

| ವೇ|| ಬ್ರ|| ಶ್ರೀ ದೇವದತ್ತ ಶರ್ಮಾ ಗುರೂಜಿ
ಮೇಷ: ದೂರದ ಊರಿಂದ ನೆಂಟರ ಆಗಮನ. ಸ್ನೇಹಿತರೊಂದಿಗೆ ವಾಗ್ವಾದ. ಆಸ್ತಿ ವಿಚಾರದಲ್ಲಿ ಅಂತಿಮ ತೀರ್ಮಾನ. ಶುಭಸಂಖ್ಯೆ: 9
ವೃಷಭ: ಕಲಾವಿದರಿಗೆ ಉತ್ತಮ ಅವಕಾಶ. ಹಲವು ದಿನಗಳಿಂದ ನನೆಗುದಿಗೆ ಬಿದ್ದ ಕೆಲಸಕ್ಕೆ ಚಾಲನೆ. ಮನೆಯಲ್ಲಿ ಅಸಮಾಧಾನ. ಶುಭಸಂಖ್ಯೆ: 2
ಮಿಥುನ: ಅಷ್ಟಮದ ಶನಿ ಅನಿರೀಕ್ಷಿತ ಆಘಾತಗಳಿಗೆ ಕಾರಣನಾದಾನು. ದುರ್ಗೆಯನ್ನು ಆರಾಧಿಸಿ. ಉದ್ಯೋಗ ಕ್ಷೇತ್ರದಲ್ಲಿ ಅಭಿವೃದ್ಧಿ. ಶುಭಸಂಖ್ಯೆ:3
ಕಟಕ: ಪತ್ನಿಯೊಂದಿಗೆ ವಿರಸ. ಮಕ್ಕಳ ವಿಚಾರದಲ್ಲಿ ಎಚ್ಚರ. ಹಿರಿಯರ ಸಲಹೆ ಪಡೆಯಿರಿ. ದಿನಾಂತ್ಯದಲ್ಲಿ ಉತ್ತಮ ಭೋಜನ. ಶುಭಸಂಖ್ಯೆ:3
ಸಿಂಹ: ಮಿತ್ರರೇ ಶತ್ರುಗಳು ಆಗಬಹುದು. ಮಹತ್ವದ ತೀರ್ಮಾನಕ್ಕೆ ಮನೆಯವರಿಂದ ವಿರೋಧ. ಸುಬ್ರಹ್ಮಣ್ಯನನ್ನು ಆರಾಧಿಸಿ. ಶುಭಸಂಖ್ಯೆ: 6
ಕನ್ಯಾ: ನ್ಯಾಯಾಲಯದಲ್ಲಿ ಆಸ್ತಿ ವಿಚಾರಕ್ಕೆ ತೀರ್ಪು. ಕುಟುಂಬದೊಂದಿಗೆ ಚರ್ಚಿಸಿ ನಿರ್ಧರಿಸಿ. ವೈದ್ಯರ ಸಲಹೆ ನಿರ್ಲಕ್ಷಿಸಬೇಡಿ. ಶುಭಸಂಖ್ಯೆ: 2
ತುಲಾ: ಮಕ್ಕಳ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ. ಕುಟುಂಬದಲ್ಲಿ ಅನಿರೀಕ್ಷಿತ ತಿರುವು. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ನಿಂದನೆ. ಶುಭಸಂಖ್ಯೆ: 6
ವೃಶ್ಚಿಕ: ಸಹೋದರರೊಂದಿಗೆ ಅಸಮಾಧಾನ. ಸಹೋದರಿಯರೊಂದಿಗೆ ಭೋಜನ. ಆತ್ಮೀಯ ಸ್ನೇಹಿತನಿಂದ ಸೂಕ್ತ ಸಲಹೆ. ಶುಭಸಂಖ್ಯೆ: 5
ಧನುಸ್ಸು: ಆರ್ಥಿಕ ಪರಿಸ್ಥಿತಿ ಬಿಗಡಾಯಿಸಬಹುದು. ಅಪವ್ಯಯ ಮಾಡಬೇಡಿ. ಸಾರ್ವಜನಿಕ ಕ್ಷೇತ್ರದಲ್ಲಿ ಎಚ್ಚರ. ಶುಭಸಂಖ್ಯೆ: 2
ಮಕರ: ಆರೋಗ್ಯ ಸಮಸ್ಯೆ ಉಲ್ಬಣ ಆಗಬಹುದು. ಆಹಾರ ಸೇವಿಸುವಾಗ ಹಿತವಾಗಿ ಮಿತವಾಗಿ ಇರಲಿ. ಧನ್ವಂತರಿಯನ್ನು ಭಜಿಸಿ. ಶುಭಸಂಖ್ಯೆ 7
ಕುಂಭ: ರಾಜಕೀಯ ರಂಗದಲ್ಲಿ ಇರುವವರಿಗೆ ಅವಮಾನ. ಸಂಗೀತಗಾರರಿಗೆ ವಿಶೇಷ ದಿನ. ಧನದ ಅಪವ್ಯಯವಾದೀತು, ಹುಷಾರು. ಶುಭಸಂಖ್ಯೆ: 3
ಮೀನ: ಅನಪೇಕ್ಷಿತ ಘಟನೆಗಳು ನಡೆಯಬಹುದು. ಕುಟುಂಬದಲ್ಲಿ ಶುಭ ಕೆಲಸಕ್ಕೆ ಚಾಲನೆ. ಮಗಳ ಮದುವೆ ನಿಶ್ಚಯವಾಗಿ ಸಡಗರ. ಶುಭಸಂಖ್ಯೆ 6