ಈ ರಾಶಿಯವರಿಗೆ ಇಂದು ಅಂದುಕೊಂಡ ಕೆಲಸ ಸುಲಭವಲ್ಲ

Nitya-Bhavishya-vvani-1-2-1
Published on

ಮೇಷ: ಬಲಗೈ ನೋವಾಗಿ ಕೆಲಸಕ್ಕೆ ಅಡೆತಡೆ. ಔಷಧ ಉಪಚಾರ ಮಾಡಿಕೊಳ್ಳಲು ಉತ್ತಮವಾದ ದಿನ. ಅದೃಷ್ಟಸಂಖ್ಯೆ: 1

ವೃಷಭ: ದೂರದ ಸಂಬಂಧಿ ಕರೆ ಮಾಡಿ ಅವರ ಅಥವಾ ಮನೆಯವರ ಸಾಧನೆಯ ಬಗ್ಗೆ ತಿಳಿಸುತ್ತ ಕೋಪ ತರಿಸುತ್ತಾರೆ. ಅದೃಷ್ಟಸಂಖ್ಯೆ: 6

ಮಿಥುನ: ಆದರೆ ಪ್ರಯಾಣ ಬೆಳೆಸದೆ ಒಂದೇ ಕಡೆ ಇದ್ದು ಬಹಳ ಬೇಗ ನಿಮ್ಮ ಬಹುತೇಕ ಕೆಲಸ ಮುಗಿಸಬಹುದು. ಅದೃಷ್ಟಸಂಖ್ಯೆ: 9

ಕಟಕ: ಸಂಗೀತ ನಿಮ್ಮನ್ನು ಬಹಳ ಆಕರ್ಷಿಸುತ್ತದೆ. ಬರವಣಿಗೆ ಇಷ್ಟಪಡುವ ವ್ಯಕ್ತಿಗಳಿಗೆ ಉತ್ತಮ ಸಮಯ ಲಭ್ಯವಾಗಲಿದೆ. ಅದೃಷ್ಟಸಂಖ್ಯೆ: 2

ಸಿಂಹ: ಎಲ್ಲರನ್ನೂ ನಿಮ್ಮ ಮಾತು, ನಡೆಯಿಂದ ಬಹಳ ಆಕರ್ಷಿಸುತ್ತೀರಿ. ಅದು ನಿಮಗೆ ಗೊಂದಲಗಳನ್ನೂ ತರುತ್ತದೆ. ಅದೃಷ್ಟಸಂಖ್ಯೆ: 7

ಕನ್ಯಾ: ಉತ್ತಮ ಗುಣಮಟ್ಟದ ಆಹಾರಸೇವನೆ, ತಕ್ಕ ಸಮಯಕ್ಕೆ ಊಟ ಹೀಗೆ ಏನೇನೋ ಮಾಡಲು ಯೋಚಿಸುವಿರಿ. ಅದೃಷ್ಟಸಂಖ್ಯೆ: 5

ತುಲಾ: ಒಬ್ಬರ ಪರ ಮಾತಾಡುತ್ತ ಅವರು ತಪ್ಪಿನ ಬಗ್ಗೆ ಪರಿಶೀಲಿಸದೆ ಅವರು ನಿರಪರಾಧಿ ಎಂದು ತೀರ್ಮಾನಿಸುತ್ತೀರಿ. ಅದೃಷ್ಟಸಂಖ್ಯೆ: 4

ವೃಶ್ಚಿಕ: ಅಂದುಕೊಂಡ ಕೆಲಸ ಸುಲಭದಲ್ಲಿ ಆಗದು. ದೊಡ್ಡ ಕಾರ್ಯದಲ್ಲಿ ಸವಾಲುಗಳನ್ನು ಎದುರಿಸಬೇಕು. ಧೈರ್ಯವಿರಲಿ. ಅದೃಷ್ಟಸಂಖ್ಯೆ: 1

ಧನಸ್ಸು: ರಹಸ್ಯಗಳನ್ನು ಯಾರಿಗಾದರೂ ತಿಳಿಸದೆ ಇಟ್ಟುಕೊಳ್ಳುವುದು ನಿಮಗೆ ಕಷ್ಟ. ನಿಮ್ಮ ಹೆಸರನ್ನು ಕೆಡಿಸಿಕೊಳ್ಳದಿರಿ. ಅದೃಷ್ಟಸಂಖ್ಯೆ: 3

ಮಕರ: ಬಹು ಮುಖ್ಯ ಕೆಲಸ ನಿಮ್ಮಿಂದಷ್ಟೇ ಸಾಧ್ಯ ಎಂದು ವಹಿಸಿಕೊಡುವ ಸಾಧ್ಯತೆ ಇದೆ. ನಿಮ್ಮ ಪೂರ್ವಾಗ್ರಹ ಬಿಡಿ. ಅದೃಷ್ಟಸಂಖ್ಯೆ: 5

ಕುಂಭ: ಹಾಸ್ಯದ ಅಗತ್ಯ ತಿಳಿಯುತ್ತದೆ. ನಗುತ್ತಿದ್ದರೆ ಒತ್ತಡವಿಲ್ಲದೆ ಸಂತೋಷವಾಗಿರಬಹುದು ಎಂದು ಗೊತ್ತಾಗುತ್ತದೆ. ಅದೃಷ್ಟಸಂಖ್ಯೆ: 7

ಮೀನ: ನಿಮಗೆ ಪ್ರಾಮುಖ್ಯತೆ ನೀಡಿಲ್ಲ ಎಂಬುದು ಬಹಳ ಕಾಡುತ್ತದೆ. ನಿಮ್ಮ ಪ್ರಾಮುಖ್ಯತೆ ತೋರಿಸಲು ಚಿಂತಿಸುತ್ತೀರಿ. ಅದೃಷ್ಟಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net