

ಮೇಷ: ಯಾರಿಗೆ ಆದ್ಯತೆ ನೀಡಬೇಕು ಎಂದು ಅರಿಯಿರಿ. ನಿಮ್ಮನ್ನು ಗೌರವಿಸುವವರಿಗೆ ಮೊದಲು ಕೆಲಸ ಮಾಡಿಕೊಡಿ. ಅದೃಷ್ಟಸಂಖ್ಯೆ: 6
ವೃಷಭ: ದಾನದ ಮಹತ್ವ ಅರಿವಾದರೂ ಆತುರದಲ್ಲಿ ಅಪಾತ್ರರಿಗೆ ದಾನ ಮಾಡಬೇಡಿ. ಮನಸ್ಸು ಹಗುರವಾಗುತ್ತದೆ. ಅದೃಷ್ಟಸಂಖ್ಯೆ: 7
ಮಿಥುನ: ಕಾಲಕ್ಕೆ ತಕ್ಕಂತೆ ನಿಮ್ಮನ್ನು ಹಾಗೂ ಉದ್ಯೋಗ ವಿಧಾನವನ್ನು ಬದಲಿಸಬೇಕು. ಮಾಹಿತಿ ಕೊರತೆ ಕಾಡಲಿದೆ. ಅದೃಷ್ಟಸಂಖ್ಯೆ: 3
ಕಟಕ: ನೀವು ಸತ್ಯ ಎಂದು ನಂಬಿದ್ದ ವಿಚಾರಗಳು ಸುಳ್ಳು ಎಂದು ಮನವರಿಕೆ ಆಗುತ್ತದೆ. ಕೆಲವು ಬಗೆಯ ಆಶ್ಚರ್ಯಗಳು ಕಾದಿವೆ. ಅದೃಷ್ಟಸಂಖ್ಯೆ: 5
ಸಿಂಹ: ಕೆಲವು ಬದಲಾವಣೆಗಳು ಅವಶ್ಯ ಎನಿಸುತ್ತದೆ. ಕಷ್ಟಪಟ್ಟು ಮಾಡುವ ಕೆಲಸವನ್ನೇ ಇಷ್ಟಪಟ್ಟು ಮಾಡಿದರೆ ಶುಭ. ಅದೃಷ್ಟಸಂಖ್ಯೆ: 9
ಕನ್ಯಾ: ನಿಮ್ಮನ್ನು ಆಶ್ರಯಿಸಿದವರಿಗೆ ಸಂತಸ. ನಿಮ್ಮ ಮೇಲಿದ್ದ ನಂಬಿಕೆ ಉಳಿಸಿಕೊಳ್ಳುವಿರಿ. ನಿಮ್ಮ ಗೌರವವೂ ಹೆಚ್ಚಲಿದೆ. ಅದೃಷ್ಟಸಂಖ್ಯೆ: 8
ತುಲಾ: ನಿಮಗೆ ತಿಳಿದ ವಿಚಾರ ಕಡಿಮೆ. ಅಲ್ಲದೆ ನಿಮಗೆ ಸಂಬಂಧಿಸದ ವಿಚಾರಗಳ ಬಗ್ಗೆ ಚಿಂತಿಸದೆ ಇದ್ದರೆ ಒಳ್ಳೆಯದು. ಅದೃಷ್ಟಸಂಖ್ಯೆ: 5
ವೃಶ್ಚಿಕ: ಒಂದುವೇಳೆ ಚಿಕ್ಕ ಪ್ರಮಾಣದಲ್ಲಿ ಸಾಲವನ್ನು ಕೊಟ್ಟರೂ ಪರವಾಗಿಲ್ಲ, ಜಾಮೀನು ಕೊಟ್ಟು ಸಾಲ ಕೊಡಿಸಲು ಹೋಗದಿರಿ. ಅದೃಷ್ಟಸಂಖ್ಯೆ: 1
ಧನಸ್ಸು: ಹುಡುಕುತ್ತ ಬರುವವರು ಉದ್ಧರಿಸುವವರೇ ಆಗಬೇಕಿಲ್ಲ, ಮುಳುಗಿಸುವವರೂ ಆಗಿರಬಹುದು ಎಂಬುದು ನೆನಪಿನಲ್ಲಿರಲಿ. ಅದೃಷ್ಟಸಂಖ್ಯೆ: 2
ಮಕರ: ಸಂದರ್ಭ ನೋಡದೆ ಆಡಿದ ಮಾತುಗಳು ನಷ್ಟ ಉಂಟುಮಾಡುತ್ತವೆ. ತೀರ್ಪು ನೀಡುವ ಮೊದಲು ಯೋಚಿಸಿ. ಅದೃಷ್ಟಸಂಖ್ಯೆ: 5
ಕುಂಭ: ತಂದೆಯೊಂದಿಗೆ ಮಾತಿನ ಚಕಮಕಿ, ಚಿಕ್ಕ ಮನಸ್ತಾಪ ಸಹ ಆಗಬಹುದು. ಆದುದರಿಂದ ಸ್ವಲ್ಪ ಎಚ್ಚರ ವಹಿಸಿ. ಅದೃಷ್ಟಸಂಖ್ಯೆ: 7
ಮೀನ: ನೀವು ಕಷ್ಟಪಟ್ಟರೂ ಸಿಗದಿರುವ ಯಶಸ್ಸು ಉಳಿದವರಿಗೆ ಸುಲಭವಾಗಿ ಸಿಕ್ಕಿದ್ದನ್ನು ಕಂಡು ಆಶ್ಚರ್ಯಪಡುತ್ತೀರಿ. ಅದೃಷ್ಟಸಂಖ್ಯೆ: 9