

ಮೇಷ: ಕೊಟ್ಟ ಮಾತನ್ನು ಮುರಿಯದೆಯೇ ನಡೆಸಿಕೊಡಿ. ಇದರಿಂದಾಗಿ ಪ್ರಶಂಸೆಯ ಜತೆಗೆ ನಿಮಗೂ ಒಳಿತಾಗಲಿದೆ. ಶುಭಸಂಖ್ಯೆ: 7
ವೃಷಭ: ಬಾಹ್ಯ ಜಗತ್ತಿನ ಸಮಸ್ಯೆಗಳನ್ನು ನಿವಾರಣೆ ಮಾಡುವ ನಿಮ್ಮ ವಿವೇಚನಾಶಕ್ತಿಗೆ ಎಲ್ಲರೂ ಮಾರುಹೋಗಲಿದ್ದಾರೆ. ಶುಭಸಂಖ್ಯೆ: 1
ಮಿಥುನ: ತಾಯಿ ಮೂಕಾಂಬಿಕೆಯನ್ನು ಆರಾಧಿಸಿ. ನಿಮ್ಮ ಮಾತುಗಳಿಗೆ ಅರ್ಥಪೂರ್ಣತೆಯ ಸಿದ್ಧಿಯೂ ಸಾಧ್ಯವಾಗಲಿದೆ. ಶುಭಸಂಖ್ಯೆ: 4
ಕಟಕ: ಅನಾರೋಗ್ಯದ ಮಧ್ಯೆಯೂ ಕೆಲಸ ಮಾಡಿ ಕಷ್ಟಪಡದಿರಿ. ಸಂಗಾತಿಯ ಬೆಂಬಲದಿಂದ ಮನಶ್ಶಾಂತಿ ಸಿಗಲಿದೆ. ಶುಭಸಂಖ್ಯೆ: 8
ಸಿಂಹ: ನಿಮ್ಮ ಬಹು ದೊಡ್ಡ ಸಂತೋಷಕ್ಕೆ ಇಂದು ಮಕ್ಕಳೇ ಕಾರಣರಾಗುವ ವಿಸ್ಮಯವೊಂದು ಘಟಿಸಲಿದೆ. ಚಿಂತಿಸದಿರಿ. ಶುಭಸಂಖ್ಯೆ: 2
ಕನ್ಯಾ: ಹಲವರ ಪಾಲಿಗೆ ಹೊಸ ವಾಹನವನ್ನು ಖರೀದಿಸುವ ಅವಕಾಶ ಒದಗಿಬರಲಿದೆ. ಆದರೆ ವಾಹನ ಅನಿವಾರ್ಯವಲ್ಲ. ಶುಭಸಂಖ್ಯೆ: 5
ತುಲಾ: ಯಾವ ದಿಕ್ಕಿನತ್ತ ತಿರುಗಿದರೂ ದಾರಿಯೇ ಕಾಣಿಸುತ್ತಿಲ್ಲ ಎಂಬ ತಳಮಳಕ್ಕೆ ಹಿರಿಯ ರೊಬ್ಬರಿಂದ ಪರಿಹಾರ ಲಭ್ಯ. ಶುಭಸಂಖ್ಯೆ: 9
ವೃಶ್ಚಿಕ: ಎಷ್ಟು ಯತ್ನಿಸಿದರೂ ಬದಲಾಗದ ವ್ಯಕ್ತಿಗಳನ್ನು ದೂರಕ್ಕೆ ಸರಿಸಿಬಿಡಿ. ಅದರಿಂದ ನಿಮಗೇ ನೆಮ್ಮದಿ ದೊರೆಯಲಿದೆ. ಶುಭಸಂಖ್ಯೆ: 3
ಧನುಸ್ಸು: ಕೋಪಿಸಿಕೊಂಡು ಕೂಗಾಡುವ ಜನರನ್ನು ನಿಮ್ಮ ಶಾಂತತೆಯಿಂದ ನಿಯಂತ್ರಿಸಿ. ಅವರಿಂದ ನೆರವು ಲಭಿಸಲಿದೆ. ಶುಭಸಂಖ್ಯೆ: 6
ಮಕರ: ಸಂಸಾರದಲ್ಲಿ ಕೋಪತಾಪಗಳ ಪ್ರದರ್ಶನ ಬೇಡ. ಮುಂಗೋಪವನ್ನು ನಿಯಂತ್ರಿಸಿದರೆ ಒತ್ತಡ ನಿವಾರಣೆಯಾಗಲಿದೆ. ಶುಭಸಂಖ್ಯೆ: 5
ಕುಂಭ: ಅಪರೂಪದ ಕಾರ್ಯದಲ್ಲಿ ಶೀಘ್ರವೇ ಯಶಸ್ಸನ್ನು ಪಡೆದುಕೊಳ್ಳುವುದಕ್ಕಾಗಿ ಮೃತ್ಯುಂಜಯನನ್ನು ಆರಾಧಿಸಿ. ಶುಭಸಂಖ್ಯೆ: 7
ಮೀನ: ನಿಮ್ಮ ಮಾತಿನ ಚಾಣಾಕ್ಷತೆಯ ಮೇಲೆ ಭರವಸೆ ಇದ್ದೇ ಇರಲಿ. ಇದರಿಂದಲೇ ಗೆಲ್ಲುವ ದಾರಿಗಳಿಗೆ ಬೆಂಬಲವಿದೆ. ಶುಭಸಂಖ್ಯೆ: 1