ಈ ರಾಶಿಯವರಿಗೆ ಮನೆಯಲ್ಲಿ ಜಗಳ ಆಗುತ್ತದೆ. ಎಚ್ಚರ ವಹಿಸಬೇಕು

Nitya-Bhavishya-vvani-1-2-1
Published on

ಮೇಷ: ಮನೆಯಲ್ಲಿ ಹಳೆಯ ಅನಗತ್ಯ ವಿಚಾರಗಳ ರ್ಚಚಿದರೆ ಮನಸ್ತಾಪ, ಜಗಳ ಆಗುತ್ತದೆ. ಮೌನವೇ ಉತ್ತಮ. ಅದೃಷ್ಟಸಂಖ್ಯೆ: 1

ವೃಷಭ: ಪ್ರಮುಖರ ಮಾತನ್ನೂ ಪೂರ್ಣ ಕೇಳದೆ ತಪ್ಪು ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ. ತುಸು ತಾಳ್ಮೆ ಇರಲಿ. ಅದೃಷ್ಟಸಂಖ್ಯೆ: 9

ಮಿಥುನ: ಬಟ್ಟೆ ಹಾಕಿಕೊಳ್ಳುವ ವಿಚಾರದಿಂದ ಊಟ ಮಾಡುವ ತನಕ ಎಲ್ಲದರಲ್ಲೂ ಮನಸ್ಸು ಗೊಂದಲಗೊಳ್ಳಬಹುದು. ಅದೃಷ್ಟಸಂಖ್ಯೆ: 5

ಕಟಕ: ಈ ಹಿಂದೆ ನಿಮಗೆ ಸಾಲ ಕೊಟ್ಟ ವ್ಯಕ್ತಿ ಅದನ್ನು ಬೇಗ ತೀರಿಸು ಎಂದು ಒತ್ತಾಯಪೂರ್ವಕವಾಗಿ ಕೇಳಬಹುದು. ಅದೃಷ್ಟಸಂಖ್ಯೆ: 6

ಸಿಂಹ: ಅಯೋಗ್ಯರನ್ನು ಹೊಗಳಬೇಕಾಗುತ್ತದೆ. ಜನ ಈ ನಡೆಯ ಹಿಂದೆ ಏನೋ ಮರ್ಮ ಇರಬೇಕೆಂದುಕೊಳ್ಳುತ್ತಾರೆ. ಅದೃಷ್ಟಸಂಖ್ಯೆ: 2

ಕನ್ಯಾ:  ಸಮಯದ ಯೋಗ್ಯ ಬಳಕೆಯ ಅಭ್ಯಾಸ ಇರದ ನಿಮಗೆ ಅನುಭವವೊಂದು ಆಅಭ್ಯಾಸ ಮಾಡಿಸಬಹುದು. ಅದೃಷ್ಟಸಂಖ್ಯೆ: 4

ತುಲಾ: ನೀವು ಮಾಡಿದ ರಹಸ್ಯ ಕೆಲಸಕ್ಕೆ ನೆರವಾದ ವ್ಯಕ್ತಿಯ ದಡ್ಡತನದಿಂದ ಅದು ಜಗಜ್ಜಾಹೀರು ಆದೀತು. ಎಚ್ಚರವಿರಲಿ. ಅದೃಷ್ಟಸಂಖ್ಯೆ: 5

ವೃಶ್ಚಿಕ: ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಅವಕಾಶ ಸಿಗಲಿದೆ. ಹಿಂದೇಟು ಹಾಕದೆ ಆದಷ್ಟು ಸಹಾಯ ಮಾಡಿ. ಅದೃಷ್ಟಸಂಖ್ಯೆ: 3

ಧನಸ್ಸು: ಆತ್ಮಾಭಿಮಾನಕ್ಕೆ ಧಕ್ಕೆಯಾದೀತು ಎಂದು ಊಹಿಸಿ ಪ್ರಮುಖ ಕೆಲಸ ಮಾಡದೆ ಅವಕಾಶ ಕಳೆದುಕೊಳ್ಳುತ್ತೀರಿ. ಅದೃಷ್ಟಸಂಖ್ಯೆ: 2

ಮಕರ: ನಿಮ್ಮವರೇ ವಿಶೇಷ ಜವಾಬ್ದಾರಿ ಕೊಡುವ ಸಾಧ್ಯತೆ ಹೆಚ್ಚು. ನಿಮಗೂ ಆ ಹೊಣೆಯನ್ನು ನಿರಾಕರಿಸಲಾಗದು. ಅದೃಷ್ಟಸಂಖ್ಯೆ: 9

ಕುಂಭ: ನೀವು ಕಷ್ಟಪಟ್ಟು ಮಾಡಿದ ಕೆಲಸವನ್ನು ತಾನೇ ಮಾಡಿದ್ದು ಎಂದು ನಿಮ್ಮ ಪರಿಚಿತ ವ್ಯಕ್ತಿ ಸಾರಿಕೊಳ್ಳಬಹುದು. ಅದೃಷ್ಟಸಂಖ್ಯೆ: 5

ಮೀನ: ವಾಹನ ಚಾಲನೆ ನಷ್ಟವನ್ನು ತರುವ ಸಾಧ್ಯತೆ ಇದೆ. ಅನಿವಾರ್ಯವಾದಲ್ಲಿ ನಡೆದು ಹೋಗಿ ಕೆಲಸ ಮುಗಿಸಿಕೊಳ್ಳಿ. ಅದೃಷ್ಟಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net