

ಮೇಷ: ಸೂರ್ಯ, ಚಂದ್ರರ ಕೃಪೆಯಿಂದ ಬೆಳಕಿನಂತೆ ಬೆಳಗಲಿದ್ದೀರಿ. ಮಾತೃವಾತ್ಸಲ್ಯದಿಂದ ಬಾಳಿನಲ್ಲಿ ಬದಲಾವಣೆ ಇದೆ. ಶುಭಸಂಖ್ಯೆ: 6
ವೃಷಭ: ಕೌಟುಂಬಿಕ ಅಸಮಾಧಾನದ ಕಾರಣಕ್ಕಾಗಿ ನೀವೇ ಮೌನವಾಗಿರಿ. ಹೊಸ ಯೋಜನೆಯ ದಾರಿಯೊಂದು ತೆರೆಯಲಿದೆ. ಶುಭಸಂಖ್ಯೆ: 5
ಮಿಥುನ: ದಿನವಿಡೀ ಶುಭಕರವಾಗಿದೆ. ಅವಸರಕ್ಕೆ ಅವಕಾಶ ಬೇಡ. ಮಾತಿನಲ್ಲಿ ತರ್ಕವಿದ್ದರೂ ಮೃದುತ್ವ ಕೂಡ ಇರಲಿ. ಶುಭಸಂಖ್ಯೆ: 9
ಕಟಕ: ವಿವಾಹಿತರಿಗೆ ಬಹಳ ಖುಷಿಯ ದಿನವಿದು. ಅವಿವಾಹಿತರಿಗೆ ವಿವಾಹಸಂಬಂಧಿಯಾದ ಮಾತುಕತೆ ಜರುಗಲಿದೆ. ಶುಭಸಂಖ್ಯೆ: 8
ಸಿಂಹ: ನಿರಂತರ ನಷ್ಟಗಳ ಹಿಂದಿನ ಕಾರಣವೊಂದು ತಿಳಿದುಬರಲಿದೆ. ಕುಲದೇವರ ಸ್ಮರಣೆಯಿಂದ ಹಿತಶತ್ರುಗಳ ಕಾಟ ನಿಲ್ಲಲಿದೆ. ಶುಭಸಂಖ್ಯೆ: 3
ಕನ್ಯಾ: ಮಾನಸಿಕ ನೋವನ್ನು ಎದುರಿಸುವ ಸಂದರ್ಭ ಬರಬಹುದು. ಮಹಾಗಣೇಶನನ್ನು ಧ್ಯಾನಿಸಿ. ನೋವಿನಿಂದ ಮುಕ್ತಿ ಸಾಧ್ಯ. ಶುಭಸಂಖ್ಯೆ: 4
ತುಲಾ: ಥಟ್ ಎಂದು ದುಡ್ಡು ಮಾಡುವಂತಹ ಅಡ್ಡ ದಾರಿಗಳ ಪಯಣ ಬೇಡ. ಕಷ್ಟಪಟ್ಟು ದುಡಿದರೆ ಕಾರ್ಯ ಸಿದ್ಧಿಸಲಿದೆ. ಶುಭಸಂಖ್ಯೆ: 2
ವೃಶ್ಚಿಕ: ಪಿತ್ರಾರ್ಜಿತವಾದ ಆಸ್ತಿಯ ವಿಚಾರದಲ್ಲಿ ಸಮಾಧಾನದಿಂದ ಎಲ್ಲವೂ ನಿರಾಳವಾಗಲಿದೆ. ದುಡುಕುವುದಕ್ಕೆ ಹೋಗದಿರಿ. ಶುಭಸಂಖ್ಯೆ: 1
ಧನುಸ್ಸು: ಒತ್ತಡಗಳ ಮಧ್ಯೆ ಸ್ವಲ್ಪ ವಿಶ್ರಾಂತಿಯನ್ನು ಪಡೆಯುವುದು ಉತ್ತಮ. ಆರೋಗ್ಯದ ಬಗ್ಗೆ ವಿಶೇಷವಾದ ಕಾಳಜಿ ವಹಿಸಿ. ಶುಭಸಂಖ್ಯೆ: 4
ಮಕರ: ಮಕ್ಕಳ ವಿದ್ಯಾಭ್ಯಾಸದ ಪ್ರಗತಿ ನಿಮ್ಮ ಹೆಮ್ಮೆಗೆ ಕಾರಣವಾಗುತ್ತದೆ. ಮನೆಯಲ್ಲಿ ಸಂತೋಷ, ನೆಮ್ಮದಿಯಿರುವ ಕಾಲವಿದು. ಶುಭಸಂಖ್ಯೆ: 7
ಕುಂಭ: ಸಂಗಾತಿಯ ಎದುರು ನಿಮ್ಮ ಕನಸುಗಳನ್ನು ತೆರೆದಿಡಿ. ಅವರ ಸಲಹೆಗಳಿಂದ ಜೀವನಕ್ಕೆ ಹೊಸ ಉತ್ಸಾಹ ಸಿಗಲಿದೆ. ಶುಭಸಂಖ್ಯೆ: 9
ಮೀನ: ತಜ್ಞರ ಮಾರ್ಗದರ್ಶನದಿಂದ ಲಾಭದ ದಾರಿ ದೊರೆಯಲಿದೆ. ಆದರೆ ಯಶಸ್ಸು ತಲೆಗೆ ಏರದಿದ್ದರೆ ಮಾತ್ರ ಕ್ಷೇಮ. ಶುಭಸಂಖ್ಯೆ: 5