ಈ ರಾಶಿಯರಿಗೆ ಸಂಜೆ ವೇಳೆ ನೆಮ್ಮದಿ ಸಿಗತ್ತಂತೆ...

Nitya-Bhavishya-vvani-1-2-1
Published on

ಮೇಷ: ನೀವು ಬಹಳ ಹೆದರಿಕೊಂಡಿದ್ದ ಕಾಯಿಲೆ ಗುಣಮುಖವಾಗುವ ಭರವಸೆ ಸಿಗುವುದು. ಔಷಧಕ್ಕಾಗಿ ಬಹಳ ಖರ್ಚು. ಅದೃಷ್ಟಸಂಖ್ಯೆ: 2

ವೃಷಭ: ಇನ್ನೊಬ್ಬರ ತಪ್ಪು ಹುಡುಕುವ ನಿಮ್ಮ ಕಸರತ್ತು ಹಾಸ್ಯಾಸ್ಪದ. ಅದನ್ನೇ ನಿಮ್ಮ ತಪ್ಪುಗಳನ್ನರಿಯಲು ಬಳಸಿ. ಅದೃಷ್ಟಸಂಖ್ಯೆ: 1

ಮಿಥುನ: ಬಯಸಿದ್ದು ನಿಮ್ಮ ಕೈಗೇ ಸಿಕ್ಕರೂ ಅದನ್ನು ತಿರಸ್ಕರಿಸುವ ಸಾಧ್ಯತೆಗಳೇ ಹೆಚ್ಚು. ಮಿತ್ರರ ಪ್ರಶಂಸೆ ಪಡೆಯುವಿರಿ. ಅದೃಷ್ಟಸಂಖ್ಯೆ: 5

ಕಟಕ: ನಿಮ್ಮನ್ನು ತಾತ್ಸಾರ ಮಾಡಿದ ಜನರು ಮತ್ತೆ ನಿಮ್ಮ ಪಾದವೇ ಗತಿ ಎನ್ನುವಂತೆ ನಿಮ್ಮ ಬಳಿಯೇ ಬರಲಿದ್ದಾರೆ. ಅದೃಷ್ಟಸಂಖ್ಯೆ: 4

ಸಿಂಹ: ಮಾಡಿದ ಕೆಲಸವನ್ನೇ ಪುನಃ ಪುನಃ ಮಾಡಬೇಕಾಗುತ್ತದೆ. ಬಹಳ ಬೇಸರವಾದೀತು. ಸಂಜೆ ವೇಳೆಗೆ ನೆಮ್ಮದಿಯಿದೆ. ಅದೃಷ್ಟಸಂಖ್ಯೆ: 6

ಕನ್ಯಾ: ಹಿಂದೆ ನಿಮ್ಮ ಸಹಾಯ ಪಡೆದಿದ್ದ ವ್ಯಕ್ತಿ ಪುನಃ ಸಹಾಯ ಕೇಳುತ್ತ ಬರಬಹುದು ಅಥವಾ ಕರೆ ಮಾಡಬಹುದು. ಅದೃಷ್ಟಸಂಖ್ಯೆ: 3

ತುಲಾ: ಕಷ್ಟಪಟ್ಟು ಕೆಲಸ ಮಾಡುವುದರಲ್ಲಿ ಸಂತಸ, ನೆಮ್ಮದಿ ಸಿಗುತ್ತದೆ. ಸ್ನೇಹಿತರಿಗೆ ಬುದ್ಧಿಮಾತು ಹೇಳಬಹುದು. ಅದೃಷ್ಟಸಂಖ್ಯೆ: 1

ವೃಶ್ಚಿಕ: ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲದಲ್ಲಿ ಬಹಳ ಸಮಯನ್ನು ವ್ಯರ್ಥ ಮಾಡಲಿದ್ದೀರಿ. ಅದೃಷ್ಟಸಂಖ್ಯೆ: 9

ಧನಸ್ಸು: ಪರಿಚಿತರಿಗೆ ನೀವು ಮಾಡಿದ ನೆರವು ಸಮಸ್ಯೆಯಾಗಿ ಪರಿವರ್ತನೆಗೊಂಡು ಸ್ವಲ್ಪ ಬೇಸರ ಉಂಟಾಗಬಹುದು. ಅದೃಷ್ಟಸಂಖ್ಯೆ: 6

ಮಕರ: ನಿಮ್ಮಲ್ಲಿ ಹೆಚ್ಚು ಉತ್ಸಾಹ ಕಾಣುತ್ತಿದೆ. ಸಹೋದ್ಯೋಗಿಗಳ ಕೆಲಸವನ್ನು ಕೂಡ ಮಾಡಲು ಸಿದ್ಧರಾಗುತ್ತೀರಿ. ಅದೃಷ್ಟಸಂಖ್ಯೆ: 4

ಕುಂಭ: ತಾಯಿಯವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಈ ವಿಚಾರದಲ್ಲಿ ತಾತ್ಸಾರ ಮಾಡುವುದು ಬೇಡ. ಅದೃಷ್ಟಸಂಖ್ಯೆ: 7

ಮೀನ: ನೀವೇ ಸ್ವತಃ ವಾಹನಚಾಲನೆ ಮಾಡದೆ ಇತರರಿಗೆ ಅವಕಾಶ ಕೊಟ್ಟು ನೀವು ಜತೆಯಲ್ಲಿ ಸಾಗಿದರೆ ಉತ್ತಮ. ಅದೃಷ್ಟಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net