

ಮೇಷ: ನಿಮ್ಮ ಗುರಿಯನ್ನು ಇನ್ನಷ್ಟು ದೃಢವಾಗಿ ತಲುಪುವ ಅವಕಾಶ ಸಿಗದೆ. ಆದರೆ ಎಲ್ಲರನ್ನೂ ನಂಬಲು ಹೋಗಬೇಡಿ. ಶುಭಸಂಖ್ಯೆ: 9
ವೃಷಭ: ಕುಟುಂಬದವರ ಜತೆಗೆ ದುರ್ಬಲವಾಗಿದ್ದ ನಿಮ್ಮ ಸಂಬಂಧ ಮತ್ತೆ ಗಟ್ಟಿ ಆವರಣವಾಗಿ ರೂಪುಗೊಳ್ಳಲಿದೆ. ಶುಭಸಂಖ್ಯೆ: 8
ಮಿಥುನ: ಹೊಸ ಉತ್ಸಾಹದ ಅಲೆಗಳು ನಿಮ್ಮೊಳಗೆ ಸೃಷ್ಟಿಯಾಗಲಿವೆ. ಇದರಿಂದ ವಿಶಿಷ್ಟವಾದ ಸಿದ್ಧಿ ಸಾಧ್ಯವಾಗಲಿದೆ. ಶುಭಸಂಖ್ಯೆ: 3
ಕಟಕ: ಸೈನಿಕನಂತೆ ಮುನ್ನುಗ್ಗುವ ತೀರ್ಮಾನವನ್ನು ತಳೆಯಲಿದ್ದೀರಿ. ನಿಮ್ಮ ಮಾನವೀಯತೆ ಗೆಲುವು ಸಾಧಿಸಲಿದೆ. ಶುಭಸಂಖ್ಯೆ: 1
ಸಿಂಹ: ಷೇರುಗಳು, ಜೀವವಿಮೆ ಅಥವಾ ಇನ್ನಿತರ ಭೂಮಿ, ಆಸ್ತಿ ಸಂಬಂಧಿತ ವಿಚಾರಗಳಲ್ಲಿ ಯಶಸ್ಸು ದೊರೆಯಲಿದೆ. ಶುಭಸಂಖ್ಯೆ: 6
ಕನ್ಯಾ: ಹಿಡಿದ ಕೆಲಸದಲ್ಲಿ ಸೋಲು ಎದುರಾಗುತ್ತದೆ ಎಂದು ಭಾವಿಸದಿರಿ. ನಿಮಗೆ ಹೊಸ ಅನುಭವದ ಲಾಭವಾಗಲಿದೆ. ಶುಭಸಂಖ್ಯೆ: 4
ತುಲಾ: ಮನೆಯ ವಿಚಾರವಾಗಿ ನೀವು ನಿಜಕ್ಕೂ ಅದೃಷ್ಟಶಾಲಿಗಳಾಗಿದ್ದೀರಿ. ಕುಟುಂಬದ ಎಲ್ಲ ಸದಸ್ಯರ ಬೆಂಬಲ ಲಭ್ಯ. ಶುಭಸಂಖ್ಯೆ: 5
ವೃಶ್ಚಿಕ: ಹೊಸ ಹಸಿರಿನ ಜೀವಜಾಲಗಳಿಗಾಗಿ ಪ್ರಯತ್ನ ಮಾಡುತ್ತೀರಿ. ಹೊಸದೇ ಜೀವನಕ್ಕೆ ನಾಂದಿ ಒದಗಿಬರಲಿದೆ. ಶುಭಸಂಖ್ಯೆ: 2
ಧನಸ್ಸು: ಶ್ರೀ ವರಾಹಸ್ವಾಮಿಯ ಆರಾಧನೆಗೆ ಮುಂದಾಗಿ. ಕಗ್ಗಂಟಾದ ಭೂಸಂಬಂಧಿ ವಿಚಾರಕ್ಕೆ ಪರಿಹಾರ ಸಿಗಲಿದೆ. ಶುಭಸಂಖ್ಯೆ: 9
ಮಕರ: ಗೆಳೆಯರು ಹೊಸ ವಿಚಾರಗಳನ್ನು ತಿಳಿಸುವ ತವಕದಲ್ಲಿರುತ್ತಾರೆ. ಆದರೆ ನಿಮ್ಮೊಳಗೆ ತರ್ಕಬದ್ಧ ಚಿಂತನೆ ಇರಲಿ. ಶುಭಸಂಖ್ಯೆ: 1
ಕುಂಭ: ಗೆಳೆಯರು, ನೆಂಟರು, ಸಹೋದ್ಯೋಗಿಗಳು ಇತ್ಯಾದಿ ಜನರ ವಿಶೇಷವಾದ ಒಲುಮೆ ನಿಮ್ಮ ಪಾಲಿಗೆ ಒದಗಲಿದೆ. ಶುಭಸಂಖ್ಯೆ: 4
ಮೀನ: ಅನೇಕ ಲಾಭದ ವಿಚಾರಗಳನ್ನು ಸರಳವಾಗಿ ಮಾಡಿಕೊಳ್ಳಿ. ಇದರಿಂದಾಗಿ ಗೆಲುವಿನ ಸಂಕಲ್ಪವು ಸಾಕಾರಗೊಳ್ಳಲಿದೆ. ಶುಭಸಂಖ್ಯೆ: 7