

ಮೇಷ: ಧೈರ್ಯಂ ಸರ್ವತ್ರ ಸಾಧನಂ ಎನ್ನುವಂತೆ ವರ್ತಿಸಿ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ ಬೇಡ. ಶುಭಸಂಖ್ಯೆ: 9
ವೃಷಭ: ಬಂಧು-ಮಿತ್ರರೊಂದಿಗೆ ಸಂತೋಷಕೂಟ. ಆತ್ಮೀಯರ ಸಲಹೆ ತಿರಸ್ಕರಿಸಬೇಡಿ. ಮೇಲಧಿಕಾರಿಗಳಿಂದ ದಾರಿ.ಶುಭಸಂಖ್ಯೆ: 6
ಮಿಥುನ: ಅಷ್ಟಮದ ಶನಿ ಮಾನಸಿಕ ಹಿಂಸೆಗೆ ಕಾರಣವಾಗಬಹುದು. ಲಕ್ಷ್ಮಿ ನರಸಿಂಹನನ್ನು ಆರಾಧಿಸಿ. ದಿನಾಂತ್ಯಕ್ಕೆ ಶುಭ. ಶುಭಸಂಖ್ಯೆ: 7
ಕಟಕ: ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯ. ಅನಗತ್ಯ ವಾಗ್ವಾದಗಳಿಗೆ ಅವಕಾಶ ಕೊಡಬೇಡಿ. ತಾಳ್ಮೆಯಿಂದ ವರ್ತಿಸಿ. ಶುಭಸಂಖ್ಯೆ: 6
ಸಿಂಹ: ಒತ್ತಡಗಳನ್ನು ಜಾಗ್ರತೆಯಿಂದ ನಿಭಾಯಿಸಿ. ಆರೋಗ್ಯ ಸಮಸ್ಯೆ ಕಾಡಬಹುದು. ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 5
ಕನ್ಯಾ: ರಾಜಕಾರಣಿಗಳಿಗೆ ವಿಶೇಷ ಮನ್ನಣೆ. ಕಲಾವಿದರು ಬಂದ ಅವಕಾಶವನ್ನು ತಿರಸ್ಕರಿಸಬೇಡಿ. ವ್ಯಾಪಾರಸ್ಥರಿಗೆ ನಷ್ಟ. ಶುಭಸಂಖ್ಯೆ: 6
ತುಲಾ: ಗೃಹ ನಿರ್ಮಾಣಕ್ಕೆ ಚಾಲನೆ. ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಒಪ್ಪಂದ. ತಂದೆ ತಾಯಿಯ ಮಾತನ್ನು ತಿರಸ್ಕರಿಸಬೇಡಿ. ಶುಭಸಂಖ್ಯೆ: 3
ವೃಶ್ಚಿಕ: ಸಹೋದರರೊಂದಿಗೆ ವಾಗ್ವಾದ. ಹಳೆಯ ಸ್ನೇಹಿತನ ಭೇಟಿ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 4
ಧನಸ್ಸು: ಮಾತೇ ನಿಮಗೆ ಮುಳುವಾಗಬಹುದು. ಯೋಚಿಸಿ ಮಾತನಾಡಿ. ಮಕ್ಕಳಿಂದ ಶುಭ ಸುದ್ದಿ. ಅನಾರೋಗ್ಯ ಸಾಧ್ಯತೆ. ಶುಭಸಂಖ್ಯೆ: 9
ಮಕರ: ಕೆಲಸ ಕಾರ್ಯಗಳಲ್ಲಿ ವಿಘ್ನ. ಮನೆಯವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಿ. ಮನಸ್ಸಿಗೆ ಸಮಾಧಾನ. ಶುಭಸಂಖ್ಯೆ: 7
ಕುಂಭ: ವ್ಯಾಪಾರಸ್ಥರಿಗೆ ಧನ ನಷ್ಟ. ವಿದ್ಯಾರ್ಥಿಗಳಿಗೆ ವಿಶೇಷ ಯಶಸ್ಸು. ನಿರೀಕ್ಷಿಸಿದ ಧನಲಾಭ. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 7
ಮೀನ : ಕಚೇರಿಯಲ್ಲಿ ವಿಶೇಷ ಜವಾಬ್ದಾರಿ. ಅನಿರೀಕ್ಷಿತ ಅತಿಥಿಯ ಆಗಮನ. ಧರ್ಮಕಾರ್ಯದಲ್ಲಿ ಆಸಕ್ತಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 6