

ಮೇಷ: ಪರಿಸ್ಥಿತಿಗೆ ಸಿಕ್ಕಿ ನೀವೂ ಕೆಲಸ ಮಾಡುವುದಿಲ್ಲ, ಮಾಡುವವರಿಗೂ ಬಿಡುವುದಿಲ್ಲ. ಕೆಂಪು, ನೀಲಿ ಬಣ್ಣ ದೂರವಿಡಿ. ಅದೃಷ್ಟಸಂಖ್ಯೆ: 3
ವೃಷಭ: ನಿಮಗೆ ರಹಸ್ಯವನ್ನು ಮುಚ್ಚಿಡಲು ಆಗದ್ದರಿಂದ ಸ್ನೇಹಿತರು ನಿಮ್ಮ ಬಳಿ ರಹಸ್ಯ ವಿಚಾರವನ್ನು ಹೇಳಲು ಹೆದರುತ್ತಾರೆ. ಅದೃಷ್ಟಸಂಖ್ಯೆ: 4
ಮಿಥುನ: ಸಾಕಷ್ಟು ಪ್ರಯತ್ನಗಳನ್ನು ಮಾಡಿದರೂ ದುರದೃಷ್ಟದಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ. ಅದೃಷ್ಟಸಂಖ್ಯೆ: 1
ಕಟಕ: ಸಂಬಂಧಪಡದ ವಿಚಾರಗಳಲ್ಲಿ ಒತ್ತಡದ ಕಾರಣದಿಂದಾಗಿ ಅನಿವಾರ್ಯವಾಗಿ ಹಸ್ತಕ್ಷೇಪ ಮಾಡಬೇಕಾಗುತ್ತದೆ. ಅದೃಷ್ಟಸಂಖ್ಯೆ: 5
ಸಿಂಹ: ಎಲ್ಲಿ ನಿಮಗೆ ಅತ್ಯಂತ ಮರ್ಯಾದೆ, ಗೌರವ ಇದೆಯೋ ಅಲ್ಲಿಯೇ ಅನಿರೀಕ್ಷಿತ ಅವಮಾನ ಎದುರಾಗುವ ಸಾಧ್ಯತೆ ಇದೆ. ಅದೃಷ್ಟಸಂಖ್ಯೆ: 3
ಕನ್ಯಾ: ಸಂಗಾತಿ ಹಾಗೂ ಮಕ್ಕಳೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುವಿರಿ. ಆದರೆ ಹೆಚ್ಚಿನ ಖರ್ಚು ಅನಿವಾರ್ಯ. ಅದೃಷ್ಟಸಂಖ್ಯೆ: 5
ತುಲಾ: ಕೊನೆಯ ಘಳಿಗೆಯಲ್ಲಿ ದೂರಪ್ರಯಾಣ ರದ್ದಾಗಿ ಇಕ್ಕಟ್ಟಿಗೆ ಸಿಲುಕುವಿರಿ. ಸಿದ್ಧತೆಗಳು ವ್ಯರ್ಥವಾಗಿ ಬೇಸರ. ಅದೃಷ್ಟಸಂಖ್ಯೆ: 2
ವೃಶ್ಚಿಕ: ದುರಭ್ಯಾಸಗಳಿಂದ ದೂರವಿರಿ. ಅವು ನಿಮ್ಮ ಮರ್ಯಾದೆ ಕಳೆದು ಆರೋಗ್ಯ ಹಾಳುಮಾಡುವ ಸಾಧ್ಯತೆಗಳೂ ಹೆಚ್ಚು. ಅದೃಷ್ಟಸಂಖ್ಯೆ: 1
ಧನಸ್ಸು: ಒಪ್ಪಿದ ಕೆಲಸ ಮಾಡದೆ ಅಥವಾ ದುಡ್ಡು, ವಸ್ತು ಇತ್ಯಾದಿ ಕೊಡದ ಕಾರಣ ನಿಮ್ಮ ಮೇಲಿನ ಭರವಸೆ ಕುಗ್ಗಲಿದೆ. ಅದೃಷ್ಟಸಂಖ್ಯೆ: 6
ಮಕರ: ಸ್ವಲ್ಪ ಎಚ್ಚರ ತಪ್ಪಿದರೂ ನಿಮ್ಮ ಅವಕಾಶಗಳು ಇತರರ ಪಾಲಾಗಬಹುದು. ಆದುದರಿಂದ ಈ ಬಗ್ಗೆ ಎಚ್ಚರ ವಹಿಸಿ. ಅದೃಷ್ಟಸಂಖ್ಯೆ: 4
ಕುಂಭ: ತಪ್ಪನ್ನು ಸರಿ ಎಂದು ಒಪ್ಪಿಕೊಳ್ಳುವ ಒತ್ತಾಯ ಬರುತ್ತದೆ. ನೀವು ಅಂದುಕೊಂಡಿದ್ದೆಲ್ಲ ಸತ್ಯವೇ ಆಗಿರಬೇಕೆಂದಿಲ್ಲ. ಅದೃಷ್ಟಸಂಖ್ಯೆ: 9
ಮೀನ: ಅನಾರೋಗ್ಯದ ಅನಿಸಿಕೆ ಇದ್ದರೂ ಬಾಯಿಯಲ್ಲಿ ಮಾತ್ರ ಆರೋಗ್ಯದಿಂದಿದ್ದೇನೆ ಎಂದೇ ಹೇಳಿಬಿಡುತ್ತೀರಿ. ಅದೃಷ್ಟಸಂಖ್ಯೆ: 5