ನಿತ್ಯ ಭವಿಷ್ಯ: ಈ ರಾಶಿಯವರು ಗುರಿಯ ಹತ್ತಿರ ಸಾಗಿ ಬಳಿಕ ಗುರಿಯಿಂದ ವಿಮುಖಗೊಳ್ಳುವ ಸಾಧ್ಯತೆ ಅಧಿಕ. ಹೀಗಾಗಿ ಎಚ್ಚರವಿರಲಿ

Nitya-Bhavishya-vvani-1-2
Published on

ಮೇಷ: ನಿಮಗೆ ಕೈಕೊಡುವಂತಹ ಮಂದಿಯೇ ಜಾಸ್ತಿಯಾಗಿದ್ದಾರೆ. ಇದನ್ನು ಚೆನ್ನಾಗಿ ತಿಳಿದುಕೊಂಡಿದ್ದರೆ ಕ್ಷೇಮವಿದೆ. ಶುಭಸಂಖ್ಯೆ: 2

ವೃಷಭ: ಹತ್ತಿರ ಹತ್ತಿರ ಸಾಗಿ, ಆ ಬಳಿಕ ನಿರ್ದಿಷ್ಟ ಗುರಿಯಿಂದ ವಿಮುಖಗೊಳ್ಳುವ ಸಾಧ್ಯತೆಗಳು ಅಧಿಕ. ಎಚ್ಚರವಿರಲಿ. ಶುಭಸಂಖ್ಯೆ: 8

ಮಿಥುನ: ಬರೀ ಮಾತುಗಳನ್ನೇ ಆಡುತ್ತಿರದೆ ಕೆಲಸಕ್ಕೆ ಕೈ ಹಚ್ಚಿ. ಅದರಿಂದಲೇ ಗುರುತರವಾದ ಕಾರ್ಯವೊಂದು ಸಿದ್ಧಿಸಲಿದೆ. ಶುಭಸಂಖ್ಯೆ: 1

ಕಟಕ: ವಿಷ್ಣುಪತ್ನಿಯಾದ ಶ್ರೀ ಮಹಾಲಕ್ಷಿ್ಮಯನ್ನು ಧ್ಯಾನಿಸಿ. ಇದರಿಂದ ಅನಿರೀಕ್ಷಿತವಾದ ಧನಪ್ರಾಪ್ತಿಗೆ ದಾರಿ ಇದೆ. ಶುಭಸಂಖ್ಯೆ: 5

ಸಿಂಹ: ಸರ್ರನೆ ಬರುವ ಚುಚ್ಚುವಂಥ ಮಾತುಗಳನ್ನು ನಿಯಂತ್ರಿಸುವ ಶಕ್ತಿಗೆ ನಿಮ್ಮನ್ನು ಒಗ್ಗಿಸಿಕೊಳ್ಳಿ. ಅಶಾಂತಿ ದೂರ. ಶುಭಸಂಖ್ಯೆ: 3

ಕನ್ಯಾ: ಒಳಗೊಳಗೆ ನಂಜನ್ನು ಹೊತ್ತು ಹೊರಗೆ ನಗೆಯನ್ನು ಬೀರುವ ಮಂದಿ ಇರುತ್ತಾರೆ. ಅವರ ಬಗ್ಗೆ ಜಾಗ್ರತೆ. ಶುಭಸಂಖ್ಯೆ: 8

ತುಲಾ: ಅನವಶ್ಯಕ ಖರ್ಚುಗಳಿಗೆ ದಾರಿ ಮಾಡಿಕೊಳ್ಳಬೇಡಿ. ಜತೆಗೆ ಸಾಲ ಮಾಡುವುದು ಖಂಡಿತ ಬೇಡ. ಶುಭಸಂಖ್ಯೆ: 6

ವೃಶ್ಚಿಕ: ಸಜ್ಜನರೊಬ್ಬರ ಅವಿರತವಾದ ಬೆಂಬಲದಿಂದ ಹೊಸದೇ ಆದ ಕಾರ್ಯಯೋಜನೆಯಲ್ಲಿ ಸಫಲತೆ ಸಿಗಲಿದೆ. ಶುಭಸಂಖ್ಯೆ: 3

ಧನಸ್ಸು: ಒಂದು ರೀತಿಯ ಹೊಸದೇ ಆದ ಉತ್ಸಾಹವನ್ನು ತಳೆಯಲು ಬುಧಗ್ರಹನ ಕೃಪೆ ನಿಮಗೆ ಲಭ್ಯವಾಗಲಿದೆ. ಶುಭಸಂಖ್ಯೆ: 9

ಮಕರ: ಗುರು ರಾಘವೇಂದ್ರರ ಅನುಗ್ರಹದಿಂದ ಸಂಕಲ್ಪ ಸಿದ್ಧಿ ಮತ್ತು ಅಧಿಕಾರದಲ್ಲಿ ಸಫಲತೆ ಎರಡೂ ಲಭ್ಯವಾಗಲಿದೆ. ಶುಭಸಂಖ್ಯೆ: 4

ಕುಂಭ: ಜೂಜು, ಇಸ್ಪೀಟ್, ರೇಸ್, ಇಂಥವುಗಳಿಗೆ ವಿನಾಕಾರಣವಾಗಿ ಹಣವನ್ನು ವ್ಯರ್ಥ ಮಾಡದಿರಿ. ಎಚ್ಚರ ಅಗತ್ಯ. ಶುಭಸಂಖ್ಯೆ: 2

ಮೀನ: ನಿಮ್ಮ ಮಾತುಗಳನ್ನು ವಿಶ್ವಾಸದಿಂದ ಕೇಳುವ ಮಂದಿಯ ಬೆಂಬಲ ಇದ್ದೇ ಇದೆ. ಚಿಂತಿಸುವುದು ಬೇಡ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net