

ಮೇಷ: ಬಹಳ ಸಂತೋಷವಾಗಿ ದಿನವನ್ನು ಕಳೆಯುತ್ತೀರಿ. ಇಷ್ಟ ಬಂಧು ಮಿತ್ರರು ಬಂದು ನಿಮ್ಮ ಭೇಟಿ ಆಗುತ್ತಾರೆ. ಅದೃಷ್ಟಸಂಖ್ಯೆ: 5
ವೃಷಭ: ನೀವು ಇಂದು ಆಡುವಂತಹ ಕೆಲವು ನಿಗೂಢ ಮಾತುಗಳು ಬಹಳ ಜನರಿಗೆ ಅರ್ಥವೇ ಆಗುವುದಿಲ್ಲ. ಅದೃಷ್ಟಸಂಖ್ಯೆ: 6
ಮಿಥುನ: ನಿಮಗೆ ವಹಿಸಿದ ಕೆಲಸಕಾರ್ಯಗಳನ್ನು ಇಂದು ಅಚ್ಚುಕಟ್ಟಾಗಿ ಬಹಳ ಬೇಗನೇ ಮಾಡಿ ಮುಗಿಸುತ್ತೀರಿ. ಅದೃಷ್ಟಸಂಖ್ಯೆ: 7
ಕಟಕ: ವಿಶ್ರಾಂತಿ ಪಡೆಯಲೂ ಸಹ ಆಗದ ದಿನ ಆಗಿಬಿಡುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಅದೃಷ್ಟಸಂಖ್ಯೆ: 9
ಸಿಂಹ: ಪರಿಚಿತರು ನಿಮ್ಮ ಬಳಿ ಸುಳ್ಳು ಹೇಳುತ್ತಾರೆ. ನಿಮಗದು ಸುಳ್ಳೆಂದು ತಿಳಿದು ಬೇಸರವನ್ನು ಮೂಡಿಸುತ್ತದೆ. ಅದೃಷ್ಟಸಂಖ್ಯೆ: 1
ಕನ್ಯಾ: ನಿಮ್ಮ ದೃಷ್ಟಿಕೋನವು ಅರ್ಥವೇ ಆಗದವರು ತಾಳ್ಮೆ ಇಲ್ಲದೆ ನಿಮ್ಮ ಬಳಿ ಜಗಳ ಆಡುತ್ತಾರೆ. ನೀವು ಸಿಟ್ಟಾಗದಿರಿ. ಅದೃಷ್ಟಸಂಖ್ಯೆ: 2
ತುಲಾ: ಕಷ್ಟ ಅನಿಸಿದರೂ ಸಹ ಪರವಾಗಿಲ್ಲ. ನೀವು ಮೊದಲು ಕೆಲಸ ಪ್ರಾರಂಭಿಸಿ. ನಂತರ ಎಲ್ಲಾ ಸುಲಭವಾಗಲಿದೆ. ಅದೃಷ್ಟಸಂಖ್ಯೆ: 6
ವೃಶ್ಚಿಕ: ದೊಡ್ಡ ಹುದ್ದೆಯಲ್ಲಿ ಇರುವವರ ಮುಂದೆ ಹೋಗಿ ತಲೆ ತಗ್ಗಿಸಬೇಕಾಗಬಹುದು. ಸತ್ಯವನ್ನೇ ಹೇಳಿಬಿಡಿ. ಅದೃಷ್ಟಸಂಖ್ಯೆ: 9
ಧನಸ್ಸು: ನಿಮಗೆ ಬೇಕಾದ ವಸ್ತುವಿನ ಬಗ್ಗೆ ನಾಚಿಕೆಪಟ್ಟು ಕೇಳದೆ ಹೋದರೆ ಅದು ನಿಮಗೆ ದೊರಕದೆ ಹೋದೀತು. ಅದೃಷ್ಟಸಂಖ್ಯೆ: 5
ಮಕರ: ತಪ್ಪು ಮಾಡುವುದು ಸಹಜವೇ ಆಗಿದೆ. ಆದರೆ ಅದನ್ನು ತಿದ್ದಿ ನಡೆಯುವುದು ಉತ್ತಮ. ಚಿಂತಿಸದಿರಿ. ಅದೃಷ್ಟಸಂಖ್ಯೆ: 1
ಕುಂಭ: ನೀವಿಂದು ಮಾಡಲಿರುವ ಒಂದು ಚಿಕ್ಕ ಪ್ರಯತ್ನವು ಬಹು ದೊಡ್ಡ ಪ್ರತಿಫಲ ಕೊಡುವ ಸಾಧ್ಯತೆಗಳಿವೆ. ಅದೃಷ್ಟಸಂಖ್ಯೆ: 6
ಮೀನ: ಬಹಳ ಚಡಪಡಿಕೆಯಲ್ಲಿ ಇರುತ್ತೀರಿ. ಕೊನೆಯ ಕ್ಷಣದಲ್ಲಿ ಸಹಾಯ ಲಭ್ಯವಾಗಿ ನೆಮ್ಮದಿ ಸಿಗುತ್ತದೆ. ಅದೃಷ್ಟಸಂಖ್ಯೆ: 3