ಈ ರಾಶಿಯವರು ಯಾರಿಗೋ ನೀಡಬೇಕಾದ ವಸ್ತುವನ್ನು ಇನ್ಯಾರಿಗೋ ನೀಡುವ ಸಾಧ್ಯತೆ ಇದೆ ಹೀಗಾಗಿ ಎಚ್ಚರ ವಹಿಸಬೇಕು

Nitya-Bhavishya-vvani-1-2-1
Published on

ಮೇಷ: ನಿಮ್ಮ ಸಹಜ ವಾದದ ಪ್ರವೃತ್ತಿಯಿಂದ ದೂರ ಇದ್ದರೆ ಉತ್ತಮ ಗೌರವ ಪ್ರಾಪ್ತಿಯಾಗಿ ಸಂತಸದ ದಿನವಾಗಲಿದೆ. ಅದೃಷ್ಟಸಂಖ್ಯೆ: 6

ವೃಷಭ: ವಸ್ತುವನ್ನು ಎಲ್ಲಿಯೋ ಇಟ್ಟು ಇನ್ನೆಲ್ಲಿಯೋ ಹುಡುಕಿ ಕಳೆದುಹೋಯಿತು ಎಂದು ಕಳವಳಪಡಬೇಡಿ. ಅದೃಷ್ಟಸಂಖ್ಯೆ: 4

ಮಿಥುನ: ನಿಮ್ಮ ಸ್ವಭಾವದ ಕಾರಣ ಎಲ್ಲ ಸೌಲಭ್ಯ ಇದ್ದರೂ ಆ ಸೌಲಭ್ಯಗಳನ್ನು ಬಳಸಿಕೊಳ್ಳಲು ಆಗದೆ ಕಷ್ಟಪಡುತ್ತೀರಿ. ಅದೃಷ್ಟಸಂಖ್ಯೆ: 2

ಕಟಕ: ಅಸಾಧ್ಯ ಎಂದುಕೊಂಡಿದ್ದ, ಬಹುತೇಕ ನಿಂತೇ ಹೋಗಿದ್ದ ಸರ್ಕಾರಿ ಕೆಲಸ ಮುಂದಕ್ಕೆ ಸಾಗುವ ಸಾಧ್ಯತೆಯಿದೆ. ಅದೃಷ್ಟಸಂಖ್ಯೆ: 5

ಸಿಂಹ: ನಿಂತು ಮಾಡುವ ಕೆಲಸವನ್ನೂ ಕೂತು ಮಾಡೋಣ ಎನಿಸುವ ಆಲಸ್ಯದ ದಿನ. ಅವಮಾನ ಆದೀತು. ಎಚ್ಚರ. ಅದೃಷ್ಟಸಂಖ್ಯೆ: 1

ಕನ್ಯಾ: ಯಾರು ಏನೇ ತಿಳಿಸಿದರೂ ಹೀಯಾಳಿಕೆ ಮಾಡುತ್ತಿದ್ದಾರೆ ಎನಿಸುತ್ತದೆ. ಅನುಮಾನದ ಕಣ್ಣಿನಿಂದಲೇ ನೋಡುತ್ತೀರಿ. ಅದೃಷ್ಟಸಂಖ್ಯೆ: 7

ತುಲಾ: ಯಾರಿಗೋ ನೀಡಬೇಕಾದ ವಸ್ತು ಇನ್ಯಾರಿಗೋ ನೀಡುವ ಸಾಧ್ಯತೆ ಹೆಚ್ಚು. ಬಹಳ ಎಚ್ಚರದಿಂದ ಇರಬೇಕು. ಅದೃಷ್ಟಸಂಖ್ಯೆ: 6

ವೃಶ್ಚಿಕ: ಎಲ್ಲಿಗೆ ಹೋದರೂ ಅಥವಾ ಮನೆಯಲ್ಲೇ ಇದ್ದರೂ ನಿಮ್ಮ ಮೇಲೆ ಅವಲಂಬಿತರಾಗುವ ಜನ ಹೆಚ್ಚಾಗುತ್ತಾರೆ. ಅದೃಷ್ಟಸಂಖ್ಯೆ: 4

ಧನಸ್ಸು: ಏನೇ ಪ್ರಯತ್ನ ಮಾಡಿದರೂ ಸತ್ಯವನ್ನೇ ನುಡಿಯಬೇಕಾದ ದಿನ. ಸುಳ್ಳು ಹೇಳಿದರೆ ಸಿಕ್ಕಿಹಾಕಿಕೊಳ್ಳುತ್ತೀರಿ. ಅದೃಷ್ಟಸಂಖ್ಯೆ: 5

ಮಕರ: ಕೆಲಸದ ಒತ್ತಡ ಜಾಸ್ತಿ ಆಗುತ್ತಿದೆ, ಇದನ್ನು ಸಹಿಸಿಕೊಳ್ಳಲು ಆಗದು ಎನ್ನುವ ಸ್ಥಿತಿಗೆ ತಲುಪುವ ಸಾಧ್ಯತೆ ಇದೆ. ಅದೃಷ್ಟಸಂಖ್ಯೆ: 3

ಕುಂಭ: ಕೆಲವರನ್ನು ದೂರ ಇಟ್ಟರೆ ಮಾತ್ರ ನಿಮ್ಮ ಕೆಲಸಗಳು ಸರಾಗವಾಗಿ ಸಾಗುವುದು ಎಂದು ನಿಮಗೇ ತಿಳಿಯುತ್ತದೆ. ಅದೃಷ್ಟಸಂಖ್ಯೆ: 1

ಮೀನ: ಮಾತಾಡಬೇಡಿ, ಮೌನವಾಗಿರಿ ಎಂದು ನಿಮಗೆ ಮೇಲಿಂದ ಮೇಲೆ ಸಲಹೆ ಬರುವುದು ಆಶ್ಚರ್ಯ ಉಂಟುಮಾಡುತ್ತದೆ. ಅದೃಷ್ಟಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net