ನಿತ್ಯ ಭವಿಷ್ಯ: ಈ ರಾಶಿಯ ಹೊಸ ವಿದ್ಯಾರ್ಥಿಗಳಿಗೆ ಆರಾಮದಾಯಕ ದಿನ

Nitya-Bhavishya-vvani-1-2-1
Published on

ಮೇಷ: ಕಾಯಕದಲ್ಲಿಯೇ ಕೈಲಾಸವನ್ನು ಕಾಣುವ ನಿಮ್ಮ ಧ್ಯೇಯ ಧೋರಣೆಗಳು ಯಶಸ್ಸನ್ನು ತಂದುಕೊಡಲಿವೆ. ಶುಭಸಂಖ್ಯೆ: 1

ವೃಷಭ: ಅತೀಂದ್ರಿಯಾತ್ಮಕ ಅನುಭವಗಳು, ಕಲಾತ್ಮಕ ಸಾಂಸ್ಕೃತಿಕ ಪ್ರದರ್ಶನಗಳಿಂದ ಲಾಭದ ದಾರಿ ತೆರೆಯಲಿದೆ. ಶುಭಸಂಖ್ಯೆ: 3

ಮಿಥುನ: ವೈದ್ಯರು, ಇಲೆಕ್ಟ್ರಿಷಿಯನ್​ಗಳು, ಇಂಜಿನಿಯರ್​ಗಳು, ಔಷಧ ವ್ಯಾಪಾರಿಗಳಿಗೆಲ್ಲ ವೃತ್ತಿಯಲ್ಲಿ ಸಾಫಲ್ಯವಿದೆ. ಶುಭಸಂಖ್ಯೆ: 6

ಕಟಕ: ಗುಪ್ತ ಅನಾಮಧೇಯ ಪತ್ರಗಳೋ, ನಕಲಿ ರುಜುವಿನ ಪ್ರಕರಣಗಳೋ ಗಂಟುಬೀಳಬಹುದು. ಎಚ್ಚರ. ಶುಭಸಂಖ್ಯೆ: 4

ಸಿಂಹ: ವಂಚನೆ ಮಾಡುವ ಜನರೇ ನಿಮ್ಮ ಸುತ್ತಮುತ್ತ ತುಂಬಿಕೊಂಡಿದ್ದಾರೆ. ನಿಮ್ಮ ಜಾಗೃತಿಯೇ ನಿಮ್ಮನ್ನು ರಕ್ಷಿಸಲಿದೆ. ಶುಭಸಂಖ್ಯೆ: 7

ಕನ್ಯಾ: ಆರೋಗ್ಯದ ಬಗೆಗೆ ನಿರ್ಲಕ್ಷ್ಯ ತೋರುತ್ತಿದ್ದೀರಿ. ಹಾಗೇನೂ ಮಾಡದೆ ತಜ್ಞ ವೈದ್ಯರ ಬಳಿ ಸಲಹೆ ಪಡೆಯಿರಿ. ಶುಭಸಂಖ್ಯೆ: 9

ತುಲಾ: ಹೊಸ ವಿದ್ಯಾರ್ಥಿಗಳಿಗೆ ಆರಾಮದಾಯಕ ದಿನ. ಆದರೂ ನಿಷ್ಠೆಯಿಂದಲೇ ವಿದ್ಯಾಭ್ಯಾಸಕ್ಕೆ ಮುಂದುವರಿಸಿ. ಶುಭಸಂಖ್ಯೆ: 8

ವೃಶ್ಚಿಕ: ಸುಳ್ಳು ಆರೋಪವನ್ನು ಎದುರಿಸಿ ಆಯಾಸಪಡುವ ಸಂಭವ ಇದೆ. ಹರಿನಾಮ ಸ್ಮರಣೆಯೇ ರಕ್ಷೆಯಾಗಲಿದೆ. ಶುಭಸಂಖ್ಯೆ: 5

ಧನಸ್ಸು: ಬೇಡವೆಂದು ಹೇಳಿದರೂ ಒತ್ತಡ ಹೇರಿ ಬೇಡದ ವಸ್ತುವನ್ನು ನಿಮಗೆ ಮಾರಬಹುದು. ಮಾತು ದೃಢವಾಗಿರಲಿ. ಶುಭಸಂಖ್ಯೆ: 2

ಮಕರ: ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಕಡಿಮೆಯೇ ಎಂಬುದನ್ನು ಅರ್ಥೈಸಿಕೊಂಡೇ ಕಾರ್ಯಪ್ರವೃತ್ತರಾದರೆ ಒಳಿತು. ಶುಭಸಂಖ್ಯೆ: 1

ಕುಂಭ: ನಿಮ್ಮ ಆರ್ಥಿಕ ಪರಿಸ್ಥಿತಿಯ ಬಗ್ಗೆ ಯಾರ ಬಳಿಯೂ ಹೇಳಿಕೊಳ್ಳಬೇಡಿ. ಇದರಿಂದ ಅಪಾಯ ಎದುರಾದೀತು. ಶುಭಸಂಖ್ಯೆ: 6

ಮೀನ: ದಿನವಿಡೀ ಒಂದೇ ಆಲೋಚನೆ ಮಾಡುತ್ತ ಆಯಾಸಪಡದಿರಿ. ಯೋಗ, ಧ್ಯಾನಾದಿಗಳನ್ನು ಮಾಡಿ ನಿರಾಳರಾಗಿರಿ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net