

ಮೇಷ: ನಿಮ್ಮ ಯಶಸ್ಸಿನ ದಾರಿಗೆ ಯಾವುದೇ ಬಗೆಯ ಅಡ್ಡಿ ಆತಂಕಗಳೂ ಎದುರಾಗದ ದಿನವಿದು. ಸಾಲ ಕೊಟ್ಟರೆ ತೊಂದರೆಯಾಗಲಿದೆ. ಶುಭಸಂಖ್ಯೆ: 7
ವೃಷಭ: ಭೂಸಂಬಂಧಿತ ಕಾಗದಪತ್ರಗಳನ್ನು ಥಟ್ಟನೆ ಲಪಟಾಯಿಸಲು ಬೇರೆಯವರು ಪ್ರಯತ್ನ ನಡೆಸುತ್ತಾರೆ. ಜಾಗ್ರತೆಯಿಂದಿರಿ. ಶುಭಸಂಖ್ಯೆ: 9
ಮಿಥುನ: ಪ್ರತ್ಯಕ್ಷ ಕಂಡರೂ ಪರಾಮಶಿಸಿ ನೋಡಬೇಕು. ಕೋಪದಿಂದ ಲಾಭವೇನಿಲ್ಲ. ತಾಳ್ಮೆಯಿಂದ ಇದ್ದರೆ ಸಿದ್ಧಿ, ಲಾಭ ಸಿಗಲಿವೆ. ಶುಭಸಂಖ್ಯೆ: 1
ಕಟಕ: ಬಂಧುಬಾಂಧವರು ಭೇಟಿಯಾಗುವಂಥ ಸಾಧ್ಯತೆ ಹೇರಳವಾಗಿದೆ. ಕುಟುಂಬದಲ್ಲಿನ ಕಗ್ಗಂಟು ಪರಿಹಾರವಾಗಲಿದೆ. ಶುಭಸಂಖ್ಯೆ: 5
ಸಿಂಹ: ಅತಿಯಾದ ನಂಬಿಕೆಯಿಂದ ಕೆಲವರನ್ನು ಆದರಿಸಿ ನೊಂದಿದ್ದೀರಿ. ಯಾರನ್ನೂ ಉಪೇಕ್ಷಿಸಲೂಬೇಡಿ. ನಿಮಗೆ ಮಧ್ಯಮಮಾರ್ಗ ಹಿತ. ಶುಭಸಂಖ್ಯೆ: 2
ಕನ್ಯಾ: ಮನೆಯಲ್ಲಿನ ಶಾಂತತೆಯು ಸಮತೋಲನ ತಪ್ಪುವ ಸಾಧ್ಯತೆಗಳಿವೆ. ಬಿಗಿ ನಿಲುವಿದ್ದರೂ ಕಾಠಿಣ್ಯತೆಯನ್ನು ಹೊಂದದಿರಿ. ಶುಭಸಂಖ್ಯೆ: 8
ತುಲಾ: ಹತ್ತಿರದವರೇ ಗಲಾಟೆ ಮಾಡುತ್ತಾರೆ. ಆದರೂ ಈ ತನಕದ ಪ್ರಾಮಾಣಿಕತೆಯೇ ನಿಮ್ಮನ್ನು ಕೈಹಿಡಿದು ಮುಂದಕ್ಕೆ ನಡೆಸಲಿದೆ. ಶುಭಸಂಖ್ಯೆ: 4
ವೃಶ್ಚಿಕ: ಕೆಲಸವನ್ನು ಮುಗಿಸಬೇಕೆಂಬ ತರಾತುರಿಯನ್ನು ಹೊಂದಿದ್ದೀರಿ. ಈ ಒತ್ತಡವನ್ನು ಮುಂದೂಡಿದರೆ ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಗಲಿದೆ. ಶುಭಸಂಖ್ಯೆ: 6
ಧನುಸ್ಸು: ಬೆಲೆಬಾಳುವಂತಹ ವಸ್ತುಗಳು ಕಾಣೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ವಿಶೇಷ ಗಮನವಿಡಿ. ನಷ್ಟವಾಗುವ ಸಾಧ್ಯತೆ ತಪ್ಪುತ್ತದೆ. ಶುಭಸಂಖ್ಯೆ: 3
ಮಕರ: ಮನೆಯಲ್ಲಿನ ಸಡಗರದ ವಾತಾವರಣಕ್ಕೆ ಕುಲದೇವತೆಯ ಆಶೀರ್ವಾದವಿದೆ. ಲಾಭಕ್ಕೆ ಹೆದ್ದಾರಿಯನ್ನು ರೂಪಿಸಿಕೊಳ್ಳಿ. ಶುಭಸಂಖ್ಯೆ: 7
ಕುಂಭ: ಸೌಮ್ಯ ಸ್ವಭಾವದ ನಿಮಗೆ ಗೌರವಾದರಗಳು ಪ್ರಾಪ್ತವಾಗಲಿವೆ. ಇದರಿಂದ ಪದೋನ್ನತಿಗೂ ಸುಲಭದ ಮಾರ್ಗ ಲಭಿಸಲಿದೆ. ಶುಭಸಂಖ್ಯೆ: 9
ಮೀನ: ಹಳೆಯ ನೋವುಗಳು ಬಿಡದೆಯೇ ಕಾಡುತ್ತವೆ. ಅವುಗಳನ್ನು ಬಿಟ್ಟು ಮುಂದೆ ಸಾಗಿದರೆ ಯಶಸ್ಸಿನ ಬಾಗಿಲುಗಳು ತೆರೆದುಕೊಳ್ಳಲಿವೆ. ಶುಭಸಂಖ್ಯೆ: 1