ನಿತ್ಯ ಭವಿಷ್ಯ: ಈ ರಾಶಿಯವರಿಗೆ ದೂರಪ್ರಯಾಣ ಮಾಡುವಂತೆ ಒತ್ತಡ ಬೀಳಬಹುದು

Nitya-Bhavishya-vvani-1-2-1
Published on

ಮೇಷ: ಮನೆ, ಕಚೇರಿ ಹೀಗೆ ಎಲ್ಲೆಡೆ ಆರ್ಥಿಕ ವಿಚಾರಗಳ ಬಗ್ಗೆ ಹೆಚ್ಚು ಮಾತುಕತೆ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಅದೃಷ್ಟಸಂಖ್ಯೆ: 3

ವೃಷಭ: ಮನಸ್ಸಿಗೆ ಹಿಡಿಸದಿದ್ದರೆ ಎಷ್ಟು ಬಗೆಯ ಆಹಾರ ಇದ್ದು ಏನು ಪ್ರಯೋಜನ? ಇಂದು ಆಹಾರ ತೃಪ್ತಿ ನೀಡದು. ಅದೃಷ್ಟಸಂಖ್ಯೆ: 7

ಮಿಥುನ: ಇಂದಾದರೂ ನಿಮ್ಮ ಕೆಲಸ ಮಾಡಿಕೊಡಲು ಆಗುತ್ತದೆಯೇ ಎಂದು ಆಸೆ ಕಂಗಳಿಂದ ಕಾಯಬೇಕಾಗಬಹುದು. ಅದೃಷ್ಟಸಂಖ್ಯೆ: 5

ಕಟಕ: ಶರೀರದ ಉಷ್ಣಾಂಶ ಚಿಂತೆಗೆ ದೂಡಲಿದೆ. ಇನ್ನು ಬೇಸಿಗೆಯಾಗಿರುವುದರಿಂದ ಚಿಂತೆ ಮಾಡುವುದು ಏನೂ ಬೇಡ. ಅದೃಷ್ಟಸಂಖ್ಯೆ: 1

ಸಿಂಹ: ಯಾವ ವಿಚಾರಕ್ಕೆ ಪ್ರಾಧಾನ್ಯತೆ ನೀಡಬೇಕೆಂದು ಗೊಂದಲ ಉಂಟಾಗಬಹುದು. ತಜ್ಞರಾದವರ ಸಲಹೆಯನ್ನು ತೆಗೆದುಕೊಳ್ಳಿ. ಅದೃಷ್ಟಸಂಖ್ಯೆ: 6

ಕನ್ಯಾ: ಈ ಹಿಂದೆ ಆಲೋಚನೆ ಮಾಡಿ ತಯಾರು ಮಾಡಿಟ್ಟುಕೊಂಡಿದ್ದ ವಸ್ತು / ವಿಚಾರದಿಂದ ಸಹಾಯವಾಗಲಿದೆ. ಅದೃಷ್ಟಸಂಖ್ಯೆ: 4

ತುಲಾ: ದೂರಪ್ರಯಾಣ ಮಾಡುವಂತೆ ಒತ್ತಡ ಬೀಳುವ ಸಾಧ್ಯತೆ ಇದೆ. ಹೊರಗಿನ ಪರಿಸ್ಥಿತಿ ನೋಡಿ ತೀರ್ವನಿಸಿ. ಅದೃಷ್ಟಸಂಖ್ಯೆ: 9

ವೃಶ್ಚಿಕ: ಮಕ್ಕಳ ವಿಚಾರದಲ್ಲಿ ಹೆಚ್ಚು ಸಮಯ ನೀಡಬೇಕಾಗುತ್ತದೆ. ಇತರ ಮುಖ್ಯ ಕೆಲಸಗಳು ಬಾಕಿ ಆಗಬಹುದು. ಅದೃಷ್ಟಸಂಖ್ಯೆ: 7

ಧನಸ್ಸು: ಆಹಾರದ ವಿಚಾರದಲ್ಲಿ ರುಚಿಗೆ ನೀಡಿದ ಪ್ರಾಧಾನ್ಯತೆ ನೀಡುವುದರಿಂದ ಹೊಟ್ಟೆನೋವು ಬಂದೀತು. ಎಚ್ಚರ. ಅದೃಷ್ಟಸಂಖ್ಯೆ: 5

ಮಕರ: ಮನೆಯವರ ಜತೆ ಬಂಗಾರ ಅಥವಾ ಭೂಮಿಯ ವಿಚಾರದಲ್ಲಿ ಮನಸ್ತಾಪವಾದೀತು. ಮೌನವಾಗಿರುವುದೇ ಸರಿ. ಅದೃಷ್ಟಸಂಖ್ಯೆ: 3

ಕುಂಭ: ಹಿರಿಯರ ಮಧ್ಯಸ್ಥಿಕೆಯಿಂದ ಬಾಳಸಂಗಾತಿಯ ಜತೆಗಿನ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳುವ ಅವಕಾಶ ದೊರೆಯಲಿದೆ. ಅದೃಷ್ಟಸಂಖ್ಯೆ: 2

ಮೀನ: ಸ್ನೇಹಿತ ಅಥವಾ ಇನ್ನೊಬ್ಬ ವ್ಯಕ್ತಿ ಬೇಸರ ಮಾಡಿಕೊಳ್ಳಬಾರದೆಂದು ಇಷ್ಟವಿಲ್ಲದ ಕೆಲಸವನ್ನೂ ಮಾಡುವಿರಿ. ಅದೃಷ್ಟಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net