ಈ ರಾಶಿಯವರಿಗೆ ಇಂದು ಹೊಸ ವಸ್ತ್ರಧಾರಣೆ ಮಾಡುವ ಯೋಗ ಇದೆ

Nitya-Bhavishya-vvani-1-2-1
Published on

ಮೇಷ: ಅಸಹನೆಯಿಂದ ವರ್ತಿಸುತ್ತೀರಿ. ಯಾವುದು ಕೂಡ ಸಮಾಧಾನ ನೀಡುವುದಿಲ್ಲ. ಯಾರ ಬಳಿಯೂ ಜಗಳ ಬೇಡ. ಅದೃಷ್ಟಸಂಖ್ಯೆ: 3

ವೃಷಭ: ವ್ಯಕ್ತಿಗಳ ವಸ್ತ್ರಗಳನ್ನು ನೋಡಿಯೇ ಅವರ ಯೋಗ್ಯತೆಯನ್ನು ತೀರ್ಮಾನಿಸುತ್ತೀರಿ. ಅದು ಇಕ್ಕಟ್ಟಿಗೆ ಸಿಲುಕಿಸಬಹುದು. ಅದೃಷ್ಟಸಂಖ್ಯೆ: 7

ಮಿಥುನ: ಮಾತು ನಿಮ್ಮ ಪಾಲಿನ ದೊಡ್ಡ ಶತ್ರುವಾಗುವ ಸಾಧ್ಯತೆ ಇರುವುದರಿಂದ ಈ ದಿನ ಸುಮ್ಮನಿರುವುದೇ ಯುಕ್ತ. ಅದೃಷ್ಟಸಂಖ್ಯೆ: 5

ಕಟಕ: ಬಯಸಿದ್ದನ್ನು ಹಠ ಮಾಡಿ ಸಾಧಿಸಿಯೇ ತೀರುತ್ತೀರಿ. ಇದರಿಂದ ಆಪ್ತರು ನಿಮ್ಮ ಮೇಲೆ ಬೇಸರಪಡಬಹುದು. ಅದೃಷ್ಟಸಂಖ್ಯೆ: 1

ಸಿಂಹ: ಹೊಸ ವಸ್ತ್ರಧಾರಣೆ ಮಾಡುವ ಯೋಗ ಇದೆ. ಇನ್ನೂ ಧರಿಸಿರದ ವಸ್ತ್ರಗಳನ್ನು ಧರಿಸುವ ಸಾಧ್ಯತೆ ಹೆಚ್ಚು. ಅದೃಷ್ಟಸಂಖ್ಯೆ: 6

ಕನ್ಯಾ: ನಿಮಗೆ ಬೇಸರ ಮಾಡಬಾರದೆಂಬ ಕಾರಣಕ್ಕೆ ಸ್ನೇಹಿತರು ಮುಖ್ಯ ವಿಚಾರದಲ್ಲಿ ಸುಳ್ಳು ಹೇಳಬಹುದು. ಅದೃಷ್ಟಸಂಖ್ಯೆ: 2

ತುಲಾ: ಶಾರೀರಿಕ ಶಕ್ತಿ ಪ್ರದರ್ಶಿಸಬೇಕಾಗಬಹುದು. ನೀವು ಬೌದ್ಧಿಕತೆಯ ಪ್ರದರ್ಶನದಲ್ಲಿ ಮಾತ್ರ ಮುಂದಿರುವಿರಿ. ಅದೃಷ್ಟಸಂಖ್ಯೆ: 9

ವೃಶ್ಚಿಕ: ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣ ಮಾಡಿದಂತೆ ಮತ್ತೆ ಮತ್ತೆ ನಿಮ್ಮ ಮೇಲೆ ಹೆಚ್ಚು ಜವಾಬ್ದಾರಿ ಬರಲಿದೆ. ಅದೃಷ್ಟಸಂಖ್ಯೆ: 4

ಧನಸ್ಸು: ಅತ್ಯುತ್ತಮ ಗುಣಮಟ್ಟದ್ದು ಎಂದು ಕೆಲಸಕ್ಕೆ ಬಾರದ ವಸ್ತುವನ್ನು ನಿಮಗೆ ಮಾರುವ ಸಾಧ್ಯತೆ ಇದೆ. ಎಚ್ಚರವಿರಲಿ. ಅದೃಷ್ಟಸಂಖ್ಯೆ: 3

ಮಕರ: ಕಷ್ಟಕ್ಕೆ ತಕ್ಕ ಪ್ರತಿಫಲ ಬಯಸುತ್ತಿದ್ದೇನೆಂದು ಮೇಲಧಿಕಾರಿ ಬಳಿ ಕೇಳಲು ಹೋದರೆ ಅವಮಾನವಾದೀತು. ಅದೃಷ್ಟಸಂಖ್ಯೆ: 7

ಕುಂಭ: ಸ್ವಲ್ಪ ಪ್ರಯತ್ನಿಸಿದರೂ ಹಿಂದೆ ಕೊಟ್ಟಿದ್ದ ಸಾಲ ಮರುಪಾವತಿ ಆಗುವ ಸಾಧ್ಯತೆ ಹೆಚ್ಚು. ಹೆಚ್ಚು ಪ್ರಯತ್ನ ಮಾಡಿ. ಅದೃಷ್ಟಸಂಖ್ಯೆ: 1

ಮೀನ: ಹೊಸ ಯೋಚನೆ ಹೊತ್ತ ಸ್ನೇಹಿತ ಭೇಟಿ ಮಾಡಬಹುದು ಅಥವಾ ಆ ಬಗ್ಗೆ ರ್ಚಚಿಸಲು ಕರೆ ಮಾಡಬಹುದು. ಅದೃಷ್ಟಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net