

ಮೇಷ: ಖರ್ಚಿನ ದಾರಿಯನ್ನು ಇನ್ನೂ ಹೆಚ್ಚು ವಿಸ್ತಾರ ಮಾಡಿಕೊಳ್ಳದೆಯೇ ಉಳಿತಾಯದ ಬಗ್ಗೆ ಯೋಚಿಸಿ. ಒಳ್ಳೆಯದಾಗಲಿದೆ. ಶುಭಸಂಖ್ಯೆ: 1
ವೃಷಭ: ಆರೋಗ್ಯದ ವಿಚಾರಕ್ಕೆ ಪ್ರಾಮುಖ್ಯತೆಯನ್ನು ನೀಡಿ. ಆರೋಗ್ಯ ಅತ್ಯಂತ ಅವಶ್ಯವಾದದ್ದು ಎಂಬುದನ್ನು ಅರಿತುಕೊಳ್ಳಿ. ಶುಭಸಂಖ್ಯೆ: 3
ಮಿಥುನ: ನರಸಿಂಹನನ್ನು ಸ್ತುತಿಸುವುದರಿಂದ ನಿಮ್ಮ ಭಯ ನಿವಾರಣೆಯಾಗಿ ಲಕ್ಷ್ಮಿಯ ಅನುಗ್ರಹಕ್ಕೆ ಪಾತ್ರರಾಗುವಿರಿ. ಶುಭಸಂಖ್ಯೆ: 5
ಕಟಕ: ಬಾಳಿಗೆ ಹೊಸದಾದ ಚೌಕಟ್ಟುಗಳನ್ನು ರೂಪಿಸಿಕೊಳ್ಳಲು, ಆತ್ಮನಿರ್ಭರತೆಯನ್ನು ಹೊಂದಲು ಇದು ಸಕಾಲ. ಶುಭಸಂಖ್ಯೆ: 7
ಸಿಂಹ: ನಿಮ್ಮ ಯೋಜನೆಗಳ ಬಗ್ಗೆ ಯಾರಲ್ಲಿಯೂ ರ್ಚಚಿಸದಿರಿ. ಇಡೀ ಯೋಜನೆಯನ್ನು ಹಾಳುಮಾಡಬಹುದಾಗಿದೆ. ಶುಭಸಂಖ್ಯೆ: 9
ಕನ್ಯಾ: ಕೈಗೊಂಡ ಕಾರ್ಯಗಳೆಲ್ಲ ಯಾವುದೇ ವಿಘ್ನಗಳಿಲ್ಲದೆ ಕೈಗೂಡಲು ನಿರ್ವಿಘ್ನದಾಯಕ ಮಹಾಗಣೇಶನನ್ನು ಧ್ಯಾನಿಸಿ. ಶುಭಸಂಖ್ಯೆ: 2
ತುಲಾ: ಎಲ್ಲ ದಾರಿಗಳು ಮುಚ್ಚಿಕೊಂಡಿವೆ ಎಂಬ ಭಾವನೆಯನ್ನು ಇಟ್ಟುಕೊಳ್ಳಬೇಡಿ. ಹೆಚ್ಚಿನ ಪ್ರಯತ್ನದಿಂದ ಶುಭವಿದೆ. ಶುಭಸಂಖ್ಯೆ: 4
ವೃಶ್ಚಿಕ: ಯಾರ ಬಳಿಯೂ ಅನಗತ್ಯ ಮಾತುಗಳನ್ನು ಆಡಲು ಹೋಗದಿರಿ. ಸದ್ಯಕ್ಕೆ ಮೌನವಾಗಿ ಇರುವುದೇ ಉತ್ತಮವಾಗಿದೆ. ಶುಭಸಂಖ್ಯೆ: 6
ಧನಸ್ಸು: ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುತ್ತಾರೆ. ಹೀಗಾಗಿ ಯಾವ ಆಮಿಷಗಳಿಗೂ ಒಳಗಾಗದೆ ಸುರಕ್ಷತಾ ಭಾವದಿಂದಿರಿ. ಶುಭಸಂಖ್ಯೆ: 8
ಮಕರ: ಮನಸ್ಸಿಗೆ ಅನಿಸಿದ್ದೆಲ್ಲ ನೆರವೇರಲೇಬೇಕು ಎಂಬ ಹಠಮಾರಿ ಧೋರಣೆ ಬೇಡ. ಇದರಿಂದ ಸಮಸ್ಯೆ ಆದೀತು. ಶುಭಸಂಖ್ಯೆ: 1
ಕುಂಭ: ಸ್ನೇಹಿತರೊಡನೆ ಮಾತುಕತೆ, ಸಲಹೆ ಕೇಳುವುದು ಇವೆಲ್ಲ ತಪ್ಪಲ್ಲ. ಆದರೆ ಅಂತಿಮ ನಿರ್ಧಾರ ನಿಮ್ಮದೇ ಆಗಿರಲಿ. ಶುಭಸಂಖ್ಯೆ: 9
ಮೀನ: ಮಕ್ಕಳಿಂದ ಸಿಹಿ ಸುದ್ದಿಯನ್ನು ಕೇಳಲಿದ್ದೀರಿ. ದೂರಪ್ರಯಾಣದಲ್ಲಿ ವಿಶೇಷ ಎಚ್ಚರಿಕೆ ವಹಿಸುವುದು ಉತ್ತಮ. ಶುಭಸಂಖ್ಯೆ: 3