

ಮೇಷ: ನಿಮ್ಮ ಹೊಸ ಆಫೀಸಿಗೆ ಸಂಬಂಧಿಸಿದ ಕೆಲಸಕಾರ್ಯಗಳನ್ನು ಸ್ವಲ್ಪ ಕಾಲದವರೆಗೆ ಮುಂದೂಡಿದರೆ ಕ್ಷೇಮವಿದೆ. ಶುಭಸಂಖ್ಯೆ: 1
ವೃಷಭ: ವಾಹನ ಸಂಬಂಧವಾದ ತೊಂದರೆಗಳು ಎದುರಾಗಬಹುದು. ಶ್ರದ್ಧಾಭಕ್ತಿಯಿಂದ ಮೃತ್ಯುಂಜಯನ ಸ್ತುತಿ ಮಾಡಿ. ಶುಭಸಂಖ್ಯೆ: 4
ಮಿಥುನ: ನಿಮ್ಮ ದೈನಂದಿನ ವ್ಯಾಪಾರ ವಹಿವಾಟುಗಳ ಮಧ್ಯೆಯೇ ನಿಧಾನಕ್ಕೆ ಹೊಸದೊಂದನ್ನು ಆರಂಭಿಸುವುದು ಯುಕ್ತ. ಶುಭಸಂಖ್ಯೆ: 7
ಕಟಕ: ಕೌಟುಂಬಿಕ ವಾತಾವರಣ ಶಾಂತಿಯನ್ನು ಕಳೆದುಕೊಳ್ಳುತ್ತಿದೆ ಎಂದು ತಿಳಿದ ಮೇಲೂ ನಿರ್ಲಕ್ಷಿಸಲು ಹೋಗಬೇಡಿ. ಶುಭಸಂಖ್ಯೆ: 2
ಸಿಂಹ: ಒಮ್ಮೆಲೇ ಯಾರನ್ನೂ ಕೂಡ ಆಪ್ತರನ್ನಾಗಿ ಮಾಡಿಕೊಳ್ಳದಿರಿ. ವೈಯಕ್ತಿಕ ವಿಚಾರಗಳನ್ನು ತಿಳಿಸಿದರೆ ಹಾನಿಯಾದೀತು. ಶುಭಸಂಖ್ಯೆ: 6
ಕನ್ಯಾ: ಕಚೇರಿಯಲ್ಲಿ ನಿಮ್ಮನ್ನು ನಿರ್ಲಕ್ಷಿಸಿ ಹೊಸ ವ್ಯವಸ್ಥೆಗಳು ಜಾರಿಯಾಗಬಹುದು. ಅದರ ಬಗೆಗೆ ಮೌನವೇ ಲೇಸು. ಶುಭಸಂಖ್ಯೆ: 9
ತುಲಾ: ಪ್ರತಿಭಾವಂತ ಸ್ನೇಹಿತರು ನಿಮಗೆ ಎದುರಾಗುವ ಕಾನೂನುಸಂಬಂಧೀ ತೊಂದರೆಗಳನ್ನು ಬಹಳ ಬೇಗನೆ ಪರಿಹರಿಸುವರು. ಶುಭಸಂಖ್ಯೆ: 5
ವೃಶ್ಚಿಕ: ಮತ್ತೆ ಮತ್ತೆ ಕೆಟ್ಟ ಕನಸುಗಳು ಬೀಳುತ್ತಿವೆ ಎಂದು ಅಂಜಬೇಡಿ. ಕಾತ್ಯಾಯಿನಿದೇವಿಗೆ ಶರಣಾದರೆ ಒಳಿತಾಗಲಿದೆ. ಶುಭಸಂಖ್ಯೆ: 8
ಧನಸ್ಸು: ಯಾರೋ ಅಪರಿಚಿತರ ಸಲಹೆ ಸೂಚನೆಗಳನ್ನೆಲ್ಲ ಗಂಭೀರವಾಗಿ ಸ್ವೀಕರಿಸದಿರಿ. ಮೃದು ಮಾತಲ್ಲೇ ಪ್ರತಿಭಟಿಸಿ. ಶುಭಸಂಖ್ಯೆ: 3
ಮಕರ: ತಪ್ಪು ಮಾಡದೆ ಆರೋಪಕ್ಕೆ ಒಳಗಾಗುವ ಸಾಧ್ಯತೆ ಇದೆ. ಹಿತಶತ್ರುಗಳ ಬಗ್ಗೆ ವಿಶೇಷ ಎಚ್ಚರ ವಹಿಸುವುದು ಅಗತ್ಯ. ಶುಭಸಂಖ್ಯೆ: 2
ಕುಂಭ: ಹೊಸ ಆಲೋಚನೆಗಳು ತಪ್ಪಲ್ಲ. ಆದರೆ ಕಾರ್ಯರೂಪಕ್ಕೆ ತರುವುದಕ್ಕೂ ಮೊದಲು ಹಿರಿಯರ ಮಾತನ್ನೂ ಕೇಳಿ. ಶುಭಸಂಖ್ಯೆ: 6
ಮೀನ: ಬೇಳೆಕಾಳು ವ್ಯಾಪಾರಿಗಳು, ಸಿದ್ಧ ಉಡುಪುಗಳ ಮಾರಾಟಗಾರರಿಗೆ ವ್ಯಾಪಾರದಲ್ಲಿ ತುಸು ಪ್ರಮಾಣದಲ್ಲಿ ಲಾಭವಾಗಲಿದೆ. ಶುಭಸಂಖ್ಯೆ: 9