರ ನೆರವು ಸಿಗಲಿದೆ..

Nitya-Bhavishya-vvani-1-2-1
Published on

ಮೇಷ: ಮನಸ್ಸು ಒಡೆದ ಕನ್ನಡಿಯಂತೆ ಆಗದಿರಲಿ. ವಿನಯಶಾಲಿಗಳಾದ ನಿಮಗೆ ಪರರ ನೆರವು ಸಿಗದೆ ಇರಲಾರದು. ಶುಭಸಂಖ್ಯೆ: 6

ವೃಷಭ: ವಿವಾಹಾಪೇಕ್ಷಿಗಳು ನಿರಾಶೆಯನ್ನು ಬಿಡಬಹುದು. ಹಿರಿಯ ಮಹಿಳೆಯೊಬ್ಬರು ಸಹಾಯಹಸ್ತ ಚಾಚಲಿದ್ದಾರೆ. ಶುಭಸಂಖ್ಯೆ: 8

ಮಿಥುನ: ಧೈರ್ಯಲಕ್ಷ್ಮಿಯನ್ನು ಶ್ರದ್ಧಾಪೂರ್ವಕವಾಗಿ ಆರಾಧಿಸಿ. ಅಕ್ರಮಗಳ ವಿರುದ್ಧದ ಸಮರದಲ್ಲಿ ಜಯಶಾಲಿಯಾಗಲು ಸಾಧ್ಯ. ಶುಭಸಂಖ್ಯೆ: 5

ಕಟಕ: ಕುಲದೇವರ ಕೃಪಾಶೀರ್ವಾದದಿಂದ ದಿನದ ಕಷ್ಟಗಳನ್ನೆಲ್ಲ ಬಗೆಹರಿಸಿಕೊಳ್ಳುವ ಸದವಕಾಶ ಲಭ್ಯವಾಗಲಿದೆ. ಶುಭಸಂಖ್ಯೆ: 9

ಸಿಂಹ: ಎದುರಾಗುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು ಎಂಬ ನಿರ್ಧಾರವನ್ನು ಬದಲಿಸಬೇಡಿ. ಬಿಲ್ವಪತ್ರೆ ಜೇಬಿನಲ್ಲಿರಲಿ. ಶುಭಸಂಖ್ಯೆ: 4

ಕನ್ಯಾ: ಕೆಟ್ಟ ಅಭ್ಯಾಸಗಳನ್ನು ಹತೋಟಿಯಲ್ಲಿಡಲು ಒದ್ದಾಡುತ್ತಿದ್ದೀರಿ. ಆ ನಿಟ್ಟಿನಲ್ಲಿ ಯತ್ನಿಸಿದರೆ ಯಶಸ್ವಿಯಾಗುವಿರಿ. ಶುಭಸಂಖ್ಯೆ: 7

ತುಲಾ: ಕೃಷಿಕರಿಗೆ ಸ್ವಲ್ಪ ಮಟ್ಟಿನ ನಿರಾಸೆಯ ದಿನವಾದರೂ, ಸದ್ಯದಲ್ಲೇ ಮಹತ್ತರ ತಿರುವಿಗೆ ಅವಕಾಶ ಎದುರಾಗಲಿದೆ. ಶುಭಸಂಖ್ಯೆ: 1

ವೃಶ್ಚಿಕ: ಕಚೇರಿಯಲ್ಲಿ ಮೇಲಧಿಕಾರಿಗಳ ಪ್ರಶಂಸೆ ನಿಮಗಿಂದು ವಿಪುಲವಾಗಿದೆ. ಅನೇಕ ಶತ್ರುಗಳ ನಿಯಂತ್ರಣ ಸಾಧ್ಯ. ಶುಭಸಂಖ್ಯೆ: 3

ಧನುಸ್ಸು: ನಾನಾ ರೀತಿಯ ಸತ್ಕಾರ್ಯಗಳಿಂದ ನಿಮ್ಮ ಗೌರವ ಹೆಚ್ಚಾಗಲಿದೆ. ಜನಮನ್ನಣೆಯಿಂದ ಹರ್ಷಪಡಲಿದ್ದೀರಿ. ಶುಭಸಂಖ್ಯೆ: 2

ಮಕರ: ಎಲ್ಲ ಕಡೆಗಳಿಂದ ಲಾಭವಿದ್ದರೂ ಕೆಲವು ರೀತಿಯ ಖರ್ಚುಗಳು ಕೂಡ ಕಾಡಲಿವೆ. ಚಾತುರ್ಯತೆ ಪ್ರದರ್ಶಿಸಿ. ಶುಭಸಂಖ್ಯೆ: 6

ಕುಂಭ: ಧೈರ್ಯದ ನಿರ್ಣಯವನ್ನು ಕೈಗೊಂಡಿದ್ದೀರಿ. ಕುಟುಂಬದ ಸದಸ್ಯರ ಸಂಪೂರ್ಣವಾದ ಬೆಂಬಲವೂ ಸಿಗಲಿದೆ. ಶುಭಸಂಖ್ಯೆ: 8

ಮೀನ: ಮನೆಯವರ ಜತೆ ಸದಾ ಬಿಗುಮಾನದಿಂದ ಇರಬೇಡಿ. ಅವರ ಮೇಲೂ ನಿಮ್ಮ ಪ್ರೀತಿಯನ್ನು ತೋರಿಸಿ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net