

ಮೇಷ: ಅನೇಕ ದಿನಗಳಿಂದಲೂ ಚಿಂತಿಸುತ್ತಿರುವ ವಿಷಯವೊಂದು ಜೀವನಕ್ಕೆ ಹೊಸದಾದ ತಿರುವನ್ನೇ ತರಬಹುದು. ಶುಭಸಂಖ್ಯೆ: 7
ವೃಷಭ: ನವೀನ ಶೋಧನೆಗಳ ಕಾಲದಲ್ಲಿ ಹಿತ್ತಲ ಗಿಡ ಮದ್ದಲ್ಲ ಎಂಬ ನಿರ್ಲಕ್ಷ ಬೇಡ. ಆ ಗಿಡವೇ ಮದ್ದಾಗಲಿದೆ. ಶುಭಸಂಖ್ಯೆ: 9
ಮಿಥುನ: ನಿಮ್ಮ ವಿಚಾರದಲ್ಲಿ ಬೇರೆಯವರು ತಲೆಹಾಕುವುದನ್ನು ನಿರಾಕರಿಸಿ. ವಿರಸ ಉಂಟಾಗದಂತೆ ಎಚ್ಚರವಿರಲಿ. ಶುಭಸಂಖ್ಯೆ: 8
ಕಟಕ: ನಿರೀಕ್ಷೆಗೂ ಮೀರಿ ಧನಲಾಭ ಉಂಟಾಗುವ ಸಾಧ್ಯತೆಗಳಿವೆ. ನಿಮ್ಮ ಯೋಜನೆಗಳನ್ನು ತಾಳ್ಮೆಯಿಂದ ರೂಪಿಸಿ. ಶುಭಸಂಖ್ಯೆ: 4
ಸಿಂಹ: ನೀರಿನ ಸಂಬಂಧದ ತೊಂದರೆಗಳು ಎದುರಾಗಲಿವೆ. ಮನದಲ್ಲಿಯೇ ಭಕ್ತಿಯಿಂದ ವರುಣದೇವನನ್ನು ಸ್ತುತಿಸಿ. ಶುಭಸಂಖ್ಯೆ: 6
ಕನ್ಯಾ: ಔಷಧ ವ್ಯಾಪಾರಿಗಳು, ಕಟ್ಟಡ ನಿರ್ಮಾಣ ಮಾಡುವವರು, ಹೋಟೆಲ್ ವೃತ್ತಿಯವರಿಗೆ ವಿಶೇಷವಾದ ಆದ್ಯತೆ ಸಿಗಲಿದೆ. ಶುಭಸಂಖ್ಯೆ: 5
ತುಲಾ: ಹಿರಿಯ ಸಹೋದ್ಯೋಗಿಗಳಿಂದ ರಚನಾತ್ಮಕ ಸಲಹೆಗಳು ಬಂದರೆ ಅಲಕ್ಷಿಸದೆ ಪಾಲಿಸಿ. ಇದರಿಂದ ನಿಮಗೇ ಕ್ಷೇಮ. ಶುಭಸಂಖ್ಯೆ: 1
ವೃಶ್ಚಿಕ: ಪ್ರಾಣಿಪ್ರಿಯರಾದ ನಿಮಗೆ ಹೈನೋದ್ಯಮದಿಂದ ಲಾಭದ ದಾರಿ ತೆರೆದುಕೊಳ್ಳಲಿದೆ. ಈ ದಿಕ್ಕಿನಲ್ಲಿ ಸಾಗಲು ಆಲೋಚಿಸಬಹುದು. ಶುಭಸಂಖ್ಯೆ: 3
ಧನುಸ್ಸು: ಆರೋಗ್ಯದ ಬಗ್ಗೆ ಅಜಾಗರೂಕತೆ ಬೇಡ. ವಿಶ್ರಾಂತಿಯಿಂದ ಮುಂದಿನ ಕೆಲಸಗಳು ಬೇಗ ಬೇಗ ಮುಗಿಯಲಿವೆ. ಶುಭಸಂಖ್ಯೆ: 2
ಮಕರ: ಜನ ನಿಮ್ಮಲ್ಲಿರುವ ಸಜ್ಜನಿಕೆಯನ್ನು ಗುರುತಿಸಿ ಆದರಿಸಲಿದ್ದಾರೆ. ಶತ್ರುಗಳು ಕೂಡ ನಿಮ್ಮ ಬಗ್ಗೆ ಮೆಚ್ಚುಗೆ ಸೂಚಿಸುವರು. ಶುಭಸಂಖ್ಯೆ: 9
ಕುಂಭ: ಕೆಲಸಕಾರ್ಯಗಳಲ್ಲಿ ವೇಗ ಉಂಟಾಗಲಿದೆ. ಮಾತಿನಲ್ಲೇ ಮನೆ ಕಟ್ಟುವಂಥ ಧೂರ್ತರಿಂದ ದೂರವಿದ್ದರೆ ಒಳಿತಾಗಲಿದೆ. ಶುಭಸಂಖ್ಯೆ: 6
ಮೀನ: ನಿಮ್ಮ ಕುರಿತು ಗೌರವವನ್ನು ಹೊಂದಿರುವ ಹಿರಿಯರೊಬ್ಬರಿಂದ ಒಳಿತಿನ ವಿಚಾರದ ಸಲಹೆಗಳು ದೊರೆಯಲಿವೆ. ಶುಭಸಂಖ್ಯೆ: 3