

ಮೇಷ: ಆಪ್ತರ ಜತೆ ದೂರಪ್ರಯಾಣ ಮಾಡಲಿದ್ದೀರಿ. ಪ್ರೇಮಿಗಳಲ್ಲಿ ವಿರಸ ಮೂಡಬಹುದು. ಒರಟು ಮಾತಾಡದಿರಿ. ಶುಭಸಂಖ್ಯೆ: 9
ವೃಷಭ: ವಿದ್ಯುತ್ ಉಪಕರಣ ಬಳಕೆಯ ವೇಳೆ ಎಚ್ಚರ ಅಗತ್ಯವಾಗಿದೆ. ವಾಹನ ಚಾಲನೆಯ ವೇಳೆ ಜಾಗ್ರತೆ ವಹಿಸಿ. ಶುಭಸಂಖ್ಯೆ: 8
ಮಿಥುನ: ಸಂಬಂಧಗಳಲ್ಲಿ ಆತ್ಮೀಯತೆ ಮರಳಲಿದೆ. ಭೂಸಂಬಂಧಿ ವಿವಾದಗಳಲ್ಲಿ ನಿಮಗೇ ಗೆಲುವು ದೊರೆಯಲಿದೆ. ಶುಭಸಂಖ್ಯೆ: 6
ಕಟಕ: ಆರೋಗ್ಯದಲ್ಲಿ ತುಸು ಏರುಪೇರುಗಳು ಜರುಗಬಹುದು. ಹಿತಶತ್ರುಗಳಿಂದ ಅಪಾಯ ಸಂಭವಿಸದಂತೆ ಎಚ್ಚರವಿರಲಿ. ಶುಭಸಂಖ್ಯೆ: 7
ಸಿಂಹ: ಮಕ್ಕಳ ವಿದ್ಯಾಭ್ಯಾಸದ ಚಿಂತೆ ಹೆಚ್ಚಲಿದೆ. ಕೈಗೊಂಡ ಕೆಲಸ ವಿಳಂಬವಾಗಬಹುದು. ಕುಲದೇವರನ್ನು ಆರಾಧಿಸಿ. ಶುಭಸಂಖ್ಯೆ: 2
ಕನ್ಯಾ: ಹಣಕಾಸು ವಿಚಾರದಲ್ಲಿ ಸಂಕಷ್ಟಗಳನ್ನು ಎದುರಿಸುವಿರಿ. ಆರ್ಥಿಕತೆಯ ಪುನಶ್ಚೇತನಕ್ಕೆ ಮಹಾಲಕ್ಷ್ಮಿಯನ್ನು ಧ್ಯಾನಿಸಿ. ಶುಭಸಂಖ್ಯೆ: 1
ತುಲಾ: ಹೊಸ ಮನೆಯ ನಿರ್ವಣಕಾರ್ಯದಲ್ಲಿ ಪ್ರಗತಿಯಿದೆ. ಔಷಧೀಯ ವ್ಯಾಪಾರಿಗಳಿಗೆ ಲಾಭಕರ ದಿನವಾಗಿದೆ. ಶುಭಸಂಖ್ಯೆ: 5
ವೃಶ್ಚಿಕ: ಅನೇಕ ಜನ ನಿಮ್ಮ ಕಷ್ಟ ನೀಗಲು ಸಹಾಯ ಮಾಡುತ್ತಾರೆ. ಭೂವ್ಯವಹಾರಗಳನ್ನು ಮುಂದೂಡಿದರೆ ಉತ್ತಮ. ಶುಭಸಂಖ್ಯೆ: 4
ಧನುಸ್ಸು: ಮಾನಸಿಕ ಅಶಾಂತಿಯಿಂದ ಕಷ್ಟವಾದೀತು. ಆದರೆ ವೃತ್ತಿಯಲ್ಲಿ ಉತ್ತಮ ಸಾಧನೆ ಮಾಡಿ ಮೆಚ್ಚುಗೆಯನ್ನು ಪಡೆಯುವಿರಿ. ಶುಭಸಂಖ್ಯೆ: 3
ಮಕರ: ಧಾರ್ವಿುಕ ಕಾರ್ಯಗಳಲ್ಲಿ ಹೆಚ್ಚು ಆಸಕ್ತರಾಗುತ್ತೀರಿ. ದೂರದ ಊರಿನ ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸವಿರಲಿದೆ. ಶುಭಸಂಖ್ಯೆ: 9
ಕುಂಭ: ಸಂಗಾತಿಯನ್ನು ಸಂತೋಷಪಡಿಸಲಿದ್ದೀರಿ. ಮಾತಿನಲ್ಲಿ ನಿಯಂತ್ರಣ ಅಗತ್ಯವಾಗಿದೆ. ಆದರೆ ದೂರಪ್ರಯಾಣ ಬೇಡ. ಶುಭಸಂಖ್ಯೆ: 8
ಮೀನ: ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ಕೆಲಸಗಳು ನಿಮ್ಮ ಇಚ್ಛೆಗೆ ತಕ್ಕಂತೆ ನಡೆಯಲಿವೆ. ಪರಶಿವನ ಧ್ಯಾನ ಮಾಡಿ. ಶುಭಸಂಖ್ಯೆ: 6