ನಿತ್ಯ ಭವಿಷ್ಯ: ಈ ರಾಶಿಯವರಿಗೆ ಧನಲಾಭವಿದೆ. ಆದರೆ ಬಂದ ಹಣ ಕೈಯಲ್ಲಿ ಉಳಿಯದೆ ಬೇಗ ಖಾಲಿಯಾಗುವುದೇ ಸಮಸ್ಯೆಯಾಗಿದೆ.

Nitya-Bhavishya-vvani-1-2-1
Published on

ಮೇಷ: ಇಷ್ಟ ಇಲ್ಲವಾದರೂ ಉದ್ಯೋಗ ನಿಮಿತ್ತ ದೂರ ಪ್ರಯಾಣ ಮಾಡಬೇಕಾಗಬಹುದು. ಖರ್ಚುಗಳಿಂದ ಬೇಸರ. ಅದೃಷ್ಟಸಂಖ್ಯೆ: 7

ವೃಷಭ: ಸಹೋದರ, ಸಹೋದರಿ ಜತೆಗೆ ವಾಗ್ವಾದ ಮಾಡಲು ಹೋಗದಿರಿ. ಅವರು ಏನೇ ಹೇಳಿದರೂ ಮೌನವಾಗಿರಿ. ಅದೃಷ್ಟಸಂಖ್ಯೆ: 2

ಮಿಥುನ: ಧನಲಾಭವಿದೆ. ಆದರೆ ಬಂದ ಹಣ ಕೈಯಲ್ಲಿ ಉಳಿಯದೆ ಬೇಗ ಖಾಲಿಯಾಗುವುದೇ ಸಮಸ್ಯೆಯಾಗಿದೆ. ಅದೃಷ್ಟಸಂಖ್ಯೆ: 1

ಕಟಕ: ಆತ್ಮವಿಶ್ವಾಸ ಉತ್ತುಂಗದಲ್ಲಿರುವ ದಿನ. ಏನೇ ಬಂದರೂ ಎದುರಿಸುವಿರಿ. ದೇವರ ಅನುಗ್ರಹ ನಿಮ್ಮ ಪಾಲಿಗಿದೆ. ಅದೃಷ್ಟಸಂಖ್ಯೆ: 5

ಸಿಂಹ: ನಿಮಗೆ ತೊಂದರೆ ಕೊಡಲು, ನಷ್ಟ ಉಂಟುಮಾಡಲು ಶತ್ರುಗಳು ಅತ್ಯಂತ ಸನಿಹದಲ್ಲಿದ್ದಾರೆ. ಎಚ್ಚರ. ಅದೃಷ್ಟಸಂಖ್ಯೆ: 4

ಕನ್ಯಾ: ಒಂದು ನಿಮಿಷವನ್ನೂ ವ್ಯರ್ಥಗೊಳಿಸದೆ ಸಮಯವನ್ನು ಉತ್ತಮವಾಗಿ ಬಳಸುವಿರಿ. ಶಿವದರ್ಶನ ಯೋಗ. ಅದೃಷ್ಟಸಂಖ್ಯೆ: 7

ತುಲಾ: ನಿಮಗೆ ಶತ್ರುಗಳೇ ಇಲ್ಲ. ಎಲ್ಲರೂ ಮಿತ್ರರೇ. ಅನಿವಾರ್ಯವಾಗಿ ಮಿತ್ರರ ಕೆಲಸಗಳನ್ನು ಮಾಡಿಕೊಡಬೇಕಾಗುತ್ತದೆ. ಅದೃಷ್ಟಸಂಖ್ಯೆ: 3

ವೃಶ್ಚಿಕ: ಆಕಸ್ಮಿಕವಾಗಿ ನಿಮಗೆ ಇಷ್ಟವಿಲ್ಲದ ಬಾಂಧವರ ಆಗಮನ. ಅನಿವಾರ್ಯವಾದರೂ ಬೇಸರಿಸದೆ ಅವರನ್ನು ಸತ್ಕರಿಸಿ. ಅದೃಷ್ಟಸಂಖ್ಯೆ: 6

ಧನಸ್ಸು: ಆರೋಗ್ಯಬಾಧೆ ಕಾಡಬಹುದು. ಆದರೆ ಬಾಳಸಂಗಾತಿ ಅಥವಾ ಸ್ನೇಹಿತರ ಸಹಾಯವನ್ನು ಪಡೆಯಿರಿ. ಅದೃಷ್ಟಸಂಖ್ಯೆ: 5

ಮಕರ: ಏನೋ ಕೆಲಸಕ್ಕೆ ನಿರ್ಧರಿಸಿದರೂ ಅಡ್ಡಿ ಉಂಟಾಗುತ್ತದೆ. ಜನ ಸುಮ್ಮನೆ ಜಗಳ ಮಾಡುತ್ತಿದ್ದಾರೆನಿಸಬಹುದು. ಅದೃಷ್ಟಸಂಖ್ಯೆ: 4

ಕುಂಭ:ನಿಮಗೆ ಸಿಗುವ ಆದ್ಯತೆಯಿಂದ ಸಿಟ್ಟು ಹಾಗೂ ಅಹಂ ಹೆಚ್ಚುತ್ತದೆ. ಮನೆಯ ಸದಸ್ಯರ ಜತೆ ವಾಗ್ವಾದ ಬೇಡ. ಅದೃಷ್ಟಸಂಖ್ಯೆ: 8

ಮೀನ: ನಿರುದ್ಯೋಗಿಗಳು ಕೆಲಸಕ್ಕೆ ಯತ್ನಿಸಿದಲ್ಲಿ ಯಶಸ್ಸಿದೆ. ಭೂವ್ಯವಹಾರಗಳ ಕುರಿತ ಮಾತುಕತೆ ಸಫಲವಾಗುತ್ತದೆ. ಅದೃಷ್ಟಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net