ಈ ರಾಶಿಯವರಿಗೆ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿ ಇರುವುದಿಲ್ಲ

Nitya-Bhavishya-vvani-1-2-1
Published on

ಮೇಷ: ಪ್ರತಿಯೊಂದರಲ್ಲೂ ಯಶಸ್ಸು ಕಾಣಲು ಬಯಸುವ ನೀವು ಅದಕ್ಕಾಗಿ ಸಾಕಷ್ಟು ಶ್ರಮಪಡಬೇಕಾದ ಅಗತ್ಯವಿದೆ. ಶುಭಸಂಖ್ಯೆ: 9

ವೃಷಭ: ಆರ್ಥಿಕ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿ ಇರುವುದಿಲ್ಲ. ಅನವಶ್ಯಕ ಖರ್ಚು-ವೆಚ್ಚಗಳ ಮೇಲೆ ಹತೋಟಿ ಸಾಧಿಸಿ. ಶುಭಸಂಖ್ಯೆ: 5

ಮಿಥುನ: ಬಂಧುಗಳೊಡನೆ ಅನಗತ್ಯ ವಿವಾದ ಬೇಡ. ಏಕೆಂದರೆ ನಿಮಗೆ ಈಗಲೇ ಅದರ ಅಡ್ಡ ಪರಿಣಾಮ ಅರಿವಾಗದು. ಶುಭಸಂಖ್ಯೆ: 1

ಕಟಕ: ಮಗನಿಗೆ ಮದುವೆ ಪ್ರಸ್ತಾಪ ಬರಲಿದ್ದು ಸಂಬಂಧ ಯೋಗ್ಯವಾಗಿದ್ದರೆ ಮುಂದುವರಿಸಿ. ಬೇಗ ಕಾರ್ಯಪ್ರವೃತ್ತರಾಗಿ. ಶುಭಸಂಖ್ಯೆ: 6

ಸಿಂಹ: ವೈಯಕ್ತಿಕ ಕೆಲಸಕ್ಕೆ ಸರ್ಕಾರಿ ಕಚೇರಿ ಸುತ್ತಿ ಸುಸ್ತಾಗುವಿರಿ. ಕುಲದೇವರನ್ನು ಪ್ರಾರ್ಥಿಸಿ ದೇವಸ್ಥಾನಕ್ಕೆ ಭೇಟಿ ಕೊಡಿ. ಶುಭಸಂಖ್ಯೆ: 7

ಕನ್ಯಾ: ನಿಮ್ಮ ಮಾನಸಿಕ ಸ್ಥಿತಿಯನ್ನು ಹತೋಟಿಗೆ ತರಲು ಯತ್ನಿಸಿ. ಇಲ್ಲವಾದರೆ ಜನರ ಅಪಹಾಸ್ಯಕ್ಕೆ ಗುರಿಯಾಗುವಿರಿ. ಶುಭಸಂಖ್ಯೆ: 8

ತುಲಾ: ಮನೆಯ ಖರ್ಚುಗಳನ್ನು ನಿಯಂತ್ರಿಸಲು ಯತ್ನಿಸಿದರೂ ಕೈಮೀರಿ ಹೋಗುವುದು. ಆಂಜನೇಯ ಸ್ತೋತ್ರ ಪಠಿಸಿ. ಶುಭಸಂಖ್ಯೆ: 1

ವೃಶ್ಚಿಕ: ಮನೆಯವರೊಡನೆ ನಡೆದುಕೊಂಡ ರೀತಿಯಿಂದ ಕಳೆದುಹೋದ ವಿಶ್ವಾಸವನ್ನು ಮರಳಿ ಪಡೆಯಲು ಯತ್ನಿಸಿ. ಶುಭಸಂಖ್ಯೆ: 2

ಧನಸ್ಸು: ಮನದಲ್ಲಿ ಸಲ್ಲದ ವಿಚಾರ ತುಂಬಿಕೊಳ್ಳದೆ, ಅನಗತ್ಯ ಗೊಂದಲ ಮಾಡಿಕೊಳ್ಳದೆ ಗಟ್ಟಿ ನಿರ್ಧಾರದಿಂದ ಮುನ್ನುಗ್ಗಿ. ಶುಭಸಂಖ್ಯೆ: 4

ಮಕರ: ನವೋದ್ಯಮಿಗಳು ತಮ್ಮ ಚಟುವಟಿಕೆಗಳಿಂದ ಎಲ್ಲರನ್ನೂ ಹುರಿದುಂಬಿಸುವರು. ಹೊಸ ಕಾರ್ಯಕ್ಕೆ ಶ್ಲಾಘನೆ ಸಿಗಲಿದೆ. ಶುಭಸಂಖ್ಯೆ: 5

ಕುಂಭ: ಅನೇಕ ಪ್ರಮುಖರು ತಾವಾಗಿಯೇ ನಿಮ್ಮನ್ನು ಭೇಟಿಯಾಗಲು ಬರುವುದರಿಂದ ತುಸು ನೆಮ್ಮದಿ ದೊರೆಯಲಿದೆ. ಶುಭಸಂಖ್ಯೆ: 9

ಮೀನ: ಕಷ್ಟಪಟ್ಟು ಆರಂಭಿಸಿದ ವ್ಯವಹಾರದ ಕಡೆ ವಿಶೇಷ ಗಮನ ಕೊಡಿ. ಅದು ಸರಿಯಾಗಿ ನಡೆಯುವ ವ್ಯವಸ್ಥೆ ಮಾಡಿ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net