ನಿತ್ಯ ಭವಿಷ್ಯ: ಈ ರಾಶಿಯವರಿಗೆ ನೀರಿನ ಕೊರತೆಯ ಕಾರಣದಿಂದ ಕೃಷಿಯ ಬಗೆಗಿನ ವಿಚಾರವು ಕಷ್ಟಕ್ಕೆ ಅವಕಾಶ ಮಾಡಿಕೊಡಬಹುದು

Nitya-Bhavishya-vvani-1-2
Published on

ಮೇಷ: ಬರಿದೆ ಗೊಂದಲಮಯ ಹೇಳಿಕೆಗಳ ಮೂಲಕ ವ್ಯವಹಾರಕ್ಕೆ ಪೆಟ್ಟು ನೀಡಲು ಕೆಲವು ಜನರಿಂದ ಸಾಧ್ಯವಿದೆ. ಶುಭಸಂಖ್ಯೆ: 2

ವೃಷಭ: ಗಡಿಬಿಡಿ ಮಾಡಿಕೊಳ್ಳುವ ಮೂಲಕ ಕೈಗೊಳ್ಳಬೇಕಾದ ಕೆಲಸಗಳು ಅರ್ಧಕ್ಕೇ ನಿಲ್ಲಲು ಖಂಡಿತ ಬಿಡದಿರಿ. ಶುಭಸಂಖ್ಯೆ: 9

ಮಿಥುನ: ಎಚ್ಚರಿಕೆಯ ಹೆಜ್ಜೆಗಳನ್ನು ಇಡುವುದರಿಂದ ಮಾತ್ರ ತಲುಪಬೇಕಾದ ಗುರಿಯನ್ನು ಮುಟ್ಟಲು ಸಾಧ್ಯವಾಗಲಿದೆ. ಶುಭಸಂಖ್ಯೆ: 6

ಕಟಕ: ಸಾರ್ವಜನಿಕರು ನಿಮ್ಮ ಬಗೆಗೆ ಸ್ನೇಹಶೀಲರಾಗುವ ಮುಖಾಂತರ ಅಪಾರವಾದ ಸಂತಸವನ್ನು ತರಬಲ್ಲರು. ಶುಭಸಂಖ್ಯೆ: 1

ಸಿಂಹ: ಮಕ್ಕಳು ಸಕಾರಣ ಇರದೆ ಸಿಟ್ಟು ಮಾಡಿಕೊಳ್ಳಬಹುದು. ಅವರನ್ನು ನೀವೇ ಸೂಕ್ತವಾಗಿ ಸಂಭಾಳಿಸಿ. ಶುಭಸಂಖ್ಯೆ: 4

ಕನ್ಯಾ:  ಶ್ರೀ ಕನ್ನಿಕಾ ಪರಮೇಶ್ವರಿಯನ್ನು ಆರಾಧನೆ ಮಾಡಿಯೇ ಜಯವನ್ನು ಸಾಧಿಸಲು ಮುಂದಾಗಿ. ಒಳಿತಾಗಲಿದೆ. ಶುಭಸಂಖ್ಯೆ: 9

ತುಲಾ: ನೀರಿನ ಕೊರತೆಯ ಕಾರಣದಿಂದಾಗಿ ಕೃಷಿಯ ಬಗೆಗಿನ ವಿಚಾರವು ಕಷ್ಟಕ್ಕೆ ಅವಕಾಶ ಮಾಡಿಕೊಡಬಹುದು. ಶುಭಸಂಖ್ಯೆ: 5

ವೃಶ್ಚಿಕ: ಸಜ್ಜನರನ್ನು ಅರಸಿಕೊಂಡು ಹೋಗುತ್ತೀರಿ. ಅದರಲ್ಲಿ ವೈಫಲ್ಯವೇ ಎದುರಾಗಬಹುದಾದ ಸಾಧ್ಯತೆಯಿದೆ. ಶುಭಸಂಖ್ಯೆ: 7

ಧನಸ್ಸು: ಹೆಚ್ಚಿನ ಸಹಾಯ ಮಾಡುವವರನ್ನು ಗುರುತಿಸಿಟ್ಟುಕೊಳ್ಳಿ. ಇದರಿಂದ ಭವಿಷ್ಯಕ್ಕೆ ಉತ್ತಮ ದಾರಿ ಲಭ್ಯವಾಗಲಿದೆ. ಶುಭಸಂಖ್ಯೆ: 2

ಮಕರ: ಶ್ರೀ ಸಿದ್ಧಿವಿನಾಯಕನ ಸ್ತುತಿಯಿಂದ ಸದ್ಯದಲ್ಲಿ ಕೈಗೊಂಡ ಎಲ್ಲ ಕೆಲಸಗಳು ಸುಸೂತ್ರವಾಗಿ ಮುಂದೆ ಸಾಗಲಿವೆ. ಶುಭಸಂಖ್ಯೆ: 3

ಕುಂಭ: ಗಾಳಿಯನ್ನು ಗುದ್ದಿ ಮೈ ನೋಯಿಸಿಕೊಳ್ಳುವ ಗೋಳು ಜಾಸ್ತಿ ಆದೀತು. ಅನವಶ್ಯಕ ವಿಚಾರಕ್ಕೆ ಪ್ರತಿಕ್ರಿಯೆ ಬೇಡ. ಶುಭಸಂಖ್ಯೆ: 8

ಮೀನ: ಬಂಧುಗಳಿಂದಲೇ ತೇಜೋವಧೆಗೆ ಅವಕಾಶಗಳು ಎದುರಾಗುವ ಸಾಧ್ಯತೆ ಇದೆ. ಈ ಬಗ್ಗೆ ಸ್ವಲ್ಪ ಎಚ್ಚರ ಇರಲಿ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net