

ಮೇಷ: ಹಳೆಯ ನೆನಪು ಕಾಡಿದ್ದರಿಂದ ಸ್ನೇಹಿತರ ಭೇಟಿಗೆ ಯತ್ನಿಸುವಿರಿ. ಅದು ಸಾಧ್ಯವಾಗದೆ ಇರಬಹುದು. ಕರೆ ಮಾಡಿ. ಅದೃಷ್ಟಸಂಖ್ಯೆ: 5
ವೃಷಭ: ಪ್ರೀತಿಯಿಂದ ಕೆಲಸ ಮಾಡಬೇಕು, ಅದನ್ನು ಪ್ರೀತಿಸಬೇಕೆಂದು ಉಪದೇಶಿಸುವ ನೀವೇ ಹಾಗೆ ಮಾಡಲಾರಿರಿ. ಅದೃಷ್ಟಸಂಖ್ಯೆ: 1
ಮಿಥುನ: ನೀವು ಬಳಸದೆ ಇರುವ ಕಾರಣದಿಂದಾಗಿ ಪ್ರೀತಿಯ ವಸ್ತುವೊಂದು ಹಾಳಾಗಿರುವುದು ಗಮನಕ್ಕೆ ಬರಲಿದೆ. ಅದೃಷ್ಟಸಂಖ್ಯೆ: 6
ಕಟಕ: ಬಾಕಿ ಇರುವ ಕೆಲಸಗಳನ್ನು ಮುಗಿಸುವತ್ತ ಹೆಚ್ಚು ಗಮನ ಕೊಡುವಿರಿ. ಬರವಣಿಗೆಯನ್ನು ಮುಂದುವರಿಸುವ ಸಾಧ್ಯತೆ. ಅದೃಷ್ಟಸಂಖ್ಯೆ: 3
ಸಿಂಹ: ಮನದಲ್ಲಿ ಅಯ್ಯೋ ಪಾಪ ಎನಿಸಿದರೂ ಅದನ್ನು ತೋರ್ಪಡಿಸದೆ ಕೋಪಿಷ್ಟರಂತೆ ವಿಚಿತ್ರವಾಗಿ ವರ್ತಿಸುತ್ತೀರಿ. ಅದೃಷ್ಟಸಂಖ್ಯೆ: 2
ಕನ್ಯಾ: ಹೊಸ ರುಚಿಯೊಂದರ ಪ್ರಯೋಗ ತಕ್ಕಮಟ್ಟಿಗೆ ಯಶಸ್ವಿ ಆಗುವ ಸಾಧ್ಯತೆ ಇದೆ. ಅದರೆ ವ್ಯರ್ಥ ಮಾಡದಿರಿ. ಅದೃಷ್ಟಸಂಖ್ಯೆ: 9
ತುಲಾ: ನಿಷ್ಪ್ರಯೋಜಕ ಕೆಲಸವನ್ನೂ ಬಹಳ ಶ್ರದ್ಧೆ ಹಾಗೂ ತಾಳ್ಮೆಯಿಂದ ಮಾಡುತ್ತೀರಿ. ಸಂಜೆ ತಪ್ಪಿನ ಅರಿವಾಗುತ್ತದೆ. ಅದೃಷ್ಟಸಂಖ್ಯೆ: 7
ವೃಶ್ಚಿಕ: ಮನೆಯ ಸದಸ್ಯರೆಲ್ಲ ಎಲ್ಲೆಲ್ಲಿ ಏನೇನು ತಪ್ಪು ಮಾಡುತ್ತಿದ್ದಾರೆ ಎಂದು ತಿಳಿಹೇಳಿ ಬಹಳ ಬುದ್ಧಿವಾದ ಹೇಳುತ್ತೀರಿ. ಅದೃಷ್ಟಸಂಖ್ಯೆ: 4
ಧನಸ್ಸು: ಯಾರೋ ಹುರಿದುಂಬಿಸಿದ ಕಾರಣಕ್ಕೆ ಬಹಳ ಕೆಲಸ ಮಾಡುವಿರಿ. ಆದರೆ ಹಣದ ವಿಚಾರದಲ್ಲಿ ಕಠಿಣವಾಗಿ. ಅದೃಷ್ಟಸಂಖ್ಯೆ: 6
ಮಕರ: ಕೆಲಸವನ್ನು ಸರಿಯಾದ ಸಮಯಕ್ಕೆ ಮುಗಿಸದೆ ಹೊಸ ಕಾರಣ ನೀಡುತ್ತಿರುವ ಬಗ್ಗೆ ಮೇಲಧಿಕಾರಿ ಪ್ರಶ್ನಿಸುವರು. ಅದೃಷ್ಟಸಂಖ್ಯೆ: 2
ಕುಂಭ: ಹೊಸ ವಸ್ತು ಸಿಗುತ್ತದೆಂದು ಕೈಯಲ್ಲಿರುವ ವಸ್ತುವನ್ನು ತಾತ್ಸಾರ ಮಾಡಿಕೊಂಡು ಕಳೆದುಕೊಳ್ಳಬಹುದು. ಅದೃಷ್ಟಸಂಖ್ಯೆ: 5
ಮೀನ: ಆಶಾವಾದಿಗಳಾಗಿದ್ದರೆ ಸಂಜೆಯ ವೇಳೆಗೆ ಒಳ್ಳೆಯ ಸುದ್ದಿ ಬರಬಹುದು. ಆದರೆ ದೂರದ ಪ್ರಯಾಣ ಮಾಡಬೇಡಿ. ಅದೃಷ್ಟಸಂಖ್ಯೆ: 9