

ಮೇಷ: ಮಾಯೆಯ ಹಿಂದೆ ಬಿದ್ದಿದ್ದೀರಿ. ಜೀವನದ ವಿಚಾರದಲ್ಲಿ ಹುಡುಗಾಟಿಕೆಯನ್ನು ಬಿಟ್ಟುಬಿಡುವುದೇ ಉತ್ತಮ. ಶುಭಸಂಖ್ಯೆ: 2
ವೃಷಭ: ಅನಿರೀಕ್ಷಿತ ಪವಾಡ ಸಂಭವಿಸಬಹುದು ಎಂಬ ಅತಿ ಆತ್ಮವಿಶ್ವಾಸ ಬೇಡ. ಮಾಡಿದ ಪ್ರಯತ್ನಕ್ಕೆ ಫಲ ಇದ್ದೇ ಇದೆ. ಶುಭಸಂಖ್ಯೆ: 7
ಮಿಥುನ: ನಿಮ್ಮ ಮನೆತನದ ಪ್ರಭಾವಕ್ಕೆ ವಿಶಿಷ್ಟ ತೂಕವಿದೆ. ಆತ್ಮವಿಶ್ವಾಸ ಬೆಳೆಸಿಕೊಂಡರೆ ವ್ಯಕ್ತಿತ್ವದ ಉನ್ನತಿ ಸಾಧ್ಯವಾಗಲಿದೆ. ಶುಭಸಂಖ್ಯೆ: 5
ಕಟಕ: ಗುರುಹಿರಿಯರನ್ನು ಸಂಪೂರ್ಣ ದೂರ ಮಾಡಿಕೊಳ್ಳದಿರಿ. ಅನುಭವಕ್ಕೆ ಇರುವ ಬೆಲೆ ನಿಮಗೇ ಅರಿವಾಗಲಿದೆ. ಶುಭಸಂಖ್ಯೆ: 9
ಸಿಂಹ: ಒಗಟಿನಂತೆ ಮಾತಾಡದಿರಿ. ಎಲ್ಲರೂ ನಿಮ್ಮಷ್ಟು ಬುದ್ಧಿವಂತರೇ ಇರುತ್ತಾರೆ ಎಂದುಕೊಳ್ಳದಿರಿ. ಕಷ್ಟವಾದೀತು. ಶುಭಸಂಖ್ಯೆ: 2
ಕನ್ಯಾ: ಒಳಿತು-ಕೆಡುಕುಗಳ ಬಗ್ಗೆ ಚಿಂತಿಸುತ್ತಿದ್ದೀರಿ. ಸಕಾರಾತ್ಮಕ ಯೋಚನೆಯಿಂದ ಮುನ್ನುಗ್ಗಿದರೆ ನಿಮಗೇ ಜಯವಿದೆ. ಶುಭಸಂಖ್ಯೆ: 3
ತುಲಾ: ಸಿಹಿ ಹಂಚಬೇಕಾದ ಅಪರೂಪದ ಸಾಧನೆ ಕೈಗೊಳ್ಳುವುದಕ್ಕೆ ಇಂದು ಅಪಾರ ಅವಕಾಶಗಳು ಲಭ್ಯವಾಗಲಿವೆ. ಶುಭಸಂಖ್ಯೆ: 9
ವೃಶ್ಚಿಕ: ನೆರೆಹೊರೆಯವರ ಜತೆಗೆ ಅನಗತ್ಯವಾಗಿ ಜಗಳವಾಡುವ ಬೆಳವಣಿಗೆಗಳು ಉಂಟಾಗ ಬಹುದು. ಎಚ್ಚರವಿರಲಿ. ಶುಭಸಂಖ್ಯೆ: 4
ಧನಸ್ಸು: ಹಗಲುಗನಸುಗಳನ್ನು ಕಾಣುತ್ತ ಕುಳಿತರೆ ಏನೂ ಫಲವಿಲ್ಲ. ಕನಸು ನನಸಾದರಷ್ಟೇ ಕಾಂಚನದ ಸಿದ್ಧಿ ಸಾಧ್ಯವಿದೆ. ಶುಭಸಂಖ್ಯೆ: 3
ಮಕರ: ಕ್ಷೀರೋದ್ಯಮ, ಮತ್ಸ್ಯೊದ್ಯಮ, ಕೃಷಿ ವಲಯದವರು ಇಂದು ಸ್ವಲ್ಪ ಮಟ್ಟಿಗೆ ಜಾಗ್ರತೆ ವಹಿಸುವ ಅಗತ್ಯವಿದೆ. ಶುಭಸಂಖ್ಯೆ: 6
ಕುಂಭ: ವಾಹನ ಖರೀದಿಯ ಯೋಗ ಬರಬಹುದು. ಆದರೆ ಅವಸರ ಬೇಡ. ಖರೀದಿಸದಿದ್ದರೂ ತೊಂದರೆ ಏನಿಲ್ಲ. ಶುಭಸಂಖ್ಯೆ: 1
ಮೀನ: ಪ್ರಮುಖ ವಿಚಾರದಲ್ಲಿ ಖಂಡಿತವಾಗಿ ಅವಸರ ಬೇಡ. ನಿಷ್ಪ್ರಯೋಜಕ ಜನ ಸಲಹೆ ಕೊಟ್ಟರೆ ಸ್ವೀಕರಿಸಬೇಡಿ. ಶುಭಸಂಖ್ಯೆ: 8