

ಮೇಷ: ವಿವಿಧ ಮೂಲಗಳಿಂದ ಹಣ ಬರುವುದು. ಇದರಿಂದ ಇಂದಿನ ದಾರಿ ಸುಗಮ. ಪ್ರಯಾಣದಲ್ಲಿ ಎಚ್ಚರ ಅಗತ್ಯ. ಶುಭಸಂಖ್ಯೆ: 7
ವೃಷಭ: ವೃತ್ತಿಯಲ್ಲಿ ಅನುಸರಿಸುತ್ತಿರುವ ಕ್ರಮಗಳು ಸರಿಯಾಗಿವೆಯೇ ಎಂದು ಪರಿಶೀಲನೆ ಮಾಡಿ ಮುಂದೆ ಸಾಗಿ. ಶುಭಸಂಖ್ಯೆ: 4
ಮಿಥುನ: ದೊಡ್ಡ ಮೊತ್ತದ ವ್ಯವಹಾರವಿದ್ದಲ್ಲಿ ಪಾಲುದಾರರನ್ನು ಲಘುವಾಗಿ ಭಾವಿಸದಿರಿ. ಮುಂದೆ ಪಶ್ಚಾತ್ತಾಪಪಡುವಿರಿ. ಶುಭಸಂಖ್ಯೆ: 1
ಕಟಕ: ಮಕ್ಕಳೆದುರು ಸಂಗಾತಿಯ ಜತೆ ಜಗಳ ಆಡಬೇಡಿ. ಅವರು ನಿಮ್ಮ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಶುಭಸಂಖ್ಯೆ: 3
ಸಿಂಹ: ಎಲ್ಲ ನಿಧಾನಗತಿಯಲ್ಲಿ ಸಾಗುವುದರಿಂದ ಈ ದಿನ ದೀರ್ಘವಾಗಿದೆ ಎನಿಸುವುದು. ಒಂಟಿತನವೂ ಕಾಡುವುದು. ಶುಭಸಂಖ್ಯೆ: 1
ಕನ್ಯಾ: ವ್ಯವಹಾರದಲ್ಲಿ ಎಚ್ಚರ ವಹಿಸುವುದು ಅಗತ್ಯ. ಕೆಲವರು ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರ ಹೂಡಬಹುದು. ಶುಭಸಂಖ್ಯೆ: 9
ಇದನ್ನೂ ಓದಿ ಶಿವಮೊಗ್ಗಕ್ಕೆ ಭಯೋತ್ಪಾದನೆ ನಂಟು ಇದೇ ಮೊದಲೇನಲ್ಲ!
ತುಲಾ: ಯಾರಿಗೋ ಜಾಮೀನು ನೀಡಿ ಅಲಕ್ಷ್ಯ ಮಾಡಿದ್ದರ ಫಲವಾಗಿ ನೀವೇ ಆ ಹಣ ಕಟ್ಟಬೇಕಾದೀತು. ಶುಭಸಂಖ್ಯೆ: 2
ವೃಶ್ಚಿಕ: ಮಕ್ಕಳು, ಮೊಮ್ಮಕ್ಕಳ ಭೇಟಿ ಮನಸ್ಸಿಗೆ ಸಂತಸ ತರುವುದು. ಗ್ರಹಗತಿ ಕೆಟ್ಟರೆ ಅವರೇ ನಿಮ್ಮನ್ನು ದೂರುವರು. ಶುಭಸಂಖ್ಯೆ: 5
ಧನಸ್ಸು: ಕೆಮ್ಮು, ಕಫದಂತಹ ತೊಂದರೆಗಳಿಂದ ನರಳಬೇಕಾಗಬಹುದು. ಬೇಗನೆ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಿ. ಶುಭಸಂಖ್ಯೆ: 8
ಮಕರ: ಮುಂದೆ ಬರಬಹುದಾದ ತೊಂದರೆಯನ್ನು ಮೊದಲೇ ಊಹಿಸಿಕೊಂಡು ಪರಿಹಾರ ಕಂಡುಕೊಳ್ಳುವುದು ಉತ್ತಮ. ಶುಭಸಂಖ್ಯೆ: 4
ಕುಂಭ: ಕಲಿಕೆಯ ವಿಚಾರದಲ್ಲಿ ಅತೀವ ಆಸಕ್ತಿಯುಳ್ಳ ನೀವು ಅದರಿಂದ ಸಿಗುವ ಸಂತೋಷವನ್ನು ಅನುಭವಿಸಲಿದ್ದೀರಿ. ಶುಭಸಂಖ್ಯೆ: 6
ಮೀನ: ಎಷ್ಟೇ ಚಾಣಾಕ್ಷತನದಿಂದ ವಾದ ಮಂಡನೆ ಮಾಡಿದರೂ ಸಂಗಾತಿಯ ಎದುರು ನೀವು ಸೋಲನ್ನು ಒಪ್ಪಿಕೊಳ್ಳಬೇಕು. ಶುಭಸಂಖ್ಯೆ: 7