

ಮೇಷ: ಈಗ ಮುಗಿಯುತ್ತದೆ ಆಗ ಮುಗಿಯುತ್ತದೆ ಎನ್ನುತ್ತ ಯಾವುದೋ ಕೆಲಸಕ್ಕಾಗಿ ದಿನವನ್ನು ವ್ಯರ್ಥ ಮಾಡುತ್ತೀರಿ. ಅದೃಷ್ಟಸಂಖ್ಯೆ: 2
ವೃಷಭ: ಮನೆಯಲ್ಲಿ ಚಿಕ್ಕ ಪುಟ್ಟ ವಿಚಾರಗಳಿಗೂ ಸಿಡುಕು ಪ್ರದರ್ಶಿಸುವ ಸಾಧ್ಯತೆಗಳು ಹೆಚ್ಚು. ಆದಷ್ಟು ಮೌನವಾಗಿರಿ. ಅದೃಷ್ಟಸಂಖ್ಯೆ: 4
ಮಿಥುನ: ನಿಮಗೆ ಒಳ್ಳೆಯದಾಗಲಿ ಎಂದು ಆಶಿಸಿ ಸ್ನೇಹಿತರು ಮಾರ್ಗದರ್ಶನ ಮಾಡಲು ಬಂದರೆ ಅನುಮಾನಿಸದಿರಿ. ಅದೃಷ್ಟಸಂಖ್ಯೆ: 5
ಕಟಕ: ಹೊಸ ಆಲೋಚನೆಗಳು ಉತ್ಸಾಹ ತುಂಬುವ ಸಾಧ್ಯತೆ ಇದೆ. ಅದನ್ನು ಬಳಸಲು ನಿಮ್ಮ ಆಲಸ್ಯವನ್ನು ನಿವಾರಿಸಿ. ಅದೃಷ್ಟಸಂಖ್ಯೆ: 7
ಸಿಂಹ: ಆ ಮೇಲೆ ಮಾಡೋಣ ಎಂದುಕೊಂಡ ಕೆಲಸ ತೊಂದರೆ ತರಲಿದೆ ಎಂದು ಕಾಣುತ್ತಿದೆ. ಆದಷ್ಟು ಬೇಗ ಮಾಡಿ. ಅದೃಷ್ಟಸಂಖ್ಯೆ: 3
ಕನ್ಯಾ: ಚಿಕ್ಕ ಪುಟ್ಟ ವಿಚಾರಗಳಿಗೂ ಭಯವಾಗುತ್ತದೆ. ಬಂಡವಾಳ ಹೂಡಿಕೆ ಮಾಡದೆ ಇರುವುದರಲ್ಲೇ ನಿಮಗೆ ಲಾಭವಿದೆ. ಅದೃಷ್ಟಸಂಖ್ಯೆ: 5
ತುಲಾ: ತಂದೆಯ ಜತೆಗೆ ಮನಸ್ತಾಪ ಮಾಡಿಕೊಳ್ಳುವ ಸಾಧ್ಯತೆ ಇದೆ. ಅಂಥ ಸಂದರ್ಭ ಬಂದರೆ ಬೇಗ ಎಚ್ಚೆತ್ತುಕೊಳ್ಳಿ. ಅದೃಷ್ಟಸಂಖ್ಯೆ: 1
ವೃಶ್ಚಿಕ: ಸಾಲದ ಮರುಪಾವತಿ, ವ್ಯಾಪಾರ ಇವುಗಳಲ್ಲಿ ಯಾವುದು ಎಂದು ಸ್ಪಷ್ಟವಿಲ್ಲವಾದರೂ ಧನಲಾಭದ ಸಾಧ್ಯತೆಯಿದೆ. ಅದೃಷ್ಟಸಂಖ್ಯೆ: 6
ಧನಸ್ಸು: ಊಟದ ವಿಚಾರದಲ್ಲಿ ಕಾಳಜಿಯ ಆವಶ್ಯಕತೆ ಇದೆ. ರುಚಿಯ ಹಿಂದೆ ಬಿದ್ದರೆ ಹೊಟ್ಟೆ ಕೆಡಿಸಿಕೊಳ್ಳಬೇಕಾದೀತು. ಅದೃಷ್ಟಸಂಖ್ಯೆ: 2
ಮಕರ: ಯಾವುದೋ ಕೆಲಸ ಆಗುತ್ತದೆಂದು ಪ್ರಯತ್ನಿಸುತ್ತೀರಿ. ಅದು ಅನಿರ್ದಿಷ್ಟಾವಧಿಗೆ ಮುಂದೆ ಹೋಗಿ ಬೇಸರ. ಅದೃಷ್ಟಸಂಖ್ಯೆ: 5
ಕುಂಭ: ನಿಮ್ಮ ವಸ್ತುವನ್ನು ಪಡೆದವರು ಹಾಳು ಮಾಡಬಹುದು. ಇತರರಿಗೆ ಏನಾದರೂ ಕೊಡುವ ಮುನ್ನ ಚಿಂತಿಸಿ. ಅದೃಷ್ಟಸಂಖ್ಯೆ: 4
ಮೀನ: ‘ಬೆಕ್ಕಿಗೆ ಚೆಲ್ಲಾಟ...’ ಗಾದೆಯಂತೆ ಇಂದು ನಿಮ್ಮದು ಬೆಕ್ಕಿನ ಪಾತ್ರ. ಸಾಧ್ಯವಾದಲ್ಲಿ ಪರರಿಗೆ ಸಹಾಯ ಮಾಡಿ. ಅದೃಷ್ಟಸಂಖ್ಯೆ: 1