ಈ ರಾಶಿಯವರು ಸ್ನೇಹಿತನಿಗೆ ಸಹಾಯ ಮಾಡಲು ಹೋಗಿ ನಿಂದನೆಗೆ ತುತ್ತಾಗುತ್ತೀರಿ ಎಚ್ಚರ!

Nitya-Bhavishya-vvani-1-2-1
Published on

ಮೇಷ: ಸ್ನೇಹಿತನಿಗೆ ಸಹಾಯ ಮಾಡಲು ಹೋಗಿ ಸ್ವಲ್ಪ ನಿಂದನೆಗೂ ಒಳಗಾಗಿ ನಿರಾಶರಾಗುವ ಸಾಧ್ಯತೆ ತೀರ ಹೆಚ್ಚು. ಅದೃಷ್ಟಸಂಖ್ಯೆ: 6

ವೃಷಭ: ಕೆಲವು ಸನ್ನಿವೇಶಗಳಿಗೆ ನೀವು ಕಾರಣರಲ್ಲ ಎಂದು ನೀವೇ ಹೇಳುವ ತನಕ ಜನರು ಅರ್ಥ ಮಾಡಿಕೊಳ್ಳುವುದಿಲ್ಲ. ಅದೃಷ್ಟಸಂಖ್ಯೆ: 4

ಮಿಥುನ: ಕಾರ್ಯವಾಸಿ ಕತ್ತೆ ಕಾಲು ಗಾದೆಯನ್ನು ನೆನಪು ಮಾಡಿಕೊಳ್ಳುತ್ತ ಮನಸ್ಸಿಗೆ ಸಮಾಧಾನ ಹೇಳಿಕೊಳ್ಳಬೇಕಾಗುತ್ತದೆ. ಅದೃಷ್ಟಸಂಖ್ಯೆ: 9

ಕಟಕ: ನಂಬಿಕೆಯಿಲ್ಲದ ಕಾರ್ಯ ಮಾಡದ ನಿಮ್ಮ ವ್ಯಕ್ತಿತ್ವವನ್ನು ಅಸಹಾಯಕತೆ ಎನ್ನುವವರ ಬಗ್ಗೆ ಎಚ್ಚರ ವಹಿಸಬೇಕು. ಅದೃಷ್ಟಸಂಖ್ಯೆ: 5

ಸಿಂಹ: ಸಮಯದ ಸದುಪಯೋಗ ಮಾಡುವುದು ಹೇಗೆಂಬುದನ್ನು ಇಂದು ನಿಮ್ಮಿಂದ ಕಲಿಯಬಹುದಾಗಿದೆ. ಅದೃಷ್ಟಸಂಖ್ಯೆ: 6

ಕನ್ಯಾ: ನಿಷಿದ್ಧವಾದ ಆಹಾರವನ್ನು ಬಹಳ ಇಷ್ಟಪಟ್ಟು ತಿಂದು ಹೊಟ್ಟೆ ಕೆಡಿಸಿಕೊಳ್ಳುವ ಸಾಧ್ಯತೆ, ಪರದಾಟ ಇದೆ. ಅದೃಷ್ಟಸಂಖ್ಯೆ: 1

ತುಲಾ: ಒಂದೇ ಬಾರಿ ಬಹಳ ಕೆಲಸಗಳಿಗೆ ಕೈ ಹಾಕಿದ್ದರ ಪರಿಣಾಮ ಮಾನಸಿಕ ಒತ್ತಡ ಜಾಸ್ತಿಯಾಗಬಹುದು. ಅದೃಷ್ಟಸಂಖ್ಯೆ: 9

ವೃಶ್ಚಿಕ: ಯಾವುದು ಸರಿ ಯಾವುದು ತಪ್ಪು ಎಂಬ ವಿಚಾರದಲ್ಲಿ ಹಿರಿಯರ ಮಾರ್ಗದರ್ಶನ ನಿಮ್ಮ ಪಾಲಿಗೆ ಸಿಗಲಿವೆ. ಅದೃಷ್ಟಸಂಖ್ಯೆ: 7

ಧನಸ್ಸು: ಅವಿವಾಹಿತರಿಗೆ ವಿವಾಹ ಕುರಿತ ಮಾತುಕತೆ ನಡೆಯಬಹುದು. ಯಾರೊಂದಿಗೂ ಹಣದ ವ್ಯವಹಾರ ಬೇಡ. ಅದೃಷ್ಟಸಂಖ್ಯೆ: 1

ಮಕರ: ಅರ್ಧಕ್ಕೇ ನಿಲ್ಲಿಸಿದ ಕೆಲಸಗಳನ್ನು ಪೂರ್ಣ ಮಾಡಿಕೊಡಿ ಎಂದು ಹತ್ತಿರದವರ ಒತ್ತಡ ನಿಮ್ಮ ಮೇಲೆ ಹೆಚ್ಚಲಿದೆ. ಅದೃಷ್ಟಸಂಖ್ಯೆ: 5

ಕುಂಭ: ಹೊಸ ಬಟ್ಟೆ ಧರಿಸಬೇಕು ಅಥವಾ ಖರೀದಿ ಮಾಡಬೇಕೆನಿಸುತ್ತದೆ. ಅನುಕೂಲಕರ ಪರಿಸ್ಥಿತಿ ಇಲ್ಲದೆ ಸುಮ್ಮನಿರುವಿರಿ. ಅದೃಷ್ಟಸಂಖ್ಯೆ: 9

ಮೀನ: ಪದೇಪದೆ ಪ್ರಶ್ನಿಸುವ ಬಹಳ ಜನರ ಬಾಯಿ ಮುಚ್ಚಿಸುವ ಯಾವ ಕೆಲಸ ಮಾಡಬೇಕೆಂದು ಯೋಚಿಸುತ್ತೀರಿ. ಅದೃಷ್ಟಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net